ಗದಗ

ಸ.ಮಾ.ಪ್ರಾ.ಕ.ಹೆ.ಮಕ್ಕಳ ಶಾಲೆಯಲ್ಲಿ ಜವರಲಾಲ್ ನೆಹರು ಜನ್ಮದಿನ ಆಚರಣೆ

ಸ.ಮಾ.ಪ್ರಾ.ಕ.ಹೆ.ಮಕ್ಕಳ ಶಾಲೆಯಲ್ಲಿ ಜವರಲಾಲ್ ನೆಹರು ಜನ್ಮದಿನ ಆಚರಣೆ

  

             ಲಕ್ಷ್ಮೇಶ್ವರ 14 ;  ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಪಂಡಿತ್ ಜವಾಹರ್ ಲಾಲ್ ನೆಹರು ಅವರ ದಿನವನ್ನು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಮಕ್ಕಳ ದಿನವನ್ನಾಗಿ ಆಚರಿಸಲಾಯಿತು. ಈ ಸಮಯದಲ್ಲಿ ಮಾತನಾಡಿದ ಶಾಲೆಯ ಶಿಕ್ಷಕಿ ಎಚ್ ಡಿ ನಿಂಗರೆಡ್ಡಿ ಅವರು ಪಂಡಿತ್ ಜವಾಹರಲಾಲ್ ನೆಹರು ಅವರು ಸ್ವತಂತ್ರ ಭಾರತದ ಮೊದಲ ಪ್ರಧಾನಮಂತ್ರಿ, ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರ ಮತ್ತು ಆಧುನಿಕ ಭಾರತದ ಶಿಲ್ಪಿಯಾಗಿದ್ದಾರೆ. ಮಕ್ಕಳ ಮೇಲಿನ ಅಪಾರ ಪ್ರೀತಿಯಿಂದ ಇವರನ್ನು ಎಲ್ಲರೂ "ಚಾಚಾ ನೆಹರು" ಎಂದು ಕರೆಯುತ್ತಾರೆ.

             ನೆಹರು ಅವರ ಜನನ ಮತ್ತು ಆರಂಭಿಕ ಜೀವನ ಇವರು ನವೆಂಬರ್ 14, 1889 ರಂದು ಉತ್ತರ ಪ್ರದೇಶದ ಅಲಹಾಬಾದ್ನಲ್ಲಿ ಜನಿಸಿದರು. ಇವರ ಕುಟುಂಬ: ತಂದೆ ಮೋತಿಲಾಲ್ ನೆಹರು ಪ್ರಸಿದ್ಧ ವಕೀಲರು ಮತ್ತು ಸ್ವಾತಂತ್ರ್ಯ ಹೋರಾಟಗಾರರು ತಾಯಿ ಸ್ವರೂಪರಾಣಿ.ಶಿಕ್ಷಣ ಇಂಗ್ಲೆಂಡಿನ ಹ್ಯಾರೊ ಶಾಲೆ ಮತ್ತು ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದಲ್ಲಿ ವಿಜ್ಞಾನ ಮತ್ತು ಕಾನೂನು ಶಿಕ್ಷಣವನ್ನು ಪೂರ್ಣಗೊಳಿಸಿದರು.ಸ್ವಾತಂತ್ರ್ಯ ಹೋರಾಟ ಮತ್ತು ಪ್ರಧಾನಿ ಸೇವೆಸ್ವಾತಂತ್ರ್ಯ ಚಳವಳಿ 1912ರಲ್ಲಿ ಭಾರತಕ್ಕೆ ಮರಳಿದ ನಂತರ ಮಹಾತ್ಮ ಗಾಂಧಿಯವರ ಮಾರ್ಗದರ್ಶನದಲ್ಲಿ ಅಸಹಕಾರ ಚಳವಳಿ,                       ಉಪ್ಪಿನ ಸತ್ಯಾಗ್ರಹ ಮತ್ತು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಹಲವು ಬಾರಿ ಜೈಲುವಾಸ ಅನುಭವಿಸಿದರು.      ಪ್ರಧಾನಮಂತ್ರಿ: 1947ರಲ್ಲಿ ಭಾರತ ಸ್ವತಂತ್ರವಾದಾಗಿನಿಂದ 1964ರಲ್ಲಿ ನಿಧನ ರಾಗುವವರೆಗೂ ದೇಶದ ಮೊದಲ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಆಧುನಿಕ ಭಾರತದ ನಿರ್ಮಾಣ ದೇಶದಲ್ಲಿ ಕೈಗಾರೀಕೀಕರಣ, ವಿಜ್ಞಾನ ಮತ್ತು ತಂತ್ರಜ್ಞಾನ, ಪಂಚವಾರ್ಷಿಕ ಯೋಜನೆಗಳು ಹಾಗೂ ಶಿಕ್ಷಣ ಸಂಸ್ಥೆಗಳ (ಋಖಿ, ಂಋಒಖ) ಸ್ಥಾಪನೆಗೆ ಭದ್ರ ಬುನಾದಿ ಹಾಕಿದರು.

              ಮಕ್ಕಳ ದಿನಾಚರಣೆ ಮಕ್ಕಳನ್ನು ದೇಶದ ಭವಿಷ್ಯವೆಂದು ನಂಬಿದ್ದ ನೆಹರು ಅವರ ಜನ್ಮದಿನವಾದ ನವೆಂಬರ್ 14 ರಂದು ಪ್ರತಿ ವರ್ಷ "ಮಕ್ಕಳ ದಿನಾಚರಣೆ ಎಂದು ಆಚರಿಸಲಾಗುತ್ತದೆ. ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು. ನಾವು ಅವರನ್ನು ಬೆಳೆಸುವ ರೀತಿಯೇ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ" ಎಂಬುದು ಅವರ ಪ್ರಮುಖ ಸಂದೇಶವಾಗಿತ್ತು.ಸೋಲು ಕಂಡು ಹೆದರಬೇಡಿ, ಸವಾಲುಗಳನ್ನು ಧೈರ್ಯದಿಂದ ಎದುರಿಸಿ.ಕ್ರಿಯಾಶೀಲತೆ ಯಿಲ್ಲದ ಕಲ್ಪನೆಗೆ ಯಾವುದೇ ಅರ್ಥವಿಲ್ಲ.ನಾವು ಶಾಂತಿಯ ಬಗ್ಗೆ ಮಾತನಾಡುವಾಗ, ಅದು ಕೇವಲ ಯುದ್ಧದ ಅನುಪಸ್ಥಿತಿಯಲ್ಲ; ಅದು ಮನಸ್ಸಿನ ಶಾಂತಿ ಮತ್ತು ಸಹಬಾಳ್ವೆಯಾಗಿದೆ.

               ಎಂದು  ದೇಶದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಿದ ಜವಾಹರ್ ಲಾಲ್ ನೆಹರು ಅವರು ತಮ್ಮ ಜನ್ಮದಿನಾಚರಣೆಯನ್ನು ಮಕ್ಕಳ ದಿನವನ್ನು ಆಚರಿಸಿ ಎಂದು ಕರೆ ನೀಡಿದರು ಅಂದಿನಿಂದ ಇಂದಿನವರೆಗೂ ನವೆಂಬರ್ 14 ರಂದು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದರು ಈ ಸಮಯದಲ್ಲಿ ಶಾಲೆಯ ಪ್ರಧಾನ ಗುಣಗಳಾದ ಬಸವರಾಜ ಕುಂಬಾರ ಆರ್ ಎಂ ಶಿರಹಟ್ಟಿ ಆರ್ ಕೆ ಉಪನಾಳ ಎಲ್ ಎ ಬಣಕಾರ ಸೇರಿದಂತೆ ಶಾಲೆಯಲ್ಲ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು 


ಸುದ್ದಿ ಓದಿ