ಲಕ್ಷ್ಮೇಶ್ವರದಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರ
ಲಕ್ಷ್ಮೇಶ್ವರ 14: ಪಟ್ಟಣದ ತೋಟದ ನರ್ಸಿಂಗ್ ಹೋಮ್ ನಲ್ಲಿ ಡಾ ರಾಹುಲ್ ತೋಟದ ಅವರ ಹುಟ್ಟು ಹಬ್ಬದ ಅಂಗವಾಗಿ ಶಂಕರ್ ಕಣ್ಣಿನ ಆಸ್ಪತ್ರೆ, ಶಿವಮೊಗ್ಗ ಹಿರಿಯ ನಾಗರಿಕರ ಹಾಗೂ ನಿವೃತ್ತ ನೌಕರರ ಸಂಘ,ತಾಲೂಕು ವೈದ್ಯರ ಸಂಘ ಇವರ ಸಂಯೋಗದಲ್ಲಿ ನಡೆದ ಉಚಿತ ಕಣ್ಣಿನ ತಪಾಸಣಿ ಶಿಬಿರವನ್ನು ಸಸಿ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದ
ಹಿರಿಯ ನಾಗರಿಕರು ವೈದ್ಯರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ.ಪಿ ಡಿ ತೋಟದ ಅವರು ಎಲ್ಲ ಬಡವರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಹಮ್ಮಿಕೊಂಡಿದ್ದು ಕಣ್ಣಿನ ಸಮಸ್ಯೆ ಇರುವ ಎಲ್ಲ ರೋಗಿಗಳು ಬಂದು ಇದರ ಸದುಪಯೋಗ ಪಡೆದು ಕೊಳ್ಳಬೇಕು ಎಂದರು
ಹಿರಿಯ ನಾಗರಿಕರ ಹಾಗೂ ನಿವೃತ್ತಿ ನೌಕರರ ಸಂಘದ ಅಧ್ಯಕ್ಷ ಸಿ ಆರ್ ಲಕ್ಕುಂಡಿಮಠ ಅವರು ಮಾತನಾಡಿ ಹಿರಿಯ ನಾಗರಿಕರಿಗೆ ಕಣ್ಣಿನ ಸಮಸ್ಯೆಗಳು ಹೆಚ್ಚು ಕಂಡು ಬರುತ್ತವೆ ಅವರಿಗೆ ಉಚಿತ ಚಿಕಿತ್ಸೆ ದೊರಕುವ ಉದ್ದೇಶದಿಂದ ಶಂಕರ್ ಕಣ್ಣಿನ ಆಸ್ಪತ್ರೆ ಶಿವಮೊಗ್ಗದವರು ಕ್ಯಾಂಪನ್ನು ಆಯೋಜಿಸಿದ್ದು ಎಲ್ಲ ಕಣ್ಣಿನ ತೊಂದರೆ ಇರುವವರು ಇದರ ಸದುಪಯೋಗ ಪಡೆದು ಕೊಳ್ಳಬೇಕು ಎಂದರು.
ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಜನರು ಬಂದು ಉಚಿತ ಕಣ್ಣಿನ ತಪಾಸಣೆ ಶಿಬಿರದ ಸದುಪಯೋಗವನ್ನು ಪಡೆದುಕೊಂಡರು ಈ ಸಮಯದಲ್ಲಿ ಚಂಬಣ್ಣ ಬಾಳಿಕಾಯಿ ಡಾ ಪ್ರಸನ್ನ ಕುಲಕರ್ಣಿ, ಡಾ ಆಶಾ ತೋಟದ, ಡಾ ಅಮರೇಶ್ ಅಮರಶೆಟ್ಟರ್, ಡಾ ರಾಹುಲ್ ತೋಟದ,ಆಯ್ ಎಸ್ ಮಡಿವಾಳರ, ಎಲ್ ಆರ್ ಮಲಸಮುದ್ರ, ಎಂ ಕೆ ಕಳ್ಳಿಮಠ,ಡಾ ಕಲೀವಾಳಮಠ, ಬಸವರಾಜ ಸಂಗಪ್ಪಶೆಟ್ಟರ, ರಾಜು ಸೂರಣಗಿ, ಎಸ್ ಸಿ ಕುಮಸಿ, ದೀಪಾ ಬಡಿಗೇರ, ಶಿಗ್ಲಿಮಠ,ಸೇರಿದಂತೆ ಇನ್ನು ಅನೇಕರು ಇದ್ದರು.