ಸಂವಿಧಾನ ಪಿಠಿಕೆ ಓದುವ ಮೂಲಕ “ಸಂವಿದಾನ ದಿನ” ಆಚರಣೆ
ಲೋಕದರ್ಶನ ವರದಿ
ಗದಗ 26: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಛೇರಿ, ಹುಬ್ಬಳ್ಳಿಯಲ್ಲಿ ಸಂವಿಧಾನದ ಪ್ರಸ್ಥಾವನೆಯನ್ನು ಓದುವ ಮೂಲಕ “ಸಂವಿದಾನ ದಿನ” ವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಸಂಚಾರ ವ್ಯವಸ್ಥಾಪಕರಾದ ವಿವೇಕಾನಂದ ವಿಶ್ವಜ್ಞ, ಮುಖ್ಯ ಭದ್ರತಾ ಮತ್ತು ಜಾಗ್ರತಾ ಅಧಿಕಾರಿಗಳಾದ ಗಣೇಶ ರಾಠೋಡ, ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿಗಳಾದ ಶ್ರೀನಿವಾಸಮೂರ್ತಿ ಸಿ ಈ, ಮುಖ್ಯ ಕಾನೂನು ಆಧಿಕಾರಿಗಳಾದ ಶ್ಯಾಮಲಾ ಕೆ ಎನ್ ಮುಖ್ಯ ಕಾಮಗಾರಿ ಅಭಿಯಂತರಾದ ದಿವಾಕರ ಎಸ್ ಯರಗೋಪ್ಪ, ಮುಖ್ಯ ಲೆಕ್ಕಾಧಿಕಾರಿಗಳಾದ ಜಗದಂಬಾ ಕೋಪರ್ಡೆ, ಮಂಡಳಿಯ ಕಾರ್ಯದರ್ಶಿಗಳಾದ ಶಶಿಧರ ಕುಂಬಾರ, ಉಪ ಮುಖ್ಯ ಅಂಕಿ ಸಂಖ್ಯಾಧಿಕಾರಿಗಳಾದ ಸುಮನಾ ಯು, ಉಪಮುಖ್ಯ ಕಾನೂನು ಅಧಿಕಾರಿಗಳಾದ ಲಕ್ಷ್ಮೀನಾರಾಯಣ ಭಟ್, ಅಧಿಕಾರಿಗಳಾದ ಎಂ ಬಿ ಕಪಲಿ, ಕುಮಾರಸ್ವಾಮಿ ಆರ್ ಎಲ್, ಸುನೀಲ್ ಎಮ್, ನವೀನಕುಮಾರ ತಿಪ್ಪಾ, ಸುನೀತಾ ಜೋಶಿ, ಪಿ ಆರ್ ಕಿರಣಗಿ, ರವೀಶ್ ನಾಯಕ, ಜಗದೀಶ ಕೋಳಿ, ವಿನಾಯಕಸ್ವಾಮಿ ಸಾಲಿಮಠ, ಮತ್ತು ಕೇಂದ್ರ ಕಛೇರಿಯ ಇನ್ನಿತರ ಅಧಿಕಾರಿ/ಸಿಬ್ಬಂದಿಗಳು ಉಪಸ್ಥಿತರಿದ್ದರು.