ಮಹಿಳಾ ಸ್ವಸಹಾಯ ಗುಂಪುಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ
ಯರಗಟ್ಟಿ 07: ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣ ಮತ್ತು ಜೀವನೋಪಾಯ ವೃದ್ಧಿಗೆ ಈ ಸಂತೆ ಪೂರಕವಾಗಲಿದೆ ಎಂದು ಸವದತ್ತಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಆನಂದ ಬಡಕುಂದ್ರಿ ಹೇಳಿದರು. ಪಟ್ಟಣದ ತಾಲ್ಲೂಕು ಪಂಚಾಯತಿ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ದೀಪ ಸಂಜೀವಿನಿ ಮಾಸಿಕ ಸಂತೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಮೀಣ ಮಹಿಳಾ ಉದ್ಯಮಿಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ, ಅವರ ಸ್ವಾವಲಂಬಿ ಬದುಕಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಸಂತೆ ಆಯೋಜಿಸಲಾಗಿದೆ ಎಂದು ಹೆಳಿದರು.
ಯರಗಟ್ಟಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಅಯ್ಯನಗೌಡರ ಮಾತನಾಡಿ, ಸಂಜೀವಿನಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಸ್ವ-ಸಹಾಯ ಗುಂಪುಗಳ ಮಹಿಳೆಯರು ತಯಾರಿಸುವ ವಿವಿಧ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವುದು ಹಾಗೂ ಮಹಿಳಾ ಉದ್ಯಮಶೀಲತೆಯನ್ನು ಉತ್ತೇಜಿಸುವುದು ಈ ಸಂತೆಯ ಮುಖ್ಯ ಉದ್ದೇಶವಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಮಹಿಳಾ ಸ್ವ-ಸಹಾಯ ಗುಂಪುಗಳು ತಯಾರಿಸಿರುವ ಉತ್ಪನ್ನಗಳನ್ನು ಖರೀದಿಸುವ ಮೂಲಕ ಗ್ರಾಮೀಣ ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.
ವಲಯ ಮೇಲ್ವಿಚಾರಕಿ ಪೂರ್ಣಿಮಾ ಭಾವಿಕಟ್ಟಿ, ಪವನ ಪೋಳ, ಬಸವರಾಜ ಪಟ್ಟಣಶೆಟ್ಟಿ, ರೂಪಶ್ರೀ ಪಾಟೀಲ, ಮಲ್ಲವ್ವ ಕುಂಬಾರ, ಜಯಶ್ರೀ ಬೆಡಸೂರ, ಸುಮಂಗಲಾ ವಿಭೂತಿಮಠ, ರಿಯಾನ ನದಾಫ, ಸವಿತಾ ಭಾವಿಕಟ್ಟಿ, ಸುಮಿತ್ರಾ ಕುರಿ, ಸುವರ್ಣ ಹಿರೇಮಠ, ಗೀತಾ ಕುಂಬಾರ, ಚಳನದೇವಿ ಉಂದ್ರಿ, ಬಸವರಾಜೇಶ್ವರಿ ಹಂಜಿ, ಗದಿಗೆಮ್ಮ ಕುಂಬಾರ, ರಾಜೇಶ್ವರಿ ಬಡಿಗೇರ, ಪುಷ್ಪಾ ಹೊಟ್ಟಿನವರ, ಅನಸುಯಾ ಪಚ್ಚಿನವರ, ಸಕ್ಕೂ ಚುಂಚನೂರ, ಸುಜತಾ ಕಡಕೊಳ, ಅಕ್ಕಮ್ಮ ನುಗ್ಗಾನಟ್ಟಿ ಸೇರಿದಂತೆ ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರು ಇದ್ದರು.