ಕೊಪ್ಪಳ

ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ರಾಜ್ಯಮಟ್ಟಕ್ಕೆ ಆಯ್ಕೆ

ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ರಾಜ್ಯಮಟ್ಟಕ್ಕೆ ಆಯ್ಕೆ


             ಕೊಪ್ಪಳ  26: ನಗರದ ಗವಿಸಿದ್ಧೇಶ್ವರ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ  2026-27ನೇ ಸಾಲಿನ ರಾಷ್ಟ್ರೀಯ ಮತದಾರರ ದಿನಾಚರಣೆ ನಿಮಿತ್ತ ಕೊಪ್ಪಳ ಜಿಲ್ಲಾಡಳಿತ ಮಾಹಿತಿ ಮೇರೆಗೆ ಬುಧವಾರ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು.      ರಸಪ್ರಶ್ನೆ ಸ್ಪರ್ಧೆಯಲ್ಲಿ ಬಿಎ ಮೂರನೇ ಸೆಮೆಸ್ಟರ್‌ನ ಶ್ರೀದೇವಿ ಪ್ರಥಮ ಮತ್ತು ರಕ್ಷಿತಾ ದ್ವಿತೀಯ ಸ್ಥಾನ ಹಾಗೂ ಬಿಎ ಐದನೇ ಸೆಮೆಸ್ಟರ್‌ನ ಕವಿತಾ ತೃತೀಯ ಸ್ಥಾನ ಪಡೆದು ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆಗೆ ಆಯ್ಕೆಯಾದರು.

            ಪ್ರಬಂಧ ಸ್ಪರ್ಧೆಯಲ್ಲಿ ಬಿಎ ಐದನೇ ಸೆಮೆಸ್ಟರ್‌ನ ಕವಿತಾ ಪ್ರಥಮ, ಬಿಕಾಂ ಮೂರನೇ ಸೆಮೆಸ್ಟರ್‌ನ ಪಲ್ಲವಿ ದ್ವಿತೀಯ ಹಾಗೂ ಬಿಎ ಮೂರನೇ ಸೆಮೆಸ್ಟರ್‌ನ ಮೇಘ ತೃತೀಯ ಸ್ಥಾನ ಪಡೆದು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಜೆಯಾದರು. ವಿಜೇತ ವಿದ್ಯಾರ್ಥಿನಿಯರನ್ನು  ಪ್ರಾಂಶುಪಾಲ ಡಾ.ಗಣಪತಿ ಕೆ ಲಮಾಣಿ, ಐಕ್ಯೂಎಸಿ ಸಂಚಾಲಕರಾದ ಮತ್ತು ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಶುಭ, ವಾಣಿಜ್ಯಶಾಸ್ತ್ರದ ಮುಖ್ಯಸ್ಥರಾದ ಡಾ. ವಿಠೋಬ, ಅರ್ಥಶಾಸ್ತ್ರದ ಮುಖ್ಯಸ್ಥರಾದ   ಶುಭ ಟಿ ಇ,

              ಕನ್ನಡ ವಿಭಾಗದ ಮುಖ್ಯಸ್ಥರಾದ    ಲಲಿತ ಕೆ, ವಾಣಿಜ್ಯಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾದ   ಸುಮಿತ್ರ ಎಸ್ ವಿ, ಗ್ರಂಥಪಾಲಕ ಡಾ. ಮಲ್ಲಿಕಾರ್ಜುನ ಬಿ ಹಾಗೂ ಎಲ್ಲ ವಿಭಾಗದ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಮತ್ತು ಕಾಲೇಜಿನ ವಿದ್ಯಾರ್ಥಿನಿಯರು   ಅಭಿನಂದಿಸಿದರು ಎಂದು ಚುನಾವಣಾ ಸಾಕ್ಷರತಾ ಸಮಿತಿಯ ಸಂಚಾಲಕರು ಹಾಗೂ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ರಾಜ್ಮಾ ಟಿಎಂಆರ್ ತಿಳಿಸಿದ್ದಾರೆ. 


ಸುದ್ದಿ ಓದಿ