ಶಿವಾನಂದ ಭಾರತಿ ಶ್ರೀಗಳು ಆಗಮನದ 50ನೇ ಸುವರ್ಣ ಮಹೋತ್ಸವ, ಕುಂಭೋತ್ಸವ, ಪ್ರವಚನ, ತುಲಾಭಾರ, ಶ್ರೀಗಳ ತೊಟ್ಟಿಲೋತ್ಸವ
ಲೋಕದರ್ಶನ ವರದಿ
ಹಾರೂಗೇರಿ 17 : ಒಂದಾಗಿ ಬಾಳಿರಿ ವಿಶ್ವಶಾಂತಿ ಪಡೆಯಿರಿ ಎಂಬ ಸಂದೇಶದೊಂದಿಗೆ ಅಕ್ಟೋಬರ್ 22ರಿಂದ 26ರವರೆಗೆ 43ನೇ ವೇದಾಂತ ಪರಿಷತ್ ನಡೆಯಲಿದ್ದು, ದೇಶದ ನಾನಾ ಭಾಗಗಳಿಂದ ಮಹಾತ್ಮರು, ಪೂಜ್ಯರು ಆಗಮಿಸಿ, ಆಶೀರ್ವಚನ ನೀಡಲಿದ್ದಾರೆ.
ಇಂಚಲ-ಹಾರೂಗೇರಿ ಮಠಗಳ ಪೀಠಾಧ್ಯಕ್ಷ ಸದ್ಗುರು ಡಾ.ಶಿವಾನಂದ ಭಾರತಿ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ 5 ದಿನಗಳವರೆಗೆ 43ನೇ ವೇದಾಂತ ಪರಿಷತ್ ನಡೆಯಲಿದೆ.
ಅ.22 ರಂದು ಗುರುವಾರ ಮಧ್ಯಾಹ್ನ 3.15 ಗಂಟೆಗೆ ಶ್ರೀಗಳ ಅಮೃತ ಹಸ್ತದಿಂದ ಚನ್ನವೃಷಭೇಂದ್ರರ ಮೂರ್ತಿಗೆ ಸುವರ್ಣ ಕೀರಿಟ ಧಾರಣೆ. ಅಭಿಷೇಕ ಹಾಗೂ ಮಹಾಪೂಜೆ ನಡೆಯುವುದು. 3.30 ಗಂಟೆಗೆ ಸಕಲ ವಾಧ್ಯ, ಭವ್ಯ ಕುಂಭೋತ್ಸವದೊಂದಿಗೆ ಡಾ.ಶಿವಾನಂದ ಭಾರತಿ ಮಹಾಸ್ವಾಮಿಗಳ ಭವ್ಯ ಸ್ವಾಗತ ಮೆರವಣಿಗೆ ನಡೆಯಲಿದೆ. ಸಂಜೆ 6ಕ್ಕೆ ಶ್ರೀಗಳಿಂದ ವೇದಾಂತ ಪರಿಷತ್ತಿನ ಉದ್ಘಾಟನೆ, ನಂತರ 9.30ರವರೆಗೆ ಮಹಾತ್ಮರಿಂದ ಪ್ರವಚನ, ಕೀರ್ತನೆ, ಮಹಾಪೂಜೆ ನಡೆಯಲಿದೆ.
ಅ.23ರಂದು ಶುಕ್ರವಾರ ಸಂಜೆ 5ರಿಂದ 6ರವರೆಗೆ ಚನ್ನವೃಷಭೇಂದ್ರ ಭಜನಾ ಸಂಘ ಮತ್ತು ಪರಸ್ಥಳದಿಂದ ಬರುವ ಭಜನಾ ಸಂಘ ಹಾಗೂ ನಾನಾ ಮೇಳಗಳಿಂದ ಭಜನಾ ಕಾರ್ಯಕ್ರಮ, ಅ.24 ರಂದು ಶನಿವಾರ ಮಧ್ಯಾಹ್ನ ಜಿಲ್ಲಾಮಟ್ಟದ ಜಾನಪದ ಕಲಾಮೇಳ. ಅ.25 ರಂದು ರವಿವಾರ ಸಂಜೆ ಸಾಂಸ್ಕೃತಿಕ ಮನರಂಜನಾ ಭಕ್ತಿಗೀತೆಗಳ ಕಾರ್ಯಕ್ರಮ.
ಅ.26ರಂದು ಸೋಮವಾರ ಮಧ್ಯಾಹ್ನ 3 ಗಂಟೆಗೆ ಪ್ರಸಿದ್ಧ ಪೈಲವಾನರಿಂದ ರಾಷ್ಟ್ರಮಟ್ಟದ ಜಂಗೀ ನಿಕಾಲಿ ಕುಸ್ತಿಗಳು. ಸಂಜೆ 5ರಿಂದ 6ವರೆಗೆ ಭಾರತಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮ. ಭರತನಾಟ್ಯ, ಮಹಾತ್ಮರ ಪ್ರವಚನದ ನಂತರ ಶಿವಾನಂದ ಭಾರತಿ ಮಹಾಸ್ವಾಮಿಗಳವರ 86ನೇ ಜಯಂತ್ಯೋತ್ಸವ ನಿಮಿತ್ತ ತೊಟ್ಟಿಲೋತ್ಸವ ಕಾರ್ಯಕ್ರಮ. ಆಮೇಲೆ ಕೀರ್ತನೆ, ಮಹಾಪೂಜೆ, ಅನ್ನದಾಸೋಹ ಹಾಗೂ ಬೆಳಗಿನ ಪರ್ಯಂತರ ನಾನಾ ಕಲಾಮೇಳಗಳಿಂದ ಡೊಳ್ಳಿನ ಪದಗಳು ನಡೆಯಲಿವೆ.