ಗದಗ

ಅಡರಕಟ್ಟಿ ಶಾಲೆಯಲ್ಲಿ ದೂಡ್ಡೂರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ

ಅಡರಕಟ್ಟಿ ಶಾಲೆಯಲ್ಲಿ ದೂಡ್ಡೂರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ
'Pratibha Karanji' (Talent Festival) event at the cluster level for the Dodduru cluster, held at Ad


          ಲಕ್ಷ್ಮೇಶ್ವರ " 13: ತಾಲೂಕಿನ ಅಡರಕಟ್ಟಿ ಗ್ರಾಮದ ಪಿ ಎಮ್ ಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 2026- 27 -ನೇ ಸಾಲಿನ ದೊಡ್ಡೂರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧ ಕಾರ್ಯಕ್ರಮ ಸಂಭ್ರಮದೊಂದಿಗೆ ಜರುಗಿತು ಕಾರ್ಯಕ್ರಮವನ್ನು ಸಸಿ ಗಿಡಕ್ಕೆ ನೀರು ಹಾಕುವ ಮೂಲಕ ನೌಕರರ ಸಂಘದ ಅಧ್ಯಕ್ಷರು ಶಾಲೆಯ ಮುಖ್ಯೋಪಾಧ್ಯಾಯರು ಎಸ್ ಡಿ ಎಂ ಸಿ ಅಧ್ಯಕ್ಷರು ಸರ್ವ ಸದಸ್ಯರು ಉದ್ಘಾಟಿಸಿದರು.

        ಕಾರ್ಯಕ್ರಮ ಕುರಿತು ಪಿ ಎಮ್ ಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಧಾನ ಗುರುಗಳಾದ ಪ್ರಶಾಂತ್ ಕಾಳಶೆಟ್ಟಿ ಲಕ್ಷ್ಮೇಶ್ವರ ಪಟ್ಟಣದ ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯ ಪ್ರಧಾನ ಗುರುಗಳಾದ ಬಸವರಾಜ ಕುಂಬಾರ ಅವರು ಮಾತನಾಡಿಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧಾ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಲು ಒಂದು ವೇದಿಕೆಯಾಗಿದೆ ಈ ಸ್ಪರ್ಧಾ ಕಾರ್ಯಕ್ರಮದಿಂದ ವಿದ್ಯಾರ್ಥಿಗಳು ಜಿಲ್ಲಾ ಮತ್ತು ತಾಲೂಕು ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಒಂದು ಅವಕಾಶ ದೊರಕುವ ಒಂದು ವೇದಿಕೆಯಾಗಿದೆ ಎಂದರು.

          ವಿದ್ಯಾರ್ಥಿಗಳಿಂದ ವಿವಿಧ ಸ್ಪರ್ಧೆಗಳು ಸಾಂಸ್ಕೃತಿಕ ಸ್ಪರ್ಧೆಗಳು ಮನರಂಜನೆ ಕಾರ್ಯಕ್ರಮಗಳು ನಡೆದವು ಈ ಸಮಯದಲ್ಲಿ ನೌಕರರ ಸಂಘದ ತಾಲೂಕ ಅಧ್ಯಕ್ಷ ಜಿ.ಡಿ.ಹವಳದ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಲ್ಲೇಶಪ್ಪ ಅಡರಕಟ್ಟಿ ಸಿ ಆರ್ ಬಿ ಪವರ್ ಹಾಗೂ ಸರ್ವ ಸದಸ್ಯರು ಮತ್ತು ಬೇರೆ ಬೇರೆ ಶಾಲೆಯ ಗುರುಗಳು ಗುರುಮಾತೆಯರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ಡಿ ಡಿ ಲಮಾಣಿ. ಅವರು ಕಾರ್ಯಕ್ರಮ ನಿರೂಪಿಸಿದರು 


ಸುದ್ದಿ ಓದಿ