ಕೊಪ್ಪಳ

ದಿ, 30 ರಂದು 76ನೇ ಸಂವಿಧಾನ ಸಮರಾ​‍್ಣ ದಿನಾಚರಣೆ ಹಾಗೂ ಸಭೆ

ದಿ, 30 ರಂದು  76ನೇ ಸಂವಿಧಾನ ಸಮರಾ​‍್ಣ ದಿನಾಚರಣೆ ಹಾಗೂ  ಸಭೆ

             ಕೊಪ್ಪಳ, ನ. 23: ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಸಂಘಟನೆ) ವತಿಯಿಂದ ಇದೇ ನವೆಂಬರ್ 30 ರಂದು ಕೊಪ್ಪಳದ ಪ್ರವಾಸಿ ಮಂದಿರ (ಸರ್ಕ್ಯೂಟ್ ಹೌಸ್) ನಲ್ಲಿ ’76ನೇ ಸಂವಿಧಾನ ಸಮರಾ​‍್ಣ ದಿನಾಚರಣೆ ಸಮಾರಂಭ ಹಾಗೂ ಕೊಪ್ಪಳ ಜಿಲ್ಲಾ ಪುನಶ್ಚೇತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ’ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಚಾಲಕ ಹಂಪೆಶ್, ಜಿ ,ಹರಿಗೋಲುತಿಳಿಸಿದ್ದಾರೆ,

            ಅವರು ಸೋಮವಾರದಂದು ಇಲ್ಲಿನ ಪತ್ರಿಕಾ ಭವನದಲ್ಲಿ ಏರಿ​‍್ಡಸಿದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಈ ಕುರಿತು ಕಾರ್ಯಕ್ರಮದ ವಿವರಣೆ ನೀಡಿದ ಅವರು ಕಾರ್ಯಕ್ರಮದ ಉದ್ಘಾಟನೆಯನ್ನು  ಕರ್ನಾಟಕ ದಲಿತ ಸಂಘರ್ಷ ಸಮಿತಿ ಬೆಂಗಳೂರಿನ ರಾಜ್ಯ ಸಂಘಟನಾ ಸಂಚಾಲಕ ಡಿ.ಆರ್‌. ಪಾಂಡುರಂಗ ಸ್ವಾಮಿ ಅವರು ನೆರವೇರಿಸಲಿದ್ದು, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರಿನ ರಾಜ್ಯ ಸಂಚಾಲಕ ಡಿ.ಎನ್‌. ಗಂಗಾಧರ​‍್ಪ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಹಿರಿಯ ಮುಖಂಡರಾದ ಸತ್ಯ ಭದ್ರಾವತಿ ಅವರು ಹೋರಾಟದ ಕ್ರಾಂತಿ ಜ್ಯೋತಿ ಬೆಳಗಿಸಲಿದ್ದಾರೆ. 

             ಗಂಗಾವತಿಯ ರಾಜ್ಯ ಸಂಘಟನಾ ಸಂಚಾಲಕರು ಹಾಗೂ ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿಗಳಾದ ಹಂಪೇಶ ಜಿ. ಹರಿಗೋಲು ಹಾಗೂ ರಾಯಚೂರು ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಶಿವಪ್ಪ ಪಾಲಕನ ಮರಡಿ ಅವರು ಸ್ವಾಗತ ಮತ್ತುಪ್ರಾಸ್ತಾವಿಕನುಡಿ ಮಂಡಿಸಲಿದ್ದಾರೆ,ಸಮಾರಂಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ರಾಜ್ಯ ಸಂಘಟನಾ ಸಂಚಾಲಕರಾದ ಶಿವಾನಂದ ಎಂ. ಸಾವಳಗಿ (ಕಲಬುರಗಿ), ಹೆಚ್‌.ವಿ. ವೆಂಕಟೇಶ್ (ಬೆಂಗಳೂರು), ಸಿ.ಕೆ. ವಸಂತಕುಮಾರ (ಚಿಕ್ಕಮಗಳೂರು), ಎಸ್‌. ಪಕೀರ​‍್ಪ ಮುಂಡಗೋಡು (ಕಾರವಾರ), ವಿಜಯ ನರಸಿಂಹ, ರಮೇಶ ಮಾದರ (ಬೆಳಗಾವಿ),

                 ಗುರುರಾಜ ಸೊರಬ (ಶಿವಮೊಗ್ಗ), ಮಾರುತಿ ಬಿ. ಹೊಸಮನೆ (ಬಾಗಲಕೋಟೆ), ನಿಟ್ಟೂರು ರಂಗಸ್ವಾಮಿ (ತುಮಕೂರು), ಅಂಜಯ್ಯ (ಮಧುಗಿರಿ), ಉಡಚಪ್ಪ ಮಾಳಗಿ (ಹಾವೇರಿ), ಕರಿಸಿದ್ದಯ್ಯ (ಹೊಳಲ್ಕೆರೆ) ಹಾಗೂ ಶಿವಕುಮಾರ (ಚಿತ್ರದುರ್ಗ) ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 

ಈ ಕಾರ್ಯಕ್ರಮಕ್ಕೆ ಕೊಪ್ಪಳ ಜಿಲ್ಲೆಯ ಹಿರಿಯ ಮುಖಂಡರು, ಜಿಲ್ಲಾ ಮತ್ತು ತಾಲೂಕು ಮಹಿಳಾ ಒಕ್ಕೂಟದ ಪದಾಧಿಕಾರಿಗಳು, ಹಾಗೂ ಗಂಗಾವತಿ, ಕಾರಟಗಿ, ಕನಕಗಿರಿ,

            ಕೊಪ್ಪಳ, ಯಲಬುರ್ಗಾ, ಕುಕನೂರು ಮತ್ತು ಕುಷ್ಟಗಿ ತಾಲೂಕು ಸಮಿತಿಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹಂಪೆಶ್ ಹರಿಗೋಲು ತಿಳಿಸಿದರು , ಮುಂದುವರೆದುಮಾತನಾಡಿಹೆಚ್ಚಿನ ಮಾಹಿತಿಗಾಗಿ ಸಂಘಟನೆಯ ಪದಾಧಿಕಾರಿಗಳ 9901527136, 9901912681, 8660015017, ಅಥವಾ 8050365773 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹಂಪೇಶ್ ಹರಿ ಗೋಲ್ ತಿಳಿಸಿದರು,

             ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾಧ್ಯಕ್ಷ ನೀಲಪ್ಪ ಹೊಸಳ್ಳಿ, ತಾಲೂಕ ಅಧ್ಯಕ್ಷ ಮೋಹನ್ ಕಂದಾರಿ ,ಜಿಲ್ಲಾ ಸಂಚಾಲಕ ಯಮನೂರು ಹುಲಿ ಹೈದರ್, ಜಿಲ್ಲಾ ಉಪಾಧ್ಯಕ್ಷ ಗೋವಿಂದಪ್ಪ ಸಂಗಾಪುರ, ಜಿಲ್ಲಾ ಖಜಾಂಚಿ ಆರ್, ಕೆ ,ರಮೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದು ಇದೆ ವೇಳೆ ಕಾರ್ಯಕ್ರಮದ ಕರಪತ್ರವನ್ನು ಬಿಡುಗಡೆ ಗೊಳಿಸಿದರು, 


ಸುದ್ದಿ ಓದಿ