ಗದಗ

ಸಮರ್ಥವಾಗಿ ಬರಗಾಲ ಎದುರಿಸಲು ಅಧಿಕಾರಿ ಗಳೊಂದಿಗೆ ರೈತರ ಸಭೆ

ಸಮರ್ಥವಾಗಿ ಬರಗಾಲ ಎದುರಿಸಲು ಅಧಿಕಾರಿ ಗಳೊಂದಿಗೆ ರೈತರ ಸಭೆ


ಲಕ್ಷ್ಮೇಶ್ವರ " 12 ; ರಾಜ್ಯದಲ್ಲಿ ಆವರಿಸಿರುವ ಬರಗಾಲದ ಹಿನ್ನೆಲೆ ಸಮರ್ಥವಾಗಿ ಎದುರಿಸಲು ಅಧಿಕಾರಿಗಳೊಂದಿಗೆ ಸಮಗ್ರ ರೈತ ಸಂಘಟನೆಗಳ ಒಕ್ಕೂಟ ಸಮ್ಮುಖದಲ್ಲಿ ಬುಧವಾರ ದಿವಸ ಲಕ್ಷ್ಮೇಶ್ವರ ತಾಲೂಕ ತಹಶೀಲ್ದಾರ್ ಕಛೇರಿಯಲ್ಲಿ ಸಭೆ ನಡೆಯಿತು ಲಕ್ಷ್ಮೇಶ್ವರ ತಾಲೂಕಿನ ರೈತರ ವಿವಿಧ ಬೇಡಿಕೆ ಹಾಗೂ ಸಮಸ್ಯೆಗಳ ಕುರಿತು ತಾಲೂಕ ದಂಡಾಧಿಕಾರಿಗಳ ಅಧ್ಯಕ್ಷತೆಯಲ್ಲಿ,ಕಾರ್ಯ ನಿರ್ವಾಹಕ ಅಧಿಕಾರಿಗಳು ತಾಲೂಕಾ ಪಂಚಾಯತ ಲಕ್ಷ್ಮೇಶ್ವರ, ಸಹಾಯಕ ಕೃಷಿ ನಿರ್ದೇಶಕರು ಶಿರಹಟ್ಟಿ, ಸಹಾಯಕ ನಿರ್ದೇಶಕರು ಪಶು ಸಂಗೋಪನಾ ಇಲಾಖೆ ಲಕ್ಷ್ಮೇಶ್ವರ, ಹಿರಿಯ ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ ಶಿರಹಟ್ಟಿ, ತಾಲೂಕಾ ಆರೋಗ್ಯ ಇಲಾಖೆ ಅಧಿಕಾರಿಗಳು ಲಕ್ಷ್ಮೇಶ್ವರ, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಕಾರ್ಯ ಮತ್ತು ಪಾಲನಾ ಉಪವಿಭಾಗ ಹೆಸ್ಕಾಂ ಲಕ್ಷ್ಮೇಶ್ವರ,ಮುಖ್ಯಾಧಿಕಾರಿಗಳುಪುರ ಸಭೆ ಲಕ್ಷ್ಮೇಶ್ವರ,ಕಂದಾಯ ನೀರೀಕ್ಷಕರು ಲಕ್ಷ್ಮೇಶ್ವರ ಇವರೊಂದಿಗೆ ಸಮಗ್ರ ರೈತ ಸಂಘಟನೆಯ ಒಕ್ಕೂಟದ ಅಧ್ಯಕ್ಷರು ಹಾಗೂ ರೈತ ಸಂಘದ ಪ್ರತಿನಿಧಿಗಳೊಂದಿಗೆ ಸಭೆ ನಡೆಯಿತು ಸಭೆಯಲ್ಲಿ ಬರಗಾಲದ ಪರಿಸ್ಥಿತಿಯಲ್ಲಿ ಜಾನುವಾರುಗಳಿಗೆ ಗೋಶಾಲೆ/ಮೇವು ಬ್ಯಾಂಕ್ ತೆರೆಯುವ ಬಗ್ಗೆ,ರೈತರಿಗೆ ಸರಿಯಾದ ಕ್ರಮದಲ್ಲಿ ಬೆಳೆ ಪರಿಹಾರ ಮತ್ತು ಬೆಳೆವಿಮೆ ಹಣವನ್ನು ರೈತರ ಖಾತೆಗೆ ಜಮೆ ಮಾಡುವದು, ಜನ ಮತ್ತು ಜಾನುವಾರುಗಳಿಗೆ ಸಮರ​‍್ಕವಾಗಿ ಕುಡಿಯುವ ನೀರು ಪೂರೈಸುವದು,ರೈತರ ಪಂಪಸೆಟಗಳಿಗೆ ವಿದ್ಯುತ್ ಸಂಪರ್ಕ ಕಡಿತಗೋಳಿಸಿರುವದನ್ನು ಮರು ಸಂಪರ್ಕ ಕಲ್ಪಿಸುವದು,ಹಾಗೂ ಇನ್ನು ಮುಂತಾದ ರೈತರ ಸಮಸ್ಯೆಗಳಿಗೆ ಅತೀ ಶೀಘ್ರದಲ್ಲಿ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳಿಗೆ ಆಗ್ರಹಿಸಲಾಯಿತು. 


ಸುದ್ದಿ ಓದಿ