ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆ; ಉತ್ಸವಕ್ಕೆ ಚಾಲನೆ
ದಾಂಡೇಲಿ 8: ದಾಂಡೇಲಿಯಲ್ಲಿ ನವರಾತ್ರಿ ಉತ್ಸವ ಹಳೆ ನಗರಸಭಾ ಮೈದಾನದಲ್ಲಿ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಸಮಿತಿಯ ಗೌರವಾಧ್ಯಕ್ಷ ಹಾಗೂ ಮಾಜಿ ಶಾಸಕ ಸುನೀಲ ಹೆಗಡೆ ದಂಪತಿಗಳಿಂದ ಪೂಜೆ ನೇರವೇರಿಸುವ ಮೂಲಕ ಭಾನುವಾರ ಚಾಲನೆ ನೀಡಿದರು. ನವರಾತ್ರಿ ಸಂದರ್ಭದಲ್ಲಿ ನಡೆಯುವ ಸಾಂಸ್ಕ್ರತಿಕ ಕಾರ್ಯಕ್ರಮಗಳು ವಿವಿಧ ಸ್ಪರ್ಧೆಗಳು, ಹಾಗೂ ಸ್ಥಳೀಯ ಹಾಗೂ ಆಹ್ವಾನಿತ ಕಲಾವಿದರಿಂದ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಉತ್ಸವ ಸಮಿತಿಯ ಪ್ರಮುಖರಾದ ಬಾಲಮಣಿ, ನರೇಂದ್ರ ಚವ್ಹಾಣ, ಗುರುಮಠಪತಿ, ಬುಧುವಂತ ಗೌಡಾ, ದಶರಥ ಬಂಡಿವಡ್ಡರ, ಸಾವಿತ್ರಿ ಬಡಿಗೇರ ಉಮಾ ಹನುಮಸಾಗರ ಪ್ರಶಾಂತ ಬಸ್ರುತೇಕರ್ ಮುಂತಾದವರು ಇದ್ದರು.