ಗದಗ

ರಾಜ್ಯ ಸರ್ಕಾರವು ಬರಪಿಡಿತ ತಾಲೂಕುಗಳ ಅರ್ಹ ರೈತರಿಗೆ ಮೊದಲ ಹಂತದ ಮಧ್ಯಂತರ ಬೆಳೆಹಾನಿ ಪರಿಹಾರ 2.500 ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಿದೆ

ರಾಜ್ಯ ಸರ್ಕಾರವು ಬರಪಿಡಿತ ತಾಲೂಕುಗಳ ಅರ್ಹ ರೈತರಿಗೆ ಮೊದಲ ಹಂತದ ಮಧ್ಯಂತರ ಬೆಳೆಹಾನಿ ಪರಿಹಾರ 2.500 ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಿದೆ
The state government has deposited the first installment of interim crop loss compensation—amounting

             ಲಕ್ಷ್ಮೇಶ್ವರ " 25 ; ಕರ್ನಾಟಕ ರಾಜ್ಯ ಸರ್ಕಾರವು ಬರಪೀಡಿತ ತಾಲ್ಲೂಕುಗಳ ಅರ್ಹ ರೈತರಿಗೆ ಮೊದಲ ಹಂತದ ಮಧ್ಯಂತರ ಬೆಳೆಹಾನಿ ಪರಿಹಾರವಾಗಿ 2,500 ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ (ಆಃಖಿ) ಜಮೆ ಮಾಡಿದೆ. ಈ ಯೋಜನೆಯ ಪರಿಹಾರದ ಮೊತ್ತ. ರಾಜ್ಯ ಸರ್ಕಾರವು ಒಟ್ಟು 5,000 ಬರ ಪರಿಹಾರವನ್ನು ಎರಡು ಕಂತುಗಳಲ್ಲಿ ನೀಡಲು ನಿರ್ಧರಿಸಿದ್ದು, ಮೊದಲ ಕಂತಾಗಿ ?2,500 ಬಿಡುಗಡೆ ಮಾಡಿದೆ. (ಉಳಿದ 2,500 ಎರಡನೇ ಕಂತಿನಲ್ಲಿ ಜಮೆಯಾಗಲಿದೆ).                               ಫಲಾನುಭವಿಗಳು. ರಾಜ್ಯದ 226 ಬರಪೀಡಿತ ತಾಲ್ಲೂಕುಗಳ ಸುಮಾರು 45 ರಿಂದ 50 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಇದರ ಪ್ರಯೋಜನ ಸಿಗಲಿದೆ.ಸಾಲ ಮರುಪಾವತಿ ವಿನಾಯಿತಿ. ಪರಿಹಾರದ ಜೊತೆಗೆ ರೈತರ ಕೃಷಿ ಸಾಲ ಮರುಪಾವತಿಗೆ 12 ತಿಂಗಳ ಮೊರಟೋರಿಯಂ (ವಿನಾಯಿತಿ) ಹಾಗೂ ಮರುಪಾವತಿ ಅವಧಿಯನ್ನು ವಿಸ್ತರಿಸಲಾಗಿದೆ.ಹಣ ಪಡೆಯಲು ಮುಖ್ಯ ಅರ್ಹತೆ ಮತ್ತು ಷರತ್ತುಗಳು ಈ ಖಗಋಖ ನೋಂದಣಿ ಕಡ್ಡಾಯ. ರೈತರು ಕಡ್ಡಾಯವಾಗಿ ’ಫ್ರೂಟ್ಸ್‌’ ತಂತ್ರಾಂಶದಲ್ಲಿ ನೋಂದಾಯಿಸಿಕೊಂಡು ಫಾರ್ಮರ್ ಐಡಿ  ಹೊಂದಿರಬೇಕು.

               ಬ್ಯಾಂಕ್ ಖಾತೆ ಜೋಡಣೆ. ರೈತರ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್‌ ಲಿಂಕ್ ಆಗಿರಬೇಕು ಮತ್ತು ಓಕಅಋ ಮ್ಯಾಪಿಂಗ್ ಸಕ್ರಿಯವಾಗಿರಬೇಕು.ಜಮೀನು ದಾಖಲೆ. ಬೆಳೆ ಸಮೀಕ್ಷೆ ಮತ್ತು ಭೂಮಿ ತಂತ್ರಾಂಶದಲ್ಲಿ ಬೆಳೆ ಹಾನಿಯಾಗಿರುವ ಬಗ್ಗೆ ದಾಖಲೆ ಇರಬೇಕು. ಗರಿಷ್ಠ 2 ಹೆಕ್ಟೇರ್ವರೆಗಿನ ಕೃಷಿ ಜಮೀನಿಗೆ ಈ ಪರಿಹಾರ ಅನ್ವಯವಾಗುತ್ತದೆ.ಅನರ್ಹರು. ಕೃಷಿಯೇತರ ಜಮೀನು, ಸರ್ಕಾರಿ ಜಮೀನು ಅಥವಾ ಭೂಸ್ವಾಧೀನಕ್ಕೆ ಒಳಪಟ್ಟ ಜಮೀನುಗಳಿಗೆ ಈ ಪರಿಹಾರ ಸಿಗುವುದಿಲ್ಲ. 


ಸುದ್ದಿ ಓದಿ