ಕಾರವಾರ

ಬಾಲ ಮಂದಿರ ಪ್ರೌಢಶಾಲೆಯಲ್ಲಿ ವಿಜ್ಞಾನ, ಕಲೆ ಮತ್ತು ಸಂಸ್ಕೃತಿ ಉತ್ಸವದ ಸಂಭ್ರಮ

ಬಾಲ ಮಂದಿರ ಪ್ರೌಢಶಾಲೆಯಲ್ಲಿ ವಿಜ್ಞಾನ, ಕಲೆ ಮತ್ತು ಸಂಸ್ಕೃತಿ ಉತ್ಸವದ ಸಂಭ್ರಮ

             ಕಾರವಾರ 23 : ಬಾಲ ಮಂದಿರ ಪ್ರೌಢಶಾಲೆಯಲ್ಲಿ ಗುರುವಾರದಂದು ಜರುಗಿದ ವಿಜ್ಞಾನ, ಕಲೆ ಮತ್ತು ಸಂಸ್ಕೃತಿ ಉತ್ಸವವು ವಿದ್ಯಾರ್ಥಿಗಳ ಸೃಜನಶೀಲತೆ, ಸಂಶೋಧನಾ ಪ್ರವೃತ್ತಿ, ವೈಜ್ಞಾನಿಕ ಮನೋಭಾವ ಮತ್ತು ಕಲಾತ್ಮಕ ಅಭಿರುಚಿಗೆ ಸಾಕ್ಷಿಯಾಯಿತು.  1232 ವಿದ್ಯಾರ್ಥಿಗಳು ಈ ವೈಜ್ಞಾನಿಕ ಮತ್ತು ಕಲಾ ಮೇಳದಲ್ಲಿ ಸಕ್ರೀಯವಾಗಿ ಪಾಲ್ಗೊಂಡು, 950 ಕ್ಕೂ ಹೆಚ್ಚು ವೈವಿಧ್ಯಮಯವಾದ ವಿಜ್ಞಾನ ಮಾದರಿಗಳನ್ನು, ಕಲಾಕೃತಿಗಳನ್ನು ಪ್ರದರ್ಶಿಸಿದರು.

          ಶಾಲೆಯ ಪ್ರಾಚಾರ್ಯರಾದ ಅಂಜಲಿ ಮಾನೆಯವರ ನೇತೃತ್ವದಲ್ಲಿ ಎಲ್ಲ ಶಿಕ್ಷಕರೂ, ಶಿಕ್ಷಕಿಯರೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿ, ಉತ್ಸವದ ಯಶಸ್ಸಿಗೆ ಕಾರಣರಾದರು. ಎಲ್ಲ ಪಾಲಕರೂ ಉತ್ಸವದಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಪರಿಸರ ಮಾಲಿನ್ಯದ ಕುರಿತಾದ ವಿಜ್ಞಾನ ಮಾದರಿಗಳು, ಸ್ಮಾರ್ಟ್‌ ಸಿಟಿಯ ನಿರ್ಮಾಣದ ಕುರಿತಾದ ಮಾದರಿಗಳು, ಕಾಂಡ್ಲಾವನ ರಕ್ಷಣೆಯ ಅವಶ್ಯಕತೆಯನ್ನು ವಿವರಿಸುವ ಮಾದರಿಗಳ ಜೊತೆ ಗಣಿತವನ್ನು ಸರಳವಾಗಿ ಅಧ್ಯಯನ ಮಾಡಬಹುದಾದ ವಿವರಗಳನ್ನು ನೀಡುವ ಮಾದರಿಗಳು,

            ನಮ್ಮ ನಾಡಿನ ಗತ ವೈಭವಗಳನ್ನು ನೆನಪಿಗೆ ತರುವ ಅರಮನೆ, ದೇವಸ್ಥಾನ ಇತ್ಯಾದಿಗಳ ಮಾದರಿಗಳು, ವೈವಿಧ್ಯಮಯ ರಂಗೋಲಿ, ಕುಶಲ ಕಲೆಗಳನ್ನು ವಿವರಿಸುವ ಮಾದರಿಗಳು ಎಲ್ಲರ ಮನ ಸೆಳೆದವು.  ಉತ್ಸವವನ್ನು ಉದ್ಘಾಟಿಸಿದ ಕಾರವಾರ ಎಜ್ಯುಕೇಶನ್ ಸೊಸೈಟಿಯ ಉಪಾಧ್ಯಕ್ಷರೂ, ನ್ಯಾಯವಾದಿಗಳೂ ಆದ ಅನಿರುದ್ಧ ಹಳದೀಪುರರವರು ಮಾತನಾಡುತ್ತ, ಕೃತ್ತಿಮ ಬುದ್ದಿಮತ್ತೆ ಮಾನವ ಜನಾಂಗಕ್ಕೆ ಅಪಾಯ ಒಡ್ಡುವ ಸ್ಥಿತಿ ನಿರ್ಮಾಣವಾಗಿರುವ ಇಂದಿನ ಸಂದರ್ಭದಲ್ಲಿ, ಇಂಥ ಉತ್ಸವಗಳು ವಿದ್ಯಾರ್ಥಿಗಳಲ್ಲಿ ಭವಿಷ್ಯವನ್ನು ಸಮರ್ಥವಾಗಿ ಎದುರಿಸುವ ತರಬೇತಿಯನ್ನು ಮತ್ತು ವಿಶ್ವಾಸವನ್ನು ನೀಡುತ್ತದೆ.

             ಈ ಕಾರ್ಯಕ್ರಮವನ್ನು ಆಯೋಜಿಸಿದ ಶಿಕ್ಷಕ ವರ್ಗ ಮತ್ತು ಸಕ್ರೀಯವಾಗಿ ಪಾಲ್ಗೊಂಡ ಪಾಲಕರು ಅಬಿನಂದನಾರ್ಹರು ಎಂದರು. ವಿವಿಧ ಮಾದರಿಗಳನ್ನು ಸಿದ್ಧ ಪಡಿಸಿ ಪ್ರಸ್ತುತ ಪಡಿಸಿದ ವಿದ್ಯಾರ್ಥಿಗಳನ್ನು ಅವರು ಅಭಿನಂದಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಪ್ರಾಚಾರ್ಯರಾದ ಡಾ. ಎಸ್‌.ವಿ.ನಾಯಕರವರು ಉತ್ಸವಕ್ಕೆ ತಮ್ಮಮೆಚ್ಚುಗೆಯನ್ನು ವ್ಯಕ್ತಪಡಿಸುತ್ತ,   

ಇಂಥ ಕಾರ್ಯಕ್ರಮಗಳು ವಿದ್ಯಾ-ಠಿ‘ರ್ಥಿಗಳ ಆಂತರ್ಯದಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಹೊರಹೊಮ್ಮಿಸುತ್ತವೆ ಮತ್ತು ಅವರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುತ್ತವೆ ಎಂದರು.                            ವಿದ್ಯಾರ್ಥಿಗಳು  ವೈಜ್ಞಾನಿಕ ಮಾದರಿಗಳನ್ನು ನಿರ್ಮಿಸಲು ಪಟ್ಟಿರುವ ಶ್ರಮ, ಕಾರ್ಯಕ್ಷಮತೆಯನ್ನು  ಅವರು ಶ್ಲಾಘಿಸಿದರು. ಕಾರವಾರ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿಗಳಾದ ಆರ್‌. ಎಸ್‌. ಹಬ್ಬುರವರು ಮತ್ತು ಆಡಳಿತಾಧಿಕಾರಿ ಮತ್ತು ವಿಶೇಷ ಕಾರ್ಯದರ್ಶಿಗಳಾದ ಜಿ.ಪಿ ಕಾಮತ ಸಾಂದರ್ಭಿಕವಾಗಿ ಮಾತನಾಡಿದರು. ಬಾಲಮಂದಿರ ಪ್ರೌಢಶಾಲೆಯ ಪ್ರಾಚಾರ್ಯೆ ಅಂಜಲಿ ಮಾನೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಆಡಳಿತ ಮಂಡಳಿಯ ಮಾರ್ಗದರ್ಶನ, ಪ್ರೋತ್ಸಾಹ ಮತ್ತು ಪೋಷಕರ ಹಾಗೂ ಶಿಕ್ಷಕರ ಸಹಭಾಗಿತ್ವ ಈ ಉತ್ಸವದ ಯಶಸ್ಸಿನ ಹಿಂದಿನ ಶಕ್ತಿಗಳಾಗಿವೆ ಎಂದರು.  

                ಕಾರವಾರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾದ ಎಸ್‌.ಪಿ.ಕಾಮತರವರು ಉತ್ಸವದಲ್ಲಿ ಪಾಲ್ಗೊಂಡು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಹಿಂದು ಪ್ರೌಢಶಾಲೆಯ ಮುಖ್ಯಾಧ್ಯಾಪಕ, ಆರಿ​‍್ವ.ದೇಶಬಂಢಾರಿ, ಸುಮತಿ ದಾಮ್ಲೆ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ಟಿ.ಎಮ್‌.ಶಮಿಂದರ್, ಬಾಲಮಂದಿರ ಪ್ರೌಢಶಾಲೆಯ ವಿಭಾಗ ಮುಖ್ಯಸ್ಥರಾದ ಭಾರತಿ ಐಸಾಕ್, ನಜಿರುದ್ದಿನ್ ಸಯ್ಯದ್ ಮತ್ತು ಮಂಜುಳಾ ಡಿ. ನಾಯಕ ಉಪಸ್ಥಿತರಿದ್ದರು. 


ಸುದ್ದಿ ಓದಿ