ಬಳ್ಳಾರಿ

ಎಚ್‌ಎಲ್ ಸಿ ಮತ್ತು ಎಲ್ ಎಲ್ ಸಿ ಕಾಲುವೆಗಳಿಗೆ ಡಿಸೆಂಬರ್ 30ರವರೆಗೂ ನೀರು ಬಿಡಿ : ಎ ಐ ಕೆ ಕೆಎಂಎಸ್ ಒತ್ತಾಯ

ಎಚ್‌ಎಲ್ ಸಿ ಮತ್ತು ಎಲ್ ಎಲ್ ಸಿ  ಕಾಲುವೆಗಳಿಗೆ ಡಿಸೆಂಬರ್ 30ರವರೆಗೂ ನೀರು ಬಿಡಿ : ಎ ಐ ಕೆ ಕೆಎಂಎಸ್ ಒತ್ತಾಯ


            ಬಳ್ಳಾರಿ. ನ. 13 : ಸರ್ಕಾರದ ಬೆಲೆ ಏರಿಕೆಯ ಮಧ್ಯೆ ರೈತ ಕಷ್ಟಪಟ್ಟು ಸಾಲ ಮಾಡಿ ಬೆಳೆ ಬೆಳೆದಿದ್ದಾರೆ, ಈಗ ಬೆಳೆ ಕೈ ಸೇರುವ ಕೊನೆಯ ಸಮಯವಾಗಿದೆ ಇಂಥ ಸಂದರ್ಭದಲ್ಲಿ ಇದೆ ತಿಂಗಳು 20ಕ್ಕೆ ನೀರನ್ನು ನಿಲ್ಲಿಸಿದ್ದಲ್ಲಿ ಯಾವ ಬೆಳೆಯು ಸಹ ರೈತರ ಕೈ ಸೇರುವುದಿಲ್ಲ.  ಈ ಬಾರಿ ತುಂಗಭದ್ರ ಜಲಾಶಯದಲ್ಲಿ 96 ಟಿಎಂಸಿ ಗಿಂತ ಅಧಿಕ ನೀರು  ಸಂಗ್ರಹವಾಗಿದ್ದು,  ಈ ಪ್ರಮಾಣದ ನೀರಿನಲ್ಲಿ ಕನಿಷ್ಠ ಒಂದು ಬೆಳೆಗೂ ಸಹ ನೀರು ಬಿಡದಿರುವ ಸರ್ಕಾರದ ನಿರ್ಧಾರ ಅಕ್ಷಮ್ಯ  ಅಪರಾಧವಾಗಿದೆ, ಇಷ್ಟೊಂದು ಪ್ರಮಾಣದ ನೀರು ಯಾರಿಗಾಗಿ ಖರ್ಚಾಗಿದೆ ಎಂದು ನಮ್ಮ ಪ್ರಶ್ನೆಯಾಗಿದೆ  ನೀರನ್ನು ನಿಲ್ಲಿಸುವ ನಿರ್ಧಾರವನ್ನು ಜಿಲ್ಲೆಯ ರೈತರು ತೀವ್ರವಾಗಿ ಖಂಡಿಸಲಾಗುತ್ತಿದೆ ಎಂದು ಜಿಲ್ಲಾಧ್ಯಕ್ಷ ಗೋವಿಂದ ತಿಳಿಸಿದರು.  

              ಅವರು ಇಂದು ಎಐ ಕೆಕೆಎಂಎಸ್  ರೈತ ಸಂಘಟನೆ ನೇತೃತ್ವದಲ್ಲಿ ನಗರದಲ್ಲಿ ಗಾಂಧಿ ಭವನದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮೆರವಣಿಗೆ ಮೂಲಕ ತೆರಳಿ ನೂರಾರು ರೈತರು ನೇತೃತ್ವದಲ್ಲಿ ಹಮ್ಮಿಕೊಂಡಿದ್ದ  ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.  

ಸಂಘದ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಮಾತನಾಡುತ್ತಾ ಇತ್ತೀಚೆಗೆ  ಹಲವಾರು ಕೈಗಾರಿಕೆಗಳಿಗೆ ಮೋಟಾರ್ ಗಳ ಮೂಲಕ ಅಕ್ರಮವಾಗಿ ಜಲಾಶಯದಿಂದ ನೀರನ್ನು ಪಡೆಯುತ್ತಿರುವುದು  ಬೆಳಕಿಗೆ ಬಂದಿದೆ ಈ ರೀತಿಯಾಗಿ ಜಲಾಶಯದ ಬಹುಪಾಲು ನೀರನ್ನು ಕೈಗಾರಿಕೆಗಳಿಗೆ ಸರ್ಕಾರ ನೀಡಲು ಮುಂದಾಗಿದೆಯೇ ಹೊರತು ರೈತರ ಬೆಳೆಗಳಿಗೆ ನೀರನ್ನು ನೀಡಲು ಯಾವುದೇ ರೀತಿಯ ಇಚ್ಛಾಶಕ್ತಿ ಇಲ್ಲ.

               ಇದು ಸಂಪೂರ್ಣ ಕಾರ​‍್ೊರೇಟ್ ಕಂಪನಿಗಳ ಪರವಾಗಿರುವ ಸರ್ಕಾರಗಳಾಗಿವೆ. ಇಂಥವರ ವಿರುದ್ಧ ಬಲಿಷ್ಠ ಚಳುವಳಿ ಒಂದೇ ನಮಗೆ ಇರುವ ದಾರಿಯಾಗಿದೆ. ಹಾಗಾಗಿ  ಒಂದು ಬೆಳೆ ಸಂಪೂರ್ಣವಾಗಿ ಕೈ ಸೇರುವವರೆಗೂ ನೀರನ್ನು ಬಿಡಲು  ರೈತರು ತೀವ್ರವಾದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ. ಇದರ ಭಾಗವಾಗಿ ಇದೆ ತಿಂಗಳ 20ರ ನಂತರ ಉಗ್ರ ಹೋರಾಟಕ್ಕೆ ರೈತರು ಸಜ್ಜಾಗುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು.

               ಈ ಪ್ರತಿಭಟನೆಯಲ್ಲಿ    ರಾಜ್ಯ ಸಮಿತಿ ಸದಸ್ಯ ಹನುಮಂತಪ್ಪ,  ಜಿಲ್ಲಾ ಉಪಾಧ್ಯಕ್ಷರಾದ ಬಸಣ್ಣ,  ಬಳ್ಳಾರಿ ತಾಲೂಕು ಕಾರ್ಯಧರ್ಶಿ ಧನರಾಜ, ಕುರುಗೋಡು ತಾಲೂಕು ಅಧ್ಯಕ್ಷ ಕೋಳೂರು ಪಂಪಾಪತಿ, ಉಪಾಧ್ಯಕ್ಷ ಕಲ್ಲುಕಂಬ ಪಂಪಾಪತಿ ಮಾತನಾಡಿದರು.  ರೈತರಾದ   ಶಿವಪ್ಪ,  ಹೊನ್ನೂರ​‍್ಪ, ಲಿಂಗಪ್ಪ, ಹೇಮಂತ್ ರಾಜ್, ವೀರೇಶ್ ಗೌಡ, ಸಿದ್ದಾರೋಡ,  ಹುಲುಗಪ್ಪ ಟಿ. ಮಲ್ಲಿಕಾರ್ಜುನ, ಈಶ್ವರ್  ಸೇರಿದಂತೆ ನೂರಾರು ರೈತರು ಉಪಸಿತರಿದ್ದರು. 


ಸುದ್ದಿ ಓದಿ