ಬೆಳಗಾವಿ

ಅಖಿಲ ಬ್ರಾಹ್ಮಣ ಸಮಾಜ ಬೆಳಗಾವಿ : ಉದ್ಯಮಶೀಲತಾ ಉಚಿತ ಶಿಬಿರ

ಅಖಿಲ ಬ್ರಾಹ್ಮಣ ಸಮಾಜ ಬೆಳಗಾವಿ : ಉದ್ಯಮಶೀಲತಾ ಉಚಿತ ಶಿಬಿರ

ಬೆಳಗಾವಿ 29 : ಅಖಿಲ ಬ್ರಾಹ್ಮಣ ಸಮಾಜ ಬೆಳಗಾವಿ ಆಶ್ರಯದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಹಕಾರದೊಂದಿಗೆ  ಗುರು ರಾಘವೇಂದ್ರ ಚರಿಟೆಬಲ ಟ್ರಸ್ಟ್‌ ಚಿಂತಾಮಣಿಯವರು ಇದೇ ದಿ. 26  ರಿಂದ  ದಿ. 28 ರ ವರೆಗೆ ಜರುಗಿತು. ಖ್ಯಾತ ತರಬೇತಿದಾರರಾದ ಪ್ರೇಮಾ ನರಸಿಂಹ ಉದ್ಯಮಶೀಲತಾ ಉಚಿತ ಶಿಬಿರವನ್ನು ನಡೆಯಿಸಿಕೊಟ್ಟರು.   

ಅಧ್ಯಕ್ಷತೆಯನ್ನು ಖ್ಯಾತ ನ್ಯಾಯವಾದಿಗಳು ಹಾಗೂ ಬೆಳಗಾವಿ ಬ್ರಾಹ್ಮಣ ಸಮಾಜದ ಅಧ್ಯಕ್ಷ ಎಸ್‌. ಎಮ್‌. ಕುಲಕರ್ಣಿ ವಹಿಸಿ ಸಲಹೆ ಸೂಚನೆಗಳನ್ನು ನೀಡಿದರು. ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ಬೆಳಗಾವಿ ಬ್ರಾಹ್ಮಣ ಸಮಾಜದ ಮಹಿಳಾ ಪ್ರತಿನಿಧಿ ಪ್ರಿಯಾ ಪುರಾಣಿಕ ಈ ಕಾರ್ಯಕ್ರಮ ಕುರಿತು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಡಿ.ಐ.ಸಿ. ಬೆಳಗಾವಿಯ ಜಂಟಿ ನಿರ್ದೇಶಕ ಸತ್ಯನಾರಾಯಣ ಭಟ್ ಶಿಬಿರಾರ್ಥಿಗಳಿಗೆ ಸರಕಾರದ ಯೋಜನೆಗಳು ಹಾಗೂ ಸವಲತ್ತುಗಳ ಬಗ್ಗೆ ವಿವರಿಸಿದರು. ಬೆಳಗಾವಿ ಬ್ರಾಹ್ಮಣ ಸಮಾಜದ ಸಹ ಕಾರ್ಯದರ್ಶಿ ಶೀರೀಷ ಕಾನೇಟಕರ ಉದ್ಯಮಿಯಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಶಿಬಿರಾರ್ಥಿಗಳಿಗೆ "ಭಾಗವಹಿಸುವಿಕೆಯ ಪ್ರಮಾಣ ಪತ್ರ " ವಿತರಿಸಲಾಯಿತು. ಸುಶೀಲಾ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. 


ಸುದ್ದಿ ಓದಿ