ಯರಗಟ್ಟಿ

ಕನಕದಾಸರ ತತ್ವಾದರ್ಶಗಳು ಸಮಾಜಕ್ಕೆ ದಾರೀದೀಪ: ಅಯ್ಯನಗೌಡರ

ಕನಕದಾಸರ ತತ್ವಾದರ್ಶಗಳು ಸಮಾಜಕ್ಕೆ ದಾರೀದೀಪ: ಅಯ್ಯನಗೌಡರ

ಲೋಕದರ್ಶನ ವರದಿ 

           ಯರಗಟ್ಟಿ 27 : ತಾಲೂಕು ಆಡಳಿತ ಹಾಗೂ ಕುರುಬ ಸಮಾಜದ ಸಂಯುಕ್ತ ಆಶ್ರಯದಲ್ಲಿ ಭಕ್ತ ಶ್ರೇಷ್ಠ ಸಂತ ಕನಕದಾಸರ ಜಯಂತಿಯನ್ನು ತಹಸೀಲ್ದಾರ ಕಚೇರಿ ಆವರಣದಲ್ಲಿ ಕನಕದಾಸರ ಭಾವಚಿತ್ರದಕ್ಕೆ ಪೂಜೆ ಸಲ್ಲಿಸಿದರು. ನಂತರ ಪಟ್ಟಣದ ಸಂಗೋಳ್ಳಿ ರಾಯಣ್ಣ ವೃತ್ತದಿಂದ ಅದ್ದೂರಿ ಮೆರವಣಿಗೆಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಆಚರಿಸಲಾಯಿತು. 

              ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ತಾ. ಪಂ. ಇಓ ಬಸವರಾಜ ಅಯ್ಯನಗೌಡರ ಮಾತನಾಡಿ 250 ದಾಸರಲ್ಲಿ ಕನಕದಾಸರು ಒಬ್ಬರು ಎಂದು ಹೇಳಿದರು.ಕನಕದಾಸರು ಸಮಾನತೆ, ಭಕ್ತಿ ಹಾಗೂ ಮಾನವೀಯತೆಯ ಸಂದೇಶ ಸಾರಿದ ಮಹಾನ್ ದಾಸಶ್ರೇಷ್ಠರು. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. 

ಕುರುಬ ಸಮಾಜ ತಾಲೂಕಾಧ್ಯಕ್ಷ ಶಂಕರ ಇಟ್ನಾಳ ಮಾತನಾಡಿ  ಕನಕದಾಸರ ಜೀವನ ಸಾಹಿತ್ಯ ಕೀರ್ತನೆಗಳು ಹಾಗೂ ಸಾಮಾಜಿಕ ಸುಧಾರಣೆಯ ವಿಚಾರಧಾರೆಗಳು ಇಂದಿನ ಸಮಾಜಕ್ಕೂ ಮಾರ್ಗದರ್ಶಿಯಾಗಿವೆ ಎಂದು ತಿಳಿಸಿದರು. 

             ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪ ತಹಸೀಲ್ದಾರ ಎಸ್‌. ಬಿ. ಕುಲಕರ್ಣಿ ವಹಿಸಿ ಮಾತನಾಡಿ ಭಕ್ತ ಕನಕದಾಸರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಹಾಲುಮತದ ಸಮಾಜದವರು ಗಣನೀಯ ಸೇವೆ ಸಲ್ಲಿಸಿದ ಮಹನೀಯರನ್ನು ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ಮತ್ತು ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. 

               ಈ ಸಂದರ್ಭದಲ್ಲಿ ಪ. ಪಂ. ಮುಖ್ಯಾಧಿಕಾರಿ ಮಹೇಶ ಭಜಂತ್ರಿ, ಹೇಸ್ಕಾಂ ಅಧಿಕಾರಿ ಮಹಾಂತೇಶ ಯರಗಟ್ಟಿ, ಪಶು ವೈದ್ಯಾಧಿಕಾರಿ ಎಮ್ ವ್ಹಿ ಪಾಟೀಲ, ಪ. ಸದಸ್ಯರಾದ ನಿಖಿಲ ಪಾಟೀಲ ಹನಮಂತ ಹಾರುಗೋಪ್ಪ, ಗ್ಯಾರಂಟಿ ಯೋಜನೆ ಅಧ್ಯಕ್ಷ ಗೋಪಾಲ ದಳವಾಯಿ, ತಾಲೂಕಾ ಯುವ ಘಟಕದ ಅಧ್ಯಕ್ಷ ಮಹಾದೇವ ಮುರಗೋಡ, ಮಾಜಿ ತಾ. ಪಂ. ಸದಸ್ಯ ವಿಠ್ಠಲಗೌಡ ದೇವರಡ್ಡಿ, ಶಿವಾನಂದ ಕರಿಗೊಣ್ಣವರ,

              ಮಂಜುನಾಥ ತಡಸಲೂರ, ಮುದಕಪ್ಪ ತಡಸಲೂರ, ಫಕ್ಕೀರ​‍್ಪ ಕಿಲಾರಿ, ಬಸಪ್ಪ ದಿಡಗಣ್ಣವರ, ಫಕ್ಕೀರ​‍್ಪ ಹದ್ದಣ್ಣವರ, ಪುಂಡಲೀಕ ಮೇಟಿ, ಲಕ್ಷ್ಮಣ ದಳವಾಯಿ, ಪ್ರಕಾಶ ವಾಲಿ, ಪ್ರಕಾಶ ಸುಣಧೋಳಿ, ಆರ್‌. ಕೆ. ಪಟಾತ, ಪಡೆಪ್ಪ ನರಿ, ಯಲ್ಲಪ್ಪ ನರಿ, ಬಸವರಾಜ ದಳವಾಯಿ, ಸುಭಾಷ ಐದ್ದುಡಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. 


ಸುದ್ದಿ ಓದಿ