ಕಾರವಾರ

ಕಾರವಾರ ಖಜಾನೆ ಇಲಾಖೆಯಲ್ಲಿ ದ್ವಿತೀಯ ದರ್ಜೆ ಗುಮಾಸ್ತ ರಸ್ತೆ ಅಪಘಾತದಲ್ಲಿ ಸಾವು

ಕಾರವಾರ ಖಜಾನೆ ಇಲಾಖೆಯಲ್ಲಿ ದ್ವಿತೀಯ ದರ್ಜೆ ಗುಮಾಸ್ತ ರಸ್ತೆ ಅಪಘಾತದಲ್ಲಿ ಸಾವು


          ಕಾರವಾರ 23: ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಖಜಾನೆಯ ಇಲಾಖೆಯ ನೌಕರ ಮೃತಪಟ್ಟ ಘಟನೆ ಕಾರವಾರ ತಾಲೂಕಿನ ಮಾಜಾಳಿಯಲ್ಲಿ ನಡೆದಿದೆ. ಮೃತ ನೌಕರ ಹಳಿಯಾಳ ಮೂಲದ ಅಭಿಷೇಕ ಪುರುಷೋತ್ತಮ ಹಳಿಯಾಳಕರ ಎಂದು ಪೊಲೀದೆರು ತಿಳಿಸಿದ್ದಾರೆ.

         ಅಭಿಷಕ ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಖಜಾನೆ ಇಲಾಖೆಯಲ್ಲಿ ದ್ವಿತೀಯ ದರ್ಜೆ ಗುಮಾಸ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ನವೆಂಬರ್ 21ರ ರಾತ್ರಿ ಸುಮಾರು 11.15ರ ವೇಳೆಗೆ ಅಭಿಷೇಕ ಅವರು ಕೆಎ-65/ಕೆ-7169 ನೋಂದಣಿ ಸಂಖ್ಯೆಯ ರಾಯಲ್ ಎನ್ಫೀಲ್ಡ್‌ ಬೈಕ್ನಲ್ಲಿ ಮಾಜಾಳಿಯ ಬಾಬಾ ರಾಮದೇವ ಹೋಟೆಲ್ ಕಡೆಯಿಂದ ಕಾರವಾರಕ್ಕೆ ಬರುತ್ತಿದ್ದರು.

             ಮಾಜಾಳಿಯ ವಿಠಲ-ರುಕ್ಕಿಣಿರ ದೇವಸ್ಥಾನದ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸಮೇತ ರಸ್ತೆಗೆ ಬಿದ್ದ ಅಭಿಷೇಕ ಅವರ ತಲೆ ಹಾಗೂ ಕೈಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 


ಸುದ್ದಿ ಓದಿ