ಮುನವಳ್ಳಿ ಪಟ್ಟಣದಲ್ಲಿ ಆರ್‌ಎಸ್‌ಎಸ್ ವತಿಯಿಂದ ಅದ್ಧೂರಿ ಪಥಸಂಚಲನ; ವಾದ್ಯವೈಭವದೊಂದಿಗೆ ಗಮನ ಸೆಳೆದ ಗಣವೇಷಧಾರಿಗಳು
ಲೋಕದರ್ಶನ ವರದಿ
ಯರಗಟ್ಟಿ 15: ಸಮೀಪದ ಮುನವಳ್ಳಿ ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸವದತ್ತಿ ವತಿಯಿಂದ ಪಥಸಂಚಲನ ಕಾರ್ಯಕ್ರಮ ರವಿವಾರ ವಿಜೃಂಭಣೆಯಿಂದ ಜರುಗಿತು. ಶ್ರೀ ಪಂಚಲಿಂಗೇಶ್ವರ ರಥ ಬೀದಿಯಿಂದ ಪ್ರಾರಂಭವಾದ ಪಥಸಂಚಲನ ಕುಸ್ತಿ ಮೈದಾನ, ಡೋಹರ ಓಣಿ, ಬನಶಂಕರಿ ದೇವಸ್ಥಾನ, ವಿರಕ್ತಮಠ, ಸೂಲಕಟ್ಟಿ ಅಗಸಿ, ಚಂದ್ರಶೇಖರ ಮಠ, ಶ್ರೀ ವೀರಭದ್ರೇಶ್ವರ ದೇವಸ್ಥಾನ, ಗಾಂಧಿ ಚೌಕ, ಬಸ್ ನಿಲ್ದಾಣ ಮಾರ್ಗದಲ್ಲಿ ವಾದ್ಯ ವೈಭವಗಳೊಂದಿಗೆ, ಗಣವೇಷಧಾರಿಗಳಿಂದ ಆಕರ್ಷಕ ಪಥಸಂಚಲನ ಜರುಗಿತು. ಪಥಸಂಚಲನ ನಂತರ ಶ್ರೀ ಪಂಚಲಿಂಗೇಶ್ವರ ಕುಸ್ತಿ ಮೈದಾನದಲ್ಲಿ ಸಾರ್ವಜನಿಕ ಸಮಾರಂಭ ಆಯೋಜಿಸಲಾಗಿತ್ತು.