ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ನಿಮಿತ್ತ ರುದ್ರಾಭಿಷೇಕ, ಬಿಲ್ವಾರ್ಚನೆ ಹಾಗೂ ವಿಶೇಷ ಪೂಜೆ
ಲೋಕದರ್ಶನ ವರದಿ
ಯರಗಟ್ಟಿ 25 : ಡಾ. ವೀರೇಂದ್ರ ಹೆಗ್ಗಡೆಯವರ ಅವರ ಹುಟ್ಟು ಹಬ್ಬದ ಪ್ರಯುಕ್ತ ಪಟ್ಟಣದ ಮರಡಿ ಬಸವೇಶ್ವರ ದೇವಸ್ಥಾನದಲ್ಲಿ ರುದ್ರಾಭಿಷೇಕ, ಬಿಲ್ವಾರ್ಚನೆ ಹಾಗೂ ವಿಶೇಷ ಪೂಜೆ ಸಲ್ಲಿಸಿದರು ಹಾಗೂ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿತರಣೆ ಮಾಡಿದ ಧರ್ಮಸ್ಥಳ ಸಂಘದ ಪದಾಧಿಕಾರಿಗಳು.
ಡಾ. ವೀರೇಂದ್ರ ಹೆಗ್ಗಡೆಯವರ ಮುಂದಾಲೋಚನೆಯಿಂದ ಸಮಾಜದಲ್ಲಿ ಕತ್ತಲೆಯಿಂದ ಬೆಳಕಿನೆಡೆಗೆ ಕೋಟ್ಯಾಂತರ ಸಾಮಾನ್ಯ ಬಡ ಕುಟುಂಬಗಳು ತಮ್ಮ ಬದುಕನ್ನು ಕಟ್ಟಿಕೊಂಡಿವೆ ಎಂದು ಕ್ಷೇತ್ರ ಧರ್ಮಸ್ಥಳ ಸಂಘದ ತಾಲೂಕು ಯೋಜನೆ ಅಧಿಕಾರಿಗಳಾದ ಶ್ರೀಕಾಂತ ಆರ್.ಎಂ. ತಿಳಿಸಿದರು.
ನಾಡಿನಾದ್ಯಂತ ಹೆಗಡೆಯವರ ಕೊಡುಗೆಗಳು ಅಪಾರ ಅವರು ಕಲ್ಪವೃಕ್ಷ ಕಾಮಧೇನು ಆಗಿ ಬೆಳೆದಿದ್ದಾರೆ ನಮ್ಮಂತಹ ಕೋಟ್ಯಾಂತರ ಜನಗಳಿಗೆ ಬದುಕು ಕಟ್ಟಿಕೊಳ್ಳಲು ದಾರೀದೀಪವಾಗಿದ್ದಾರೆ ಅಂತಹವರ ಹುಟ್ಟು ಹಬ್ಬದ ಪ್ರಯುಕ್ತ ತುಂಬಾ ಸಂತೋಷ ಸಡಗರದಿಂದ ಆಚರಣೆ ಮಾಡುತ್ತಿದ್ದೇವೆ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಶಕ್ತಿ ತುಂಬುವ ಕೆಲಸ ನಿರಂತರವಾಗಿ ಮಾಡುತ್ತಿದ್ದಾರೆ, ಅವರು ಹುಟ್ಟು ಹಬ್ಬದ ಪ್ರಯುಕ್ತ ನಾವು ಕೈಲಾದ ಸಹಾಯವನ್ನು ಸಮಾಜಕ್ಕೆ ಮಾಡುತ್ತಿದ್ದೇವೆ ಇದೊಂದು ಸಂತೋಷದ ವಿಚಾರ ಎಂದು ತಿಳಿಸಿದರು.
ಈರಣ್ಣಾ ಪಠಪತಿ ಮಾತನಾಡಿ, ಧರ್ಮಸ್ಥಳ ಸಂಘವು, ಅನೇಕ ಬಡ ಜನರಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ, ಪರಮಪೂಜ್ಯ ಡಾ ವೀರೇಂದ್ರ ಹೆಗಡೆಯವರಿಗೆ ಆ ದೇವರು ಆರೋಗ್ಯ ಐಶ್ವರ್ಯ ದೀರ್ಘಾಯುಷ್ಯವು ಕೊಡಲಿ ಎಂದು ಪ್ರಾರ್ಥನೆ ಮಾಡಿದರು.
ಈ ಜಿಲ್ಲಾ ನಿರ್ದೇಶಕ ಲವಕುಮಾರ, ಪಿಎಸ್ಐ ಎಲ್. ಬಿ. ಮಾಳಿ, ಎಪಿಎಂಸಿ ಅಧ್ಯಕ್ಷ ನೀಲಕಂಠ ಶೀದಬಸನವರ, ಆರೋಗ್ಯ ಇಲಾಖೆ ಅಧಿಕಾರಿ ಸುನಿಲ ಕಾಶಣ್ಣವರ, ರತ್ನಾಕರ ಶೆಟ್ಟಿ, ಬಣಜಿಗ ಸಮಾಜದ ಅಧ್ಯಕ್ಷ ಶಿವಾನಂದ ಪಟ್ಟಣಶೆಟ್ಟಿ, ದುಂಡಯ್ಯ ಹಿರೇಮಠ, ರಾಯಪ್ಪ ಹಣಬರ, ಬಸಯ್ಯ ಹಿರೇಮಠ,
ವೀರಯ್ಯ ಮಠಪತಿ, ಪಂಪಾಪತಿ ಹಿರೇಮಠ, ಸೋಮು ರೈನಾಪೂರ, ಸೋಮಲಿಂಗಪ್ಪ ಕುಂಬಾರ, ಸಂಘದ ಸೇವಾ ಪ್ರತಿನಿಧಿಗಳಾದ ಗೀತಾ ಹಟ್ಟಿ, ಬಿಬಿಜಾನ ನದಾಫ, ಭಾರತಿ ಕೊಪ್ಪದ, ಪೂಜಾ ಬೆನಕಟ್ಟಿ ಸೇರಿದಂತೆ ಅನೇಕರು ಇದ್ದರು.