ಅರಳಹಟ್ಟಿ ಗ್ರಾಮದಲ್ಲಿ ಪ್ರಜಾಸೇವಾ ಆಂದೋಲನ ಸಭೆ: 50 ಅರ್ಜಿಗಳ ವಿಲೇವಾರಿ, ಕೆರೆ ಒತ್ತುವರಿ ತೆರವು ಹಾಗೂ ಅಕ್ರಮ ನೀರು ಬಳಕೆಗೆ ಕಡಿವಾಣ ಹಾಕಲು ಆಗ್ರಹ
ಸಂಬರಗಿ 28: ಅರಳಹಟ್ಟಿ ಗ್ರಾಮದಲ್ಲಿ ಜಾಗ ಅತಿಕ್ರಮಣ ತಡೆ ಗಟಿಸಿ ಜಾಗ್ ತೇರವ್ ಗೊಳಿಸಬೇಕು ಗ್ರಾಮದ ಸಂಪರ್ಕ ರಸ್ತೆ ದುರಸ್ತಿ ಗೊಳಿಸಬೇಕು , ಅನಧಿಕೃತ ಕೆರೆಯಿಂದ ನೀರು ತೆಗೆಯುವುದನ್ನು ನಿಲ್ಲಿಸಿ, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಸಿ , ವಿಷಯದ ಬಗ್ಗೆ ಅಧಿಕಾರಿ ಹಾಗೂ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಬಸ್ ಗೌಡ ಪಾಟೀಲ್ ನಡುವೆ ಮಾತಿನ ಚಕಮಕಿ ನಡೆಯಿತು.
ಅರಳಹಟ್ಟಿ ಗ್ರಾಮದಲ್ಲಿ ನಡೆದ ಪ್ರಜಾ ಸೇವಾ ಆಂದೋಲನ ಸಭೆಯಲ್ಲಿ ಹಲವು ವಿಷಯಗಳ ಕುರಿತು ಪ್ರಶ್ನೆಗಳನ್ನು ಎತ್ತಿದ್ದ ನಂತರ ಮಾತಿನ ಚಕಮಕಿ ನಡಿತು ತಾಲೂಕು ಆಡಳಿತವು ವಿವರವಾದ ಉತ್ತರಗಳನ್ನು ನೀಡಿತು ನಂತರ ವಾತಾವರಣ ತಿಳಿಗೊಳಿತು, ತಾಲೂಕು ಆಡಳಿತವು ಹಲವು ಸಮಸ್ಯೆಗಳನ್ನು ಪರಿಹರಿಸಬೇಕೆಂದು ಒತ್ತಾಯಿಸಿದರು.
ತೀವ್ರ ನೀರಿನ ಕೊರತೆಯಿದೆ. ಕೆರೆಯ ನೀರನ್ನು ಕುಡಿಯಲು ಮಾತ್ರ ಬಳಸಬೇಕೆಂದು ಸರ್ಕಾರ ಆದೇಶಿಸಿದ್ದರೂ, ಸಹ ಒಬ್ಬ ವ್ಯಕ್ತಿ ಕೃಷಿಗೆ ನೀರು ಪೂರೈಕೆ ಮಾಡುತ್ತಿದ್ದಾರೆ ಅಕ್ರಮವಾಗಿ ನೀರು ತೆಗೆಯುತ್ತಿದ್ದಾನೆ. ಅವನ ಮೇಲೆ ಕಾನೂನು ಕ್ರಮ ಕೈಗೊಂಡು ನೀರು ಸ್ಥಗಿತ ಗೊಳಿಸಬೇಕೆಂದು ಒತ್ತಾಯಿಸಿದರು.
ಈ ಸಮಯದಲ್ಲಿ, ಗ್ರೇಡ್ 2 ತಹಶೀಲ್ದಾರ್ ಮಹಾದೇವ ಬಿರಾದಾರ್, ಮಾತನಾಡಿ ಪ್ರಜಾ ಸೇವಾ ಆಂದೋಲನ ಸಮಿತಿ ಎಂದರೆ ಸರ್ಕಾರವು ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮ ಸಮಸ್ಯೆಗಳನ್ನು ಪರಿಹರಿಸುತ್ತದೆ. ಜಾಗದಲ್ಲಿ ನಿರ್ಧಾರಗಳನ್ನು ನೀಡುವುದು, ಅದಕ್ಕಾಗಿ ನೀವು ನಿಮ್ಮ ಸಮಸ್ಯೆಗಳನ್ನು ನಿರ್ಭಯವಾಗಿ ಎತ್ತಬಹುದು, ಸಮಸ್ಯೆಗಳು ತಾಲೂಕಾಗಿದ್ದರೆ, ಜಾಗದಲ್ಲಿ ತೀರ್ಮಾನ ಜಿಲ್ಲೆ ಅಥವಾ ರಾಜ್ಯದದ್ದಾಗಿದ್ದರೆ, ಸ್ವಲ್ಪ ತಡವಾಗುತ್ತದೆ, ಆದರೆ ಸರ್ಕಾರದಿಂದ ನಿಮಗೆ ನ್ಯಾಯ ಸಿಗುವುದು ಖಚಿತ.