ಬಾಗಲಕೋಟೆ

ಅನಗವಾಡಿ ಬಿ.ಎನ್‌. ಖೋತ ಕಾಲೇಜಿಗೆ ಹ್ಯಾಂಡ್ಬಾಲ್ನಲ್ಲಿ ಪ್ರಥಮ, ನೆಟ್ಬಾಲ್ನಲ್ಲಿ ದ್ವಿತೀಯ ಸ್ಥಾನ

ಅನಗವಾಡಿ ಬಿ.ಎನ್‌. ಖೋತ ಕಾಲೇಜಿಗೆ ಹ್ಯಾಂಡ್ಬಾಲ್ನಲ್ಲಿ ಪ್ರಥಮ, ನೆಟ್ಬಾಲ್ನಲ್ಲಿ ದ್ವಿತೀಯ ಸ್ಥಾನ

ಲೋಕದರ್ಶನ ವರದಿ 

          ಬೀಳಗಿ 17 ; ಬಾಗಲಕೋಟ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ 2026-27ನೇ ಸಾಲಿನ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಬಿ.ಎನ್‌.ಖೋತ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಅನಗವಾಡಿಯ ವಿದ್ಯಾರ್ಥಿಗಳು ಅಮೋಘ ಸಾಧನೆ ಗೈದಿದ್ದಾರೆ.

      ಜಮಖಂಡಿಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಹ್ಯಾಂಡ್‌ಬಾಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಕಾಲೇಜಿಗೆ ಹಾಗೂ ತಾಲೂಕಿಗೆ ಹಿರಿಮೆಯನ್ನು ಹೆಚ್ಚಿಸಿರುತ್ತಾರೆ. ವಿದ್ಯಾರ್ಥಿನಿಯರು ನೆಟ್‌ಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. 

       ಸಾಧಕ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಬಸವರಾಜ ಖೋತ ಆಡಳಿತ ಮಂಡಳಿಯ ಸದಸ್ಯರಾದ ವಿಕ್ರಮ ಖೋತ, ವಿಜಯ ಖೋತ, ಪ್ರಾಚಾರ್ಯ ಸುರೇಶ ಕಾಡೇಶನವರ ಮತ್ತು ದೈಹಿಕ ಶಿಕ್ಷಣದ ನಿರ್ದೇಶಕ ಎಚ್‌. ಎಮ್‌. ಹೂಗಾರ ಹಾಗೂ ದೈಹಿಕ ಶಿಕ್ಷಕ ಆರೀಪ್ ದಿಗ್ಗೇವಾಡಿ, ಸಂಗಮೇಶ ಅಂಬಿಗೇರ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕ್ರೀಡಾಪಟುಗಳಿಗೆ ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಿದ್ದಾರೆ. 


ಸುದ್ದಿ ಓದಿ