ಅಗಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡದ ಹಬ್ಬ
ಲಕ್ಷ್ಮೇಶ್ವರ " 25 ; ಪಟ್ಟಣದ ಹೆಸರಾಂತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಶ್ರೀಮತಿ ಕಮಲಾ ವೆಂಕಪ್ಪ ಎಂ ಅಂಗಡಿ ಇಂಜಿನಿಯರಿಂಗ್ ಮಹಾವಿದ್ಯಾಲಯದಲ್ಲಿ ಕನ್ನಡದ ಹಬ್ಬ 2026 ಕಾರ್ಯಕ್ರಮವು ಸಂಭ್ರಮದೊಂದಿಗೆ ನಡೆಯಿತು.
ಕನ್ನಡದ ಹಬ್ಬದ ಅಂಗವಾಗಿ ಕಾಲೇಜ್ ಆವರಣದಲ್ಲಿ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರದ ಮೆರವಣಿಗೆಯು ಸಕಲ ವಾದ್ಯ ವೈಭವಗಳೊಂದಿಗೆ ನಡೆಯಿತುಕನ್ನಡದ ಹಬ್ಬ ಕುರಿತು ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಪರಶುರಾಮ್ ಬಾರ್ಕಿ ಅವರು ಹರಿದು ಹಂಚಿ ಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳೆಲ್ಲವೂ ಒಂದಾಗಿ 1956 ನವಂಬರ್ 1ರಂದು ಮೈಸೂರು ರಾಜ್ಯ ಉದಯವಾಯಿತು.
ಮುಂದೆ 1973ರಲ್ಲಿ ಇದಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಲಾಯಿತು ಆಲೂರು ವೆಂಕಟರಮಣ ರಂತಹ ಮಹನೀಯರ ಕರ್ನಾಟಕ ಏಕೀಕರಣ ಚಳುವಳಿಯ ಫಲವಾಗಿ ಅಖಂಡ ಕರ್ನಾಟಕ ಸಿಕ್ಕಿದೆ ಆ ಮಹನೀಯರ ತ್ಯಾಗವನ್ನು ಸ್ಮರಿಸುವ ಮತ್ತು ನಮ್ಮ ಭಾಷೆಯ ಬಗ್ಗೆ ಅಭಿಮಾನ ಪಡುವ ದಿನವೇ ಕನ್ನಡ ರಾಜ್ಯೋತ್ಸವ ಕನ್ನಡ ಹಬ್ಬ ಎಂದು ಆಚರಿಸಲಾಗುತ್ತಿದೆ ಎಂದರು ಮೆರವಣಿಗೆಯಲ್ಲಿ ಕಾಲೇಜ್ ವಿದ್ಯಾರ್ಥಿಗಳೊಂದಿಗೆ ಪ್ರಾಚಾರ್ಯರಾದ ಡಾ. ಪರಶುರಾಮ್ ಬಾರ್ಕಿ ಸೇರಿದಂತೆ ಕಾಲೇಜಿನ ಎಲ್ಲಾ ವಿಭಾಗದ ಶಿಕ್ಷಕರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಇದೇ ಸಮಯದಲ್ಲಿ ವಿದ್ಯಾರ್ಥಿಗಳೊಂದಿಗೆ ಡಾ. ಪರಶುರಾಮ್ ಬಾರ್ಕಿ ಅವರು ಕುಣಿದು ಸಂಭ್ರಮದೊಂದಿಗೆ ಕನ್ನಡದ ಹಬ್ಬ ಆಚರಿಸಿದರುಕಾಲೇಜಿನ ಎಲ್ಲ ಶಿಕ್ಷಕ ವೃಂದದವರು ಹಾಗೂ ಎಲ್ಲ ವಿಭಾಗದ ಇಂಜಿನಿಯರಿಂಗ್ ಕೋರ್ಸ್ ವಿದ್ಯಾರ್ಥಿಗಳು ಹೊಸ ಹೊಸ ಬಟ್ಟೆಗಳನ್ನು ಧರಿಸಿ ಸಂಭ್ರಮದೊಂದಿಗೆ ಕನ್ನಡದ ಹಬ್ಬದಲ್ಲಿ ಪಾಲ್ಗೊಂಡಿದ್ದರು