ಕಾರವಾರ

ರಾಜ್ಯ ಕಡಲ ಮತ್ತು ಜಲಮಾರ್ಗ ಸಾರಿಗೆ ಸಮಿತಿಯ ಸಭೆ

ರಾಜ್ಯ ಕಡಲ ಮತ್ತು ಜಲಮಾರ್ಗ ಸಾರಿಗೆ ಸಮಿತಿಯ ಸಭೆ

ಲೋಕದರ್ಶನ ವರದಿ 

         ಕಾರವಾರ 17 : ಕರ್ನಾಟಕ ರಾಜ್ಯ ಕಡಲ ಮತ್ತು ಜಲಮಾರ್ಗ ಸಾರಿಗೆ ಸಮಿತಿಯ ಸಭೆಯು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು. ಸಭೆಯಲ್ಲಿ ಯೋಜನೆಗಳ ಅನುಷ್ಠಾನವನ್ನು ತ್ವರಿತಗೊಳಿಸುವುದು, ಹೂಡಿಕೆ ಅವಕಾಶಗಳನ್ನು ತೆರೆಯುವುದು ಮತ್ತು ಕರ್ನಾಟಕದ ಕಡಲ ಮೂಲಸೌಕರ್ಯವನ್ನು ಬಲಪಡಿಸುವುದರ ಮೇಲೆ ಗಮನಹರಿಸಿ, ರಾಜ್ಯಾದ್ಯಂತ ಕಾರ್ಯತಂತ್ರದ ದೃಷ್ಠಿಯಿಂದ ಮಹತ್ವದ ಕಡಲ ಯೋಜನೆಗಳನ್ನು ಮುನ್ನಡೆಸುವ ಕುರಿತು ಚರ್ಚಿಸಲಾಯಿತು.   

            ಈ ಉಪಕ್ರಮಗಳನ್ನು ಮುನ್ನಡೆಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ, ಸಚಿವ ಸಂಪುಟದಿಂದ ಅನುಮೋದನೆ ಪಡೆದ ಎಂಟು ಕಡಲ ಯೋಜನೆಗಳನ್ನು ಒಳಗೊಂಡ ರೂ. 8,295 ಕೋಟಿ ಅಂದಾಜು ಹೂಡಿಕೆ ಸಾಮರ್ಥ್ಯದ ಮಾರುಕಟ್ಟೆ ಸಾಮಾಗ್ರಿಗಳು ಮತ್ತು ಹೂಡಿಕೆದಾರರ ಕೈಪಿಡಿಯನ್ನು ಬಂದರು ಇಲಾಖೆ ನಿರ್ದೇಶಕ ಮತ್ತು ಕರ್ನಾಟಕ ಜಲಸಾರಿಗೆ ಮಂಡಳಿ ಸದಸ್ಯ ಕ್ಯಾಪ್ಟನ್ ಸಂಜಯ್ ಟಿ.ಉಗಲ್ಮುಗಲೆ, ಮೂಲಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಕಾರ್ಯದರ್ಶಿ ಡಾ.ವಿಶಾಲ್ ಆರ್‌.,  ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲನಿ ರಜನೀಶ್, ಕರ್ನಾಟಕ ಜಲಸಾರಿಗೆ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್‌.ಸಿ.ಬಾಲಚಂದ್ರ ಬಿಡುಗಡೆ ಮಾಡಿದರು.   


ಸುದ್ದಿ ಓದಿ