ಯರಗಟ್ಟಿ

ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರು ಸಾವು

ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರು ಸಾವು

ಯರಗಟ್ಟಿ 29: ಸಮೀಪದ ಸೊಪ್ಪಡ್ಲ ಗ್ರಾಮದ ಬೆಳಗಾವಿ ಬಾಗಲಕೋಟೆ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ಮೃತಪಟ್ಟಿದ್ದಾರೆ. ಸೊಪ್ಪಡ್ಲ ಗ್ರಾಮದ ನಿವಾಸಿಗಳಾದ ಮಹಾಂತೇಶ ಬಸೆಟ್ಟೆಪ್ಪ ಗಲಗಲಿ(60) ಹಾಗೂಫಕ್ಕೀರ​‍್ಪ ಬಸವರಾಜ ಕಂಬಾರ(47) ಮೃತಪಟ್ಟವರು. ಈವರು ಯರಗಟ್ಟಿಯಿಂದ ಶನಿವಾರ ಸಂತೆ ಮುಗಿಸಿ ಸೊಪ್ಪಡ್ಲ ಗ್ರಾಮಕ್ಕೆ ಹೊರಡುವಾಗ ಕೆವಲ 500 ಮೀಟರ್ ಅಂತರದಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸವಾರು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮುರಗೋಡ ಪೊಲೀಸ ಠಾಣೆಯ ಪಿಎ ಎಲ್ ಬಿ ಮಾಳಿ, ಎಎ ಬಿ ಕೆ ರಂಗಣ್ಣವರ ಭೇಟೀನೀಡಿ ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ.  




ಸುದ್ದಿ ಓದಿ