ಯಲ್ಲಮ್ಮನಗುಡ್ಡದಲ್ಲಿ ಶುಕ್ರವಾರ ಸಂಭ್ರಮ ಮನೆಮಾಡಿತ್ತು. ಕಾರ್ತೀಕ ದೀಪೋತ್ಸವ
ಲೋಕದರ್ಶನ ವರದಿ
ಉಗರಗೋಳ 28 ; ಸಮೀಪದ ಯಲ್ಲಮ್ಮನಗುಡ್ಡದಲ್ಲಿ ಶುಕ್ರವಾರ ಸಂಭ್ರಮ ಮನೆಮಾಡಿತ್ತು. ಕಾರ್ತೀಕ ದೀಪೋತ್ಸವ ಅಂಗವಾಗಿ ನಡೆದ ದೀಪೋತ್ಸವ ಮತ್ತು ಗಂಗಾರತಿ ಪ್ರಯುಕ್ತ, ಇಡೀ ಏಳುಕೊಳ್ಳದ ನಾಡು ‘ಬೆಳಕಿ’ನ ಸಡಗರದಲ್ಲಿ ಬೆಳಗಿತು.
ಗುಡ್ಡಕ್ಕೆ ಬಂದಿದ್ದ ಸಹಸ್ರಾರು ಭಕ್ತರು, ‘ಎಲ್ಲರ ಅಮ್ಮ’ ಯಲ್ಲಮ್ಮ ತಾಯಿಗೆ ವಿಶೇಷ ಪೂಜೆ ಮಾಡಿದರು. ದೇವಸ್ಥಾನದ ಆವರಣದಲ್ಲಿ ಹಣತೆಗಳನ್ನು ಬೆಳಗಿಸಿ ಸಂಭ್ರಮಿಸಿದರು. ಹುಬ್ಬಳ್ಳಿಯ ಶಿವಾ ತಂಡದವರು ನಡೆಸಿಕೊಟ್ಟ ಗಂಗಾರತಿ ಭಕ್ತರ ಮನಸೆಳೆಯಿತು.
ಹೂಲಿಮಠದ ಶ್ರೀಗಳ ಸಮ್ಮುಖದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನೈತ್ರತ್ವ ವಯಸಿದ್ದ ಉಮೇಶ್ವರ ಸ್ವಾಮಿಜಿಗಳು ಮತನಾಡಿ ಪುರಾತನ ಇತಿಹಾಸವುಳ್ಳ ಯಲ್ಲಮ್ಮ ದೇಗುಲದಲ್ಲಿ ವರ್ಷವೀಡೀ ನಾನಾ ಧಾರ್ಮಿಕ ಕಾರ್ಯಕ್ರಮ ನಡೆಯುತ್ತವೆ. ಪ್ರತಿ ಕಾರ್ಯಕ್ರಮಕ್ಕೂ ಒಂದೊಂದು ಹಿನ್ನೆಲೆ ಇದೆ. ಅದರಲ್ಲಿ ಒಂದಾಗಿರುವ ದೀಪೋತ್ಸವ ಕಾರ್ಯಕ್ರಮವೂ, ಬರದ ಹಿನ್ನೆಲೆಯಲ್ಲಿ ನಾಡಿನ ರೈತರ ಮನದಲ್ಲಿ ಮೂಡಿದ ಕತ್ತಲೆ ಹೋಗಲಾಡಿಸಲಿ ಎಂದು ಆಶಿಸಿದರು.
ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಾಜಶ್ರೀ ಜೈನಾಪುರ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಸಡಗರದಿಂದಿ ದೀಪೂತ್ಸವ ಆಚರಿಸಿ ನಾಡಿನ ಭಕ್ತರಿಗೆ ಒಳತಿಗೆ ಪ್ರಾರ್ಥಿಸಿದ್ದೆವೆ ಎಂದರು.
ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಶಿದ್ದನಗೌಡ ಗೂಡರಾಶಿ, ಉಪ ಕಾರ್ಯದರ್ಶಿ ನಾಗರತ್ನಾ ಚೋಳಿನ, ನಾಗನಗೌಡ ಗಡಾದಗೌಡ್ರ, ಕೆಂಚನಗೌಡ ಲಿಂಗರುಷ, ಎಸ್.ಕಡಹಟ್ಟಿ, ಅಲ್ಲ?ಪ್ರಭು ಪ್ರಭುನವರ, ಸಿ.ಎನ್.ಕುಲಕರ್ಣಿ, ಆರ್.ಎಚ್.ಸವದತ್ತಿ, ಯಲ್ಲಪ್ಪಗೌಡ ಗಂದಿಗೌಡ್ರ, ರಾಕೇಶ ಪಾಟೀಲ, ರಾಜನಗೌಡ ಟೋಪಣ್ಣವರ, ಕಾರ್ತಿಕ ಕಂಭಾರ, ಎಸ್.ಎ.?ಂಪನವರ, ಪ್ರಭು ಹಂಜಗಿ, ಅನಿಲ ಗುಡಿಮನಿ, ಎಂ.ಎಂ.ಕಗದಾಳ, ಪಂಡಿತ ಯಡೂರಯ್ಯ, ಇತರರಿದ್ದರು.