ಗದಗ

ಪರೀಕ್ಷಾ ಶುಲ್ಕ ಕಟ್ಟದ ಕಾಲೇಜು ಆಡಳಿತದ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ

ಪರೀಕ್ಷಾ ಶುಲ್ಕ ಕಟ್ಟದ ಕಾಲೇಜು ಆಡಳಿತದ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ



        ಲಕ್ಷ್ಮೇಶ್ವರ 12 : ಪಟ್ಟಣದ ಪುರಸಭೆಯ ಕಲಾ ಮಹದ್ಯಾಲಯದಲ್ಲಿ ಪದವಿ ಕಲಿಯುತ್ತಿರುವ ನಾಲ್ಕು ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕದ ಪೀಯನ್ನು ವಿದ್ಯಾರ್ಥಿಗಳಿಂದ ಕಟ್ಟಿಸಿಕೊಂಡು ಪರೀಕ್ಷಾ ಬೋರ್ಡ್‌ಗೆ ಕಟ್ಟದೆ ವಿದ್ಯಾರ್ಥಿಗಳ ಪರೀಕ್ಷೆಗೆ ಹಾಜರಾಗದಂತೆ ಅವರ ಭವಿಷ್ಯವನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿ ಎಬಿವಿಪಿ ವಿದ್ಯಾರ್ಥಿ ಘಟಕದ ದಿಂದ ಕಾಲೇಜು ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

       ಈ ಸಮಯದಲ್ಲಿ ಮಾತನಾಡಿದ ಎಬಿವಿಪಿ ಜಿಲ್ಲಾ ಸಂಚಾಲಕ ಅಭಿಷೇಕ ಉಮಚಗಿ ವಿದ್ಯಾರ್ಥಿಗಳು ಪರೀಕ್ಷೆ ಪೀಯನ್ನು ಕಾಲೇಜಿನ ನಿಯಮದಸಾರ ಕಟ್ಟಿದ್ದಾರೆ. ಆದರೆ ಕಾಲೇಜಿನ ಪಿವುನ ಆ ಹಣವನ್ನು ಪರೀಕ್ಷಾ ಬೋರ್ಡಿಗೆ ಕಟ್ಟದೆ ಹಣವನ್ನು ತೆಗೆದುಕೊಂಡು ಹೋಗಿದ್ದಾನೆ ಇದರಿಂದ ನಾಲ್ಕು ವಿದ್ಯಾರ್ಥಿಗಳ ಪರೀಕ್ಷೆಗೆ ಹಾಜರಾಗಲು ಆಗುವುದಿಲ್ಲ ಇದಕ್ಕೆ ಪ್ರಿನ್ಸಿಪಾಲರ ನೇರ ಹೊಣೆಗಾರರು ಎಂದು ತಮ್ಮ ಅಕ್ರೋಶವನ್ನು ವ್ಯಕ್ತಪಡಿಸಿದರು ಹಾಗೂ ಕಾಲೇಜಿನಲ್ಲಿ ಯಾವುದೇ ಸರಿಯಾದ ವ್ಯವಸ್ತೆಯಿಲ್ಲದೆ ವಿದ್ಯಾರ್ಥಿಗಳು ತಮ್ಮ ಅಳಲನ್ನು ಕೋಡಿಕೊಂಡರು.

           ಈ ಕುರಿತು ಪ್ರತಿಕ್ರಿಯೆ ನೀಡಿದ ಪ್ರಾಚಾರ್ಯರಾದ ವಿ. ಎನ್ ನಾಗಶೆಟ್ಟಿ ಅವರು ನಮ್ಮ ಕಾಲೇಜಿನ ಪಿವುನನಿದ ತಪ್ಪು ನಡೆದಿದೆ ವಿದ್ಯಾರ್ಥಿಗಳ ಪರೀಕ್ಷೆಗೆ ಹಾಜರಾಗಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದೇವೆ ಅವರಿಗೆ ವಿದ್ಯಾರ್ಥಿಗಳ ಪರೀಕ್ಷೆಗೆ ಅನುಕೂಲ ಕಲ್ಪಿಸುತ್ತೇವೆ ಎಂದರು. ಈ ಸಮಯದಲ್ಲಿ ಎಬಿವಿಪಿ ಘಟಕದ ವಿದ್ಯಾರ್ಥಿಗಳು ಕಾಲೇಜಿನ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಇದ್ದರು. 


ಸುದ್ದಿ ಓದಿ