ಕಾರವಾರ

ಪೋಕ್ಸೊ ಪ್ರಕರಣಗಳಿಗೆ ಬಡತನ ಮತ್ತು ಜಾತಿ ವ್ಯವಸ್ಥೆ ಕಾರಣ: ಸರ್ಕಾರದಲ್ಲಿ ಮಹಿಳಾ ಸಚಿವರು ಇರಬೇಕಿತ್ತು : ನಾಗಲಕ್ಷ್ಮೀ ಚೌಧರಿ

ಪೋಕ್ಸೊ ಪ್ರಕರಣಗಳಿಗೆ  ಬಡತನ ಮತ್ತು  ಜಾತಿ ವ್ಯವಸ್ಥೆ  ಕಾರಣ: ಸರ್ಕಾರದಲ್ಲಿ ಮಹಿಳಾ ಸಚಿವರು ಇರಬೇಕಿತ್ತು : ನಾಗಲಕ್ಷ್ಮೀ ಚೌಧರಿ
Poverty and the caste system are the reasons for POCSO cases; there should have been women ministers


             ಕಾರವಾರ 23: ಸರ್ಕಾರದಲ್ಲಿ ಮಹಿಳಾ ಸಚಿವರು ಇರಬೇಕಿತ್ತು,  ಈ ಸಂಬಂಧ ಸರ್ಕಾರಕ್ಕೆ  ಪತ್ರ ಬರೆದಿದ್ದೇನೆ  ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಹೇಳಿದರು. ಕಾರವಾರದಲ್ಲಿ ಅವರು ಮಾಧ್ಯಮಗಳ ಜೊತೆ ರವಿವಾರ ಸಂಜೆ ಮಾತನಾಡಿದರು. ಮಹಿಳಾ ಸಚಿವರಿಲ್ಲದೆ ರಾಜ್ಯದ ಸದನ ನಡೆಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು  ಮಹಿಳೆ ಇಲ್ಲದೇ ಸದನ ನಡೆಸುವುದು  ಹೆಣ್ಣು ಕುಲಕ್ಕೆ ಅಗೌರವ ಎಂದರು.

           ಅದಷ್ಟು ಬೇಗ ಮಹಿಳಾ ಸಚಿವೆಯನ್ನು  ಸರ್ಕಾರ ನೇಮಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಹಿಳಾ ಮೀಸಲಾತಿ ಬೇಕು:ಜಿಲ್ಲಾ ಪಂಚಾಯತ್, ತಾಪಂ, ಗ್ರಾಮ ಪಂಚಾಯತಿ, ನಗರಸಭೆ ಮುಂತಾದ ಸ್ಥಳೀಯ ಸಂಸ್ಥೆಗಳಲ್ಲಿ ಶೇ. 50 ರಷ್ಟು  ಮಹಿಳಾ ಮೀಸಲಾತಿ ಇದೆ. ಇದಕ್ಕೆ  ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕಾರಣ  ಎಂದರು. ಮಹಿಳಾ ಮೀಸಲಾತಿ ಇದ್ದರೆ ಈ ಸಮಸ್ಯೆ ಉದ್ಭವಿಸುವುದಿಲ್ಲ ಎಂದರು.

              ಮಹಿಳಾ ಮೀಸಲಾತಿ ಬೇಕು ಎನ್ನುವುದು ಇದಕ್ಕಾಗಿಯೇ  ಎಂದರು. ಪೋಕ್ಸೊ ಪ್ರಕರಣಗಳಲ್ಲಿ  ಶೇ.90 ಪರಿಚಿತರಿಂದಲೇ, ಸಂಬಂಧಿಗಳಿಂದ ನಡೆಯುತ್ತವೆ. ಇದಕ್ಕೆ ಪುರುಷರ ಮೃಗೀಯ ಭಾವನೆ ಕಾರಣ. ಬಡವರು, ದಲಿತರ ಹುಡುಗಿಯರ ಮೇಲೆ ಅತ್ಯಾಚಾರ ಪ್ರಕರಣ ಹೆಚ್ಚು ನಡೆಯುತ್ತವೆ. ಇದಕ್ಕೆಕಾರಣ ಬಡತನ ಮತ್ತು  ಜಾತಿ ವ್ಯವಸ್ಥೆ ಎಂದರು.  ಪೋಕ್ಸೊ ಪ್ರಕರಣದ ಸಂತ್ರಸ್ತ ಬಾಲಕಿಗೆ 4 ಲಕ್ಷ ದಿಂದ  7 ಲಕ್ಷ ಪರಿಹಾರ ಕೊಡಬೇಕು.

              ತಕ್ಷಣ 2 ಲಕ್ಷ ಪರಿಹಾರ ವಿತರಿಸುವ ಕೆಲಸ ಸಮಾಜಕಲ್ಯಾಣ ಇಲಾಖೆಯಿಂದ ಆಗಬೇಕು. ಇದನ್ನು ಈ ಜಿಲ್ಲೆಯಲ್ಲಿ ಹೇಗೆ ಮಾಡಿದ್ದಾರೆಂದು ಪರೀಶೀಲಿಸುವೆ ಎಂದರು. ಮಾಜಿ ಮುಖ್ಯಮಂತ್ರಿ ಅವರ ಕುರಿತ ನಕಲಿ  ಸ್ಟಿಂಗ್ ಆಪರೇಷನ್ ವಿಚಾರವಾಗಿ ಪ್ರತಿಕ್ರಿಯಿಸಿದ ಡಾ. ನಾಗಲಕ್ಷ್ಮೀ ಚೌಧರಿ, ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು, ತನಿಖೆ ನಡೆಯುತ್ತಿದೆ. ಹೀಗಾಗಿ ಈ ಹಂತದಲ್ಲಿ ನಾನು ಸರ್ಕಾರಕ್ಕೆ ಪತ್ರ ಬರೆಯುವ ಅವಕಾಶ ಇಲ್ಲ, ಯಾವುದೇ ಮಹಿಳೆ ಆಯೋಗಕ್ಕೆ  ದೂರು ನೀಡಿಲ್ಲ  ಎಂದರು. 


ಸುದ್ದಿ ಓದಿ