ಬೆಳಗಾವಿ

ಸರ್ಕಾರದ ಎಲ್ಲ ಯೋಜನೆಗಳು ಕಟ್ ಕಡೆಯ ಮನುಷ್ಯನಿಗೆ ಸಿಗಲು ಸಂಕಲ್ಪ : ಬಾಬಾಸಾಹೇಬ ಪಾಟೀಲ

ಸರ್ಕಾರದ ಎಲ್ಲ ಯೋಜನೆಗಳು ಕಟ್ ಕಡೆಯ ಮನುಷ್ಯನಿಗೆ ಸಿಗಲು ಸಂಕಲ್ಪ : ಬಾಬಾಸಾಹೇಬ ಪಾಟೀಲ
A commitment to ensure that all government schemes reach the person at the very end of the line: Bab

          ನೇಸರಗಿ  28: ಸರ್ಕಾರದಿಂದ ದೊರೆಯುವ ಎಲ್ಲ ಯೋಜನೆಗಳು ಕಟ್ಟಕಡೆಯ ಮನುಷ್ಯನಿಗೆ ಸಿಗಬೇಕು, ಸಿಕ್ಕು ವಂಚಿತರಾದ ಜನರು ಅಧಿಕಾರಿಗಳಿಗೆ ಅಗತ್ಯ ಧಾಖಲೆ ಒದಗಿಸಿ ಮರಳಿ ಆ ಯೋಜನೆಯ ಸದುಪಯೋಗ ಪಡೆಯಲು ಪ್ರಜಾ ಸೇವೆ ಯೋಜನೆಯನ್ನು ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ ಅವರು ವಿನೂತನ ಪಂಚಾಯತ ಮಟ್ಟದಲ್ಲಿ ಜನರ ಸಮಸ್ಯೆ ಬಗೆಹರಿಸಲು ಯೋಜನೆ ಜಾರಿಗೆ ತಂದಿದ್ದು ಅದರ ಸದುಪಯೋಗ ಪಡೆಯಿರಿ ಎಂದು ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.  

              ಅವರು ಸಮೀಪದ ನಾಗನೂರು    ಗ್ರಾಮದಲ್ಲಿ ಶನಿವಾರದಂದು ಆಯೋಜನೆ ಮಾಡಲಾಗಿದ್ದ ಪ್ರಜಾಸೇವೆ ಆಂದೋಲನ ಕಾರ್ಯಕ್ರಮ ಉದ್ಘಾಟನೆ ಮತ್ತು ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿ ವೃದ್ದಾಪ್ಯ ವೇತನ, ರೇಷನ್ ಕಾರ್ಡ,ಕೃಷಿ ಇಲಾಖೆ, ರೈತರ ಕರೆಂಟ್ ಸಮಸ್ಯ, ವಿಧವಾ ವೇತನ, ಪಂಚಾಯತ ಸೇವೆ, ಸಾರಿಗೆ ಸೇವೆ, ಅರೋಗ್ಯ ಸೇವೆ, ಪೊಲೀಸ್ ವ್ಯವಸ್ಥೆ, ಕಂದಾಯ ಸೇವೆ,ಗೃಹಲಕ್ಷ್ಮಿ, ಭಾಗ್ಯಲಕ್ಷಿ  ಇನ್ನೂ ಅನೇಕ ಸಾರ್ವಜನಿಕ ಸೇವೆಗಳು ಅನೇಕ ಜನರ ಸವಲತ್ತುಗಳು ಸ್ಥಗಿತಗೊಂಡಿದ್ದು ಧಾಖಲಾತಿ ತೊಂದರೆಯಿಂದ ಅಗತ್ಯ ಧಾಖಲಾತಿ ನೀಡಿ 7                     ದಿನಗಳಲ್ಲಿ ಅಧಿಕಾರಿಗಳಿಂದ ತಮ್ಮ ಕೆಲಸದ ಉಪಯೋಗ ತೆಗೆದುಕೊಳ್ಳಿ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.    ಬೈಲಹೊಂಗಲ ತಹಶೀಲ್ದಾರ ಸದಾಶಿವ ಮಕ್ಕೋಜಿ ಮಾತನಾಡಿ ಸಾರ್ವಜನಿಕರು ತಮಗೆ ಸಿಗಬೇಕಾದ ಸೌಲಭ್ಯಗಳನ್ನು ಪಡೆಯಲು ಅಗತ್ಯ ಧಾಖಲಾತಿ ನೀಡಿ, ನಿಮ್ಮ ನಿಂತು ಹೋದ ಯೋಜನೆಗಳನ್ನು ಹಾಗೂ ನೂತನ ಯೋಜನೆಗಳನ್ನು ಜಾರಿಗೆ ತರಲು ಪ್ರಜಾಸೇವೆ ಯೋಜನೆ ಸಹಕಾರಿ ಆಗಿದೆ ಎಂದರು.  


ಸುದ್ದಿ ಓದಿ