ಇಂಡಿ

ಕನಕದಾಸರ, ಕೃಷ್ಣನಂತೆ ನಮ್ಮ ಜೀವನದಲ್ಲಿ ಪ್ರೀತಿ ಇರಬೇಕು ಬಿ.ಡಿ. ಪಾಟೀಲ

ಕನಕದಾಸರ, ಕೃಷ್ಣನಂತೆ ನಮ್ಮ ಜೀವನದಲ್ಲಿ ಪ್ರೀತಿ ಇರಬೇಕು ಬಿ.ಡಿ. ಪಾಟೀಲ

 ಇಂಡಿ 29: 16ನೇ ಶತಮಾನದ ಶ್ರೇಷ್ಠ ಕವಿ, ದಾರ್ಶನಿಕ, ಸಂತ ಮತ್ತು ಸಮಾಜ ಸುಧಾರಕರಾದ ಕನಕದಾಸರು ಹರಿದಾಸ ಸಾಹಿತ್ಯ ಪರಂಪರೆಯ ಪ್ರಮುಖ ಕೊಡುಗೆಯಾಗಿದ್ದರು, ಸರಳ ಕನ್ನಡದಲ್ಲಿ ಕೀರ್ತನೆಗಳು, ಮುಂಡಿಗೆಗಳು ಮತ್ತು ಕೃತಿಗಳ ಮೂಲಕ ಭಕ್ತಿ ಹಾಗೂ ಸಾಮಾಜಿಕ ಸಮಾನತೆಯ ಸಂದೇಶವನ್ನು ಸಾರಿದ ಮಹಾನ ಗುರು ಇವರು ಎಂದು ಜೆಡಿಎಸ್ ಮುಖಂಡರು ಬಿ. ಡಿ. ಪಾಟೀಲ ಮಾತನಾಡಿದರು. ಇಂಡಿ ತಾಲೂಕಿನ ಅಂಜುಟಗಿ ಗ್ರಾಮದ ಕನಕದಾಸ ಸರ್ಕಲ ಆವರಣದಲ್ಲಿ  ಕನಕದಾಸರ ಜಯಂತಿ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಕನಕದಾಸರ ಅಚಲ ಭಕ್ತಿಗೆ ಮೆಚ್ಚಿದ ಶ್ರೀಕೃಷ್ಣನು ದೇವಸ್ಥಾನದ ಹಿಂಭಾಗದ ಗೋಡೆಯನ್ನು ಒಡೆದು, ಸಣ್ಣ ರಂಧ್ರ ಮೂಡಿ, ಆ ಕಡೆಗೆ ತಿರುಗಿ ದರ್ಶನ ನೀಡಿದನು ಎಂಬ ಪ್ರತೀತಿ ಇದೆ, ಈ ಸ್ಥಳವೇ ಇಂದು ಉಡುಪಿಯಲ್ಲಿ "ಕನಕನ ಕಿಂಡಿ" ಎಂದು ಪ್ರಸಿದ್ಧವಾಗಿದೆ, ಅದೆ ತರಣಾಗಿ ನಾವೆಲ್ಲರೂ ಒಂದೇ, ನಮ್ಮ ನಡೆ, ನುಡಿ, ಚಲನ, ವಲನ ಸ್ವಚ್ಛತೆ ಇಂದ ಇಟ್ಟುಕೊಂದಾಗ ನಮ್ಮ ದೇಶ ಸುಧಾರಣೆ ಸಾಧ್ಯ ಎಂದರು. ಈ ಸಂದರ್ಭದಲ್ಲಿ ಪ್ರಭುಗೌಡ ಡೆಂಗಿ, ಸಂತೋಷ ಹೂಗಾರ ಮಾತನಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು, ದಿವ್ಯ ಸಾನಿದ್ಯಾ ಗುಂಡು ಮುತ್ಯಾ, ರಾಜಕುಮಾರ ಸಗಾಯಿ, ಪಿ. ಕೆ. ಅಲಬಗೊಂಡ, ಬಸು ಹೂಗಾರ, ರಮೇಶ ಪ್ರಸಾದ, ಸಾಯಿಕುಮಾರ್ ಹೂಗಾರ, ಶುಭಾಸ ಅಚ್ಚಿಗಾರ, ಬಿಜೆಪಿ ತಾಲೂಕು ಅಧ್ಯಕ್ಷರು  ಹಾಗೂ ಎಲ್ಲ ಅಂಜುಟಗಿ ಗ್ರಾಮಸ್ಥರು ಉಪಸ್ಥಿತರಿದ್ದರು. 


ಸುದ್ದಿ ಓದಿ