ಬಾಗಲಕೋಟೆ

ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ: ಶಾಸಕ ಸಿದ್ದು ಸವದಿ

ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ: ಶಾಸಕ ಸಿದ್ದು ಸವದಿ

ಮಹಾಲಿಂಗಪುರ 13 :  ನಗರದ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಗ್ರಾಮೀಣ ಪ್ರದೇಶಗಳ ಸ್ವಚ್ಛತೆ ಮತ್ತು ನೀರುಗಾಲುವೆಗಳ ಸುಧಾರಣೆಗೆ ಒತ್ತು ನೀಡುವ ನಿಟ್ಟಿನಲ್ಲಿ ಶಾಸಕ ಸಿದ್ದು ಸವದಿ ಅವರು ಮಹಾಲಿಂಗಪುರದಲ್ಲಿ ವಾಸವಿ ಕಲ್ಯಾಣ ಮಂಟಪ ರಸ್ತೆ ಡಾಂಬರೀಕರಣ ಹಾಗೂ ಮದಬಾವಿ ಗ್ರಾಮದಲ್ಲಿ ಕಾಲುವೆ ಹೂಳೆತ್ತುವ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಮಹಾಲಿಂಗಪುರದ ಸ್ಥಳೀಯ ವಾಸವಿ ಕಲ್ಯಾಣ ಮಂಟಪ ರಸ್ತೆಯನ್ನು 23 ಲಕ್ಷ ವೆಚ್ಚದಲ್ಲಿ ಡಾಂಬರೀಕರಣಗೊಳಿಸುವ ಕಾಮಗಾರಿಗೆ ಶಾಸಕ ಸಿದ್ದು ಸವದಿ ಚಾಲನೆ ನೀಡಿದರು. ರಸ್ತೆ ಅಭಿವೃದ್ಧಿಯಿಂದ ಸ್ಥಳೀಯ ನಿವಾಸಿಗಳು, ಕಲ್ಯಾಣ ಮಂಟಪಕ್ಕೆ ಆಗಮಿಸುವ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಅನುಕೂಲವಾಗಲಿದೆ ಎಂಬ ನೀರೀಕ್ಷೆಯಿದೆ.ಇದಕ್ಕೂ ಮುನ್ನ ಮದಬಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಅಜೀವಿಕ (ವಿಬಿ-ಜಿ ರಾಮ್ ಜಿ) ಕಾಯ್ದೆಹಿ2025ರ ಅಡಿಯಲ್ಲಿ ಎರಡು ಕಾಲುವೆ ಹೂಳೆತ್ತುವ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಯಿತು. ಸೀಮಿಲಕ್ಕವ್ವ ದೇವಸ್ಥಾನದಿಂದ ಮಾರಾಪುರ ಹದ್ದೆಯವರೆಗೆ ?4 ಲಕ್ಷ ವೆಚ್ಚದಲ್ಲಿ ಹಾಗೂ ಬಸವೇಶ್ವರ ದೇವಸ್ಥಾನದಿಂದ ಶಂಕರ ಉರಬಿನ್ನವರ ಅವರ ಮನೆಯವರೆಗೆ ?2 ಲಕ್ಷ ವೆಚ್ಚದಲ್ಲಿ ಕಾಲುವೆ ಹೂಳೆತ್ತುವ ಕಾಮಗಾರಿಗಳು ನಡೆಯಲಿವೆ. 

 ಗ್ರಾಮೀಣ ಅಭಿವೃದ್ಧಿಗೆ ಆದ್ಯತೆ: ಶಾಸಕ ಸಿದ್ದು ಸವದಿ 

 ಮದಬಾವಿ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುವುದು.  

ಗ್ರಾಮಸ್ಥರ ಅಗತ್ಯಗಳಿಗೆ ಅನುಗುಣವಾಗಿ ಮೂಲಸೌಕರ್ಯ ಸುಧಾರಣೆ ಕೈಗೊಳ್ಳುವುದು ಗ್ರಾಮಾಭಿವೃದ್ಧಿಯ ದೃಷ್ಟಿಯಿಂದ ಅಗತ್ಯವಾಗಿದೆ. 

ಹುಚ್ಚೇಶ ವಡ್ಡರ ಅವರಿಗೆ ಸನ್ಮಾನ 

ಇದೇ ಸಂದರ್ಭದಲ್ಲಿ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ವತಿಯಿಂದ ನೀಡಲಾಗುವ ‘ಎಮಿನೆಂಟ್ ಇಂಜಿನಿಯರ್‌’ ಪ್ರಶಸ್ತಿ ಪುರಸ್ಕೃತ ಹುಚ್ಚೇಶ ವಡ್ಡರ ಅವರನ್ನು ಶಾಸಕ ಸಿದ್ದು ಸವದಿ ಸನ್ಮಾನಿಸಿ ಗೌರವಿಸಿದರು. ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸಾಧನೆಗೈದು ಪ್ರಶಸ್ತಿಗೆ ಭಾಜನರಾದ ವಡ್ಡರ ಅವರನ್ನು ಅಭಿನಂದಿಸಿ, ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು. 

ಕಾರ್ಯಕ್ರಮದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಶಂಕರಗೌಡ ಪಾಟೀಲ, ಯುವ ಮೋರ್ಚಾ ಅಧ್ಯಕ್ಷ ಮಲ್ಲು ದಲಾಲ, ಮುಖಂಡರಾದ ವೆಂಕಣ್ಣ ಗುಂಡಾ, ಜಿ.ಎಸ್‌. ಗೊಂಬಿ, ಶಿವಾನಂದ ಅಂಗಡಿ, ರಾಜು ಕೋಳಿಗುಡ್ಡ, ಪ್ರಶಾಂತ ಮುಖ್ಯನ್ನವರ, ಚನ್ನಬಸು ಯರಗಟ್ಟಿ, ಗುರು ಜಂಬಿಗಿ, ಶಿವನಗೌಡ ಪಾಟೀಲ, ಶೇಖರ ಮಗದುಮ್, ವೀರೇಶ ಮುಂಡಗನೂರ, ಬಸವರಾಜ ಮಡಿವಾಳ ಹಾಗೂ ರವಿ ಗಿರಿಸಾಗರ ಉಪಸ್ಥಿತರಿದ್ದರು. ಸಿದ್ದಲಿಂಗ ಮಸಗುಪ್ಪಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿದ್ರಾಮೇಶ ಕುಂದರಗಿಮಠ, ಅಭಿಯಂತರ ರಾಜು ಗಾಡಿವಡ್ಡರ, ಸುನಂದ ಕಿಶೋರಿ, ತಯಬ್ ಮುಲ್ಲಾ ಸೇರಿದಂತೆ ಗ್ರಾಮಸ್ಥರು ಹಾಗೂ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ