ಬಾಗಲಕೋಟೆ

ಇಂದು ಹೆಂಗೂಸು ಕವನ ಸಂಕಲನ ಲೋಕಾರೆ​‍್ಣ ಸಮಾರಂಭ

ಇಂದು ಹೆಂಗೂಸು ಕವನ ಸಂಕಲನ ಲೋಕಾರೆ​‍್ಣ ಸಮಾರಂಭ


ಬೀಳಗಿ  17 : ತಾಲೂಕಿನ ನಾಗರಾಳ ಗ್ರಾಮದ ಸಾಹಿತಿ ಹಾಗೂ  ಆದರ್ಶ ಶಿಕ್ಷಕ ಚಿದಾನಂದ ಜಡಿಮಠ ಅವರ ‘ಹೆಂಗೂಸು’ ಕವನ ಸಂಕಲನದ ಲೋಕಾರೆ​‍್ಣ ಹಾಗೂ ವಿವಿಧ ಕ್ಷೇತ್ರಗಳ ಐವರು ಸಾಧಕರಿಗೆ ‘ನಮ್ಮೂರ ಸಿರಿ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅ.18ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ನಾಗರಾಳದ ಬನಶಂಕರಿ ದೇವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಬೀಳಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗುರುರಾಜ ಲೂತಿ ತಿಳಿಸಿದರು.


ಪಟ್ಟಣದ ಜಿಎಲ್ಬಿಸಿ  ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾತ್ರಿ ಪ್ರಕಾಶನ, ದಿಗಂಬರೇಶ್ವರ ಯುವಕ ಮಂಡಲ ನಾಗರಾಳ ಹಾಗೂ ಕನ್ನಡ ಸಾಹಿತ್ಯ ಪರಿಷತ್‌.ಕನ್ನಡ ಜಾನಪದ ಪರಿಷತ್,ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾಗೂ ವಿವಿಧ ಕನ್ನಡ ಪರ  ಸಂಘಟನೆಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.


ಕೊಣ್ಣೂರು ಹೊರಗಿನಮಠ ಹಾಗೂ ಸಿಂದಗಿ ಸಾರಂಗಮಠದ ಡಾ. ವಿಶ್ವಪ್ರಭುದೇವ ಶಿವಾಚಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ನಾಗರಾಳದ ಶ್ರೀ ದಿಗಂಬರೇಶ್ವರ ಮಠದ ಪೂಜ್ಯರಾದ ಶೇಷಪ್ಪಯ್ಯ ಮಹಾಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. ಜನಪದ ವಿದ್ವಾಂಸ ಡಾ. ಶ್ರೀರಾಮ ಇಟ್ಟಣ್ಣವರ ಉದ್ಘಾಟಿಸಿ ಕೃತಿ ಲೋಕಾರೆ​‍್ಣ ಮಾಡಲಿದ್ದಾರೆ.


ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಶ್ರೀಶೈಲ ಜತ್ತಿ ಅಧ್ಯಕ್ಷತೆ ವಹಿಸಲಿದ್ದು, ಬಸವನಬಾಗೇವಾಡಿ ತಹಶೀಲ್ದಾರ್ ವೈ.ಎಸ್‌. ಸೋಮನಕಟ್ಟಿ ಕೃತಿ ಪರಿಚಯ ಮಾಡಿಕೊಡಲಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಮಹಾದೇವ ಬಸರಕೋಡ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ. 


ಸುದ್ದಿ ಓದಿ