ಬಸವಣ್ಣನವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ‘ಬಸವ ಮಂಟಪ’ ಕೃತಿ: ಲೇಖಕ ರವಿ ಹಂಜ್ ವಿರುದ್ಧ ಕ್ರಮಕ್ಕೆ ಆಗ್ರಹ
ಯರಗಟ್ಟಿ 25 : ಬಸವ ಮಂಟಪ ಕೃತಿಯ ಮೂಲಕ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಕುರಿತು ಅವಹೇಳನಕಾರಿ ಮತ್ತು ಸುಳ್ಳು ಮಾಹಿತಿ ಸಮಾಜದಲ್ಲಿ ಬಿತ್ತುತ್ತಿರುವ ಲೇಖಕ ರವಿ ಹಂಜ್ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪಟ್ಟಣದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ವೀರಶೈವ ಲಿಂಗಾಯತ ಸಮಾಜ ಬಾಂಧವರು ಪತ್ರಿಭಟನೆ ನೆಡೆಸಿ ಉಪ ತಹಶೀಲ್ದಾರ ಎಸ್. ಬಿ. ಕುಲಕರ್ಣಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ ಬಾಳಿ ಮಾತನಾಡಿ 12ನೇ ಶತಮಾನದಲ್ಲಿ ಸಮಾನತೆ, ಕಾಯಕ ಮತ್ತು ದಾಸೋಹ ತತ್ವಗಳು ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದ ವಿಶ್ವಗುರು, ಕರ್ನಾಟಕದ ಸಾಂಸ್ಕೃತಿಕ ನಾಯಕ ಅಣ್ಣ ಬಸವಣ್ಣನವರ ವ್ಯಕ್ತಿತ್ವ ಮತ್ತು ತತ್ವಗಳಿಗೆ ಧಕ್ಕೆ ತರುವಂತಹ ಕೃತ್ಯ ನಡೆದಿದೆ.
ಲೇಖಕ ರವಿ ಹಂಚ್ ಅವರು ರಚಿಸಿರುವ 'ಬಸವ ಮಂಟಪ' ಎಂಬ ಕೃತಿಯಲ್ಲಿ ಬಸವಣ್ಣನವರ ಕುರಿತು ಆಧಾರರಹಿತ, ಅವಹೇಳನಕಾರಿ ಹಾಗೂ ಸಮಾಜದ ಶಾಂತಿ ಮತ್ತು ಸೌಹಾರ್ದತೆಯನ್ನು ಕದಡುವಂತಹ ವಿಚಾರಗಳನ್ನು ಪ್ರಕಟಿಸಲಾಗಿದೆ.
ಬಸವಣ್ಣನವರನ್ನು ನಾಡಿನ ಸಾಂಸ್ಕೃತಿಕ ನಾಯಕ ಎಂದು ಸರ್ಕಾರವೇ ಅಧಿಕೃತವಾಗಿ ಘೋಷಿಸಿರುವ ಸಂದರ್ಭದಲ್ಲಿ, ಇಂತಹ ಕೃತಿಯ ಮೂಲಕ ಕೋಟ್ಯಂತರ ಬಸವಾನುಯಾಯಿಗಳು ಮತ್ತು ನಾಡಿನ ಜನತೆಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಭಾವನೆಗಳಿಗೆ ತೀವ್ರ ನೋವುಂಟು ಮಾಡಿದರು. ಇದು ಸಮಾಜದಲ್ಲಿ ಅಶಾಂತಿ ಮೂಡಿಸುವ ಉದ್ದೇಶಪೂರ್ವಕ ಪ್ರಯತ್ನವಾಗಿದೆ ಎಂದು ಹರಿಹಾಯ್ದರು.
ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಮಹಾಸ್ವಾಮೀಜಿ, ಮಾತನಾಡಿ "ವಿಕಾರ, ವಿಕೃತ ಮನಸ್ಸುಳ್ಳವರು ಸಮಾಜದಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಂಜ್ ಅವರ 'ಬಸವ ಮಂಟಪ' ಪುಸ್ತಕ ಮುಟ್ಟುಗೋಲು ಹಾಕಿಕೊಳ್ಳಲು ಸಚಿವ ಸಂಪುಟದಲ್ಲಿ ನಿರ್ಧರಿಸಿರುವುದು ಸರಿಯಾಗಿದೆ ಎಂದು ಹೇಳಿದರು.
ಈ ವೇಳೆ ಕಟಕೋಳ ವಿರಕ್ತಮಠದ ಸಚ್ಚಿದಾನಂದ ಮಹಾಸ್ವಾಮಿಗಳು, ಪಂಚನಗೌಡ ದ್ಯಾಮನಗೌಡ್ರ, ಎಸ್. ಎಸ್. ಕುರುಬಗಟ್ಟಿಮಠ, ಬಸವರಾಜ ಇಟ್ನಾಳ, ಡಾ. ವಿಶ್ವನಾಥ ತಾವಂಶಿ, ಬಣಜಿಗ ಸಮಾಜಿದ ತಾಲೂಕಾ ಅಧ್ಯಕ್ಷ ಶಿವಾನಂದ ಪಟ್ಟಣಶೆಟ್ಟಿ, ಶಿವಾನಂದ ಕರ್ಜಿಗಿಮಠ, ಮೋಹನ ಹಾದಿಮನಿ,
ಶಿವಾನಂದ ಮದ್ದಾನಿ, ಈರಣ್ಣಾ ಮಠಪತಿ, ರಾಜೇಂದ್ರ ವಾಲಿ, ಮಲ್ಲಿಕಾರ್ಜುನ ಹಿರೇಮಠ, ಶ್ರೀಶೈಲಪ್ಪ ವಾಲಿ, ತಮ್ಮಣ್ಣಾ ವಾಲಿ, ಸಂತೋಷ ಅಲ್ಲನ್ನವರ, ವಿನಾಯಕ ರಾಯರ, ಪ್ರವೀಣ ಬೆಣ್ಣಿ, ಸಂತೋಷ ವಾಲಿ, ಸೋಮು ಅಲ್ಲನ್ನವರ, ಪ್ರಭಾವತಿ ವಾಲಿ, ಉಮಾದೇವಿ ಪೂರ್ವಿಮಠ, ಗಂಗವ್ವ ವಾಲಿ, ಶೇಖವ್ವ ನಾವಿ, ಪ್ರೇಮಾ ಹೂಲಿಕಟ್ಟಿ ಸೇರಿದಂತೆ ಅನೇಕರು ಇದ್ದರು.