ವಿಜಯಪುರ

ಮಠಾಧೀಶರ ಒಕ್ಕೂಟದ ಚಿಂತನ ಮಂಥನ ಸಭೆ ಯಶಸ್ವಿ

ಮಠಾಧೀಶರ ಒಕ್ಕೂಟದ ಚಿಂತನ ಮಂಥನ ಸಭೆ ಯಶಸ್ವಿ


         ದೇವರಹಿಪ್ಪರಗಿ 07: ಪಟ್ಟಣದ ಜಡಿ ಸಿದ್ದೇಶ್ವರ ಮಠದಲ್ಲಿ ದೇವರಹಿಪ್ಪರಗಿ ಹಾಗೂ ತಾಳಿಕೋಟಿ ತಾಲೂಕುಗಳ ಮಠಾಧೀಶರ ಒಕ್ಕೂಟದ ವತಿಯಿಂದ ಚಿಂತನ ಮಂಥನ ಸಭೆ ಶನಿವಾರ ನಡೆಯಿತು. ಪಟ್ಟಣದ ಜಡಿ ಸಿದ್ದೇಶ್ವರ ಮಠದ ಜಡೇ ಸಿದ್ದೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎರಡು ತಾಲೂಕುಗಳ ವಿವಿಧ ಮಠಗಳ ಮಠಾಧೀಶರು ಭಾಗವಹಿಸಿದ್ದರು.

         ಸಭೆಯಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಮುದಾಯದ ಅಭಿವೃದ್ಧಿ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಮಠಾಧೀಶರು ಚಿಂತನ ಮಂಥನ ನಡೆಸಿದರು. ಸಮಾಜದಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವುದು, ಮಠಗಳ ಪರಸ್ಪರ ಸಹಕಾರ, ಸಮಾಜದ ಏಳಿಗೆ ಹಾಗೂ ಸಂಘಟನಾತ್ಮಕ ಒಗ್ಗಟ್ಟಿನ ಅಗತ್ಯತೆ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳಲಾಯಿತು.

          ಈ ಸಂದರ್ಭದಲ್ಲಿ ಕೋರವಾರದ ತಪೋರತ್ನ ಷ.ಬ್ರ ಬಸವಲಿಂಗ ಶಿವಾಚಾರ್ಯರು, ದೇವೂರದ ಷ.ಬ್ರ ಮಂಗಳಾರಧ್ಯ ಶಿವಾಚಾರ್ಯರು, ಸಾಸನೂರದ ಷ.ಬ್ರ ಮಹಾಲಿಂಗ ಶಿವಾಚಾರ್ಯರು, ನಾವದಗಿ ಷ.ಬ್ರ ರಾಜಗುರು ರಾಜೇಂದ್ರ ಶಿವಾಚಾರ್ಯರು, ಕಲಕೇರಿಯ ಷ.ಬ್ರ ಸಿದ್ದರಾಮ ಶಿವಾಚಾರ್ಯರು, ದೇವರಹಿಪ್ಪರಗಿ ಜಡಿ ಮಠದ ಷ.ಬ್ರ ಜಡೇ ಸಿದ್ದೇಶ್ವರ ಶಿವಾಚಾರ್ಯರು, ಕೆಸರಟ್ಟಿಯ ಪ.ಪೂ ಸೋಮಲಿಂಗ ಮಹಾಸ್ವಾಮಿಗಳು, ಕಡಕೋಳದ ಷ.ಬ್ರ ಮಡಿವಾಳೇಶ್ವರ ಶಿವಾಚಾರ್ಯರು,

             ದೇವರ ಹಿಪ್ಪರಗಿ ಪಟ್ಟಣದ ಮ.ನಿ.ಪ್ರ ಮಹಾಂತ ಸ್ವಾಮಿಗಳು, ನಿವಾಳಖೇಡದ ಮ.ಘ.ಚ ಸಂಗನಬಸವ ಶಿವಾಚಾರ್ಯರು, ಕೆರೂಟಗಿಯ ಷ.ಬ್ರ ಶಿವಬಸವ ಶಿವಾಚಾರ್ಯರು ಸೇರಿದಂತೆ ದೇವರಹಿಪ್ಪರಗಿ ಮತ್ತು ತಾಳಿಕೋಟಿ ತಾಲೂಕುಗಳ ವಿವಿಧ ಮಠಗಳ ಮಠಾಧೀಶರು ಉಪಸ್ಥಿತರಿದ್ದರು. 


ಸುದ್ದಿ ಓದಿ