ಮುನವಳ್ಳಿ ಪುರಸಭೆ ಓರ್ವ ಬಿಜೆಪಿ ಹಾಗೂ ಓರ್ವ ಪಕ್ಷೇತ್ರರ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಸೇರೆ್ಡ
ಲೋಕದರ್ಶನ ವರದಿ
ಯರಗಟ್ಟಿ 15 : ಮುನವಳ್ಳಿ ಪಟ್ಟಣದಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕಿಹೊಳಿ ಅವರ ಹಾಗೂ ಶಾಸಕ ವಿಶ್ವಾಸ ವೈದ್ಯ ಅವರ ನೇತೃತ್ವದಲ್ಲಿ, ಬಿಜೆಪಿ ಪಕ್ಷದ ಪುರಸಭೆ ಸದಸ್ಯರಾದ ಶ್ರೀಮತಿ ಮಮತಾಜ್ ಫ. ಚೋಪದಾರ್ ಹಾಗೂ ಪಕ್ಷೇತರ ಸದಸ್ಯರಾದ ಶ್ರೀಮತಿ ಶಾಹಿದಾ ಮ. ಗಡಾದ್ ಅವರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರೆ್ಡಯಾದರು.
ರಾಜ್ಯದ ಕಾಂಗ್ರೆಸ್ ಸರ್ಕಾರದ ಜನಪರ ಆಡಳಿತ, ಪಂಚ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನ ಹಾಗೂ ನಮ್ಮ ಕ್ಷೇತ್ರದಲ್ಲಿ ನಡೆಯುತ್ತಿರುವ ನಿರಂತರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಅವರು ಪಕ್ಷದ ತತ್ವ-ಸಿದ್ಧಾಂತಗಳನ್ನು ಒಪ್ಪಿ ಕಾಂಗ್ರೆಸ್ ಕುಟುಂಬವನ್ನು ಸೇರಿದ್ದಾರೆ.
ನೂತನವಾಗಿ ಪಕ್ಷಕ್ಕೆ ಸೇರೆ್ಡಯಾದ ಇಬ್ಬರೂ ಪುರಸಭೆ ಸದಸ್ಯರನ್ನು ಆತ್ಮೀಯವಾಗಿ ಬರಮಾಡಿಕೊಂಡು, ಮುಂದಿನ ದಿನಗಳಲ್ಲಿ ಮುನವಳ್ಳಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಒಗ್ಗಟ್ಟಾಗಿ ಶ್ರಮಿಸುವಂತೆ ಶುಭ ಕೊರಲಾಯಿತು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಚಂದ್ರ ಜಂಬ್ರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ. ಡಿ. ಟೋಪೊಜಿ, ಪುರಸಭೆ ಅಧ್ಯಕ್ಷ ಈಶ್ವರ ಕರಿಕಟ್ಟಿ, ಉಪಾಧ್ಯಕ್ಷ ಡಿ. ಡಿ. ಚಿನ್ನೂರಿ, ಬೆಮುಲ ನಿರ್ದೇಶಕ ಶಂಕರ ಇಟ್ನಾಳ, ಸಮೀರ ಚೂರಿಖಾನ, ಮೀರಾಸಾಬ ವಟ್ನಾಳ, ಸಿ. ಬಿ. ಬಾಳಿ, ರವೀಂದ್ರ ಯಲಿಗಾರ, ಮಲೀಕಸಾಬ ಬಾಗವಾನ, ಪಂಚು ಬಾರಕೇರ, ಮುಬಾರಕ ಬೈರಕದಾರ, ಲುಕಮಾನ ದನದಮನಿ, ವಿನಾಯಕ ಕಟ್ಟಿಕಾರ ಪಕ್ಷದ ಹಿರಿಯ ಮುಖಂಡರು, ಪದಾಧಿಕಾರಿಗಳು, ಪುರಸಭೆ ಸದಸ್ಯರು, ಕಾರ್ಯಕರ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.