ಉಪ್ಪಾರ ಕೇರಿಯಲ್ಲಿ ಬೆಕ್ಕಿನ ಮರಿ ಕೊಂದ ಹೆಬ್ಬಾವು
ಕಾರವಾರ 12; ಕುಮಟಾದ ಉಪ್ಪಾರಕೇರಿ ಮೂರನೇ ಕ್ರಾಸ್ ನಲ್ಲಿರುವ ಖಾಲಿ ಜಾಗದಲ್ಲಿ ಬೆಳೆದ ದಟ್ಟ ಮರಗಿಡಗಳಿರುವ ಪ್ರದೇಶದಲ್ಲಿದ್ದ ಬೃಹತ್ ಹೆಬ್ಬಾವು ಆಹಾರ ಅರಿಸಿ ಬಂದು ಬೆಕ್ಕಿನ ಮರಿಯನ್ನು ಬೇಟೆಯಾಡಿದ ಘಟನೆ ರಾತ್ರಿ ನಡೆದಿದೆ. ಹೆಬ್ಬಾವು ಬೆಕ್ಕು ಹಿಡಿದ ಸುದ್ದಿ ತಿಳಿದ ಹಾವುಗಳ ರಕ್ಷಕ ಪವನ್ ನಾಯ್ಕ ಕಲಭಾಗ್ ಸ್ಥಳಕ್ಕೆ ಆಗಮಿಸಿ, ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟರು. ಅತೀ ಉದ್ದದ ಹಾಗೂ ಭಾರದ ಹೆಬ್ಬಾವು ಹಿಡಿಯಲು ಬಾಳಿಗ ಕಾಲೇಜಿನ ಪದವಿ ಯುವಕರಾದ ಗಗನ್ ನಾಯ್ಕ, ಆನಂದ ,ವಿಶ್ವಾಸ್ ,ರಕ್ಷಿತ್ ಸಹಾಯ ಮಾಡಿದರು.
ಹೆಬ್ಬಾವಿನ ಹಿಡಿತಕ್ಕೆ ಬೆಕ್ಕಿನ ಮರಿ ಪ್ರಾಣ ಬಿಟ್ಟಿತ್ತು. ಅಂದಾಜು 13 ವರ್ಷದ ಹೆಬ್ಬಾವು 12 ಅಡಿ ಉದ್ದವಿದ್ದು, ಬೃಹತ್ ಆಗಿ ಬೆಳೆದಿತ್ತು. 26 ಕೆಜಿ ಗಿಂತ ಹೆಚ್ಚು ಭಾರವಿತ್ತು. ಅತೀ ಉದ್ದದ ಹೆಬ್ಬಾವು ಜನವಸತಿ ಪ್ರದೇಶದಲ್ಲಿ ಪ್ರತ್ಯೇಕವಾದದ್ದು ಸುತ್ತಲ ಜನರಲ್ಲಿ ಆತಂಕ ತಂದಿತ್ತು. ಪವನ್ ನಾಯ್ಕ ಹೆಬ್ಬಾವು, ಇಲಿ , ಹೆಗ್ಗಣ, ನಾಯಿ, ಬೆಕ್ಕು, ಚಿರತೆ, ಸಣ್ಣ ಕರು ಗಳನ್ನು ಬೇಟೆಯಾಡುತ್ತವೆ. ಭಯ ಪಡುವ ಅಗತ್ಯ ಇಲ್ಲ. ಹೆಬ್ಬಾವು ರಕ್ಷಿಸಿ ಕಾಡಿಗೆ ಬಿಡಬೇಕು. ಹೆಬ್ಬಾವು ಆಹಾರ ಅರಸಿ ಬಂದಿದೆ . ಪ್ರಕೃತಿ ಆಹಾರ ಸರಪಳಿಯಲ್ಲಿ ಹೆಬ್ಬಾವು ಬೆಕ್ಕು ಬೇಟೆ ಹುಡುಕಿ ಬಂದಿದೆ. ಇದು ಪ್ರಕೃತಿ ಸಹಜ ಪ್ರಕ್ರಿಯೆ ಎಂದರು.