ರಾಣೆಬೆನ್ನೂರ

ಬೆಲೆ ಏರಿಕೆ ಖಂಡಿಸಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ

ಬೆಲೆ ಏರಿಕೆ ಖಂಡಿಸಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ


        ರಾಣೆಬೆನ್ನೂರು :13: ರಾಜ್ಯ ಸರ್ಕಾರ ಜನಸಾಮಾನ್ಯರ ನಿತ್ಯದ ಬದುಕಿನ ಜೀವನದ ಜೊತೆಗೆ ಬೆಲೆ ಏರಿಕೆ ಬಿಸಿ ನೀಡಿ ಗಾಯದ ಮೇಲೆ ಬರೆ ಎಳೆದಂತಾಗಿದೆ ಈ ಕೂಡಲೇ ಸರಕಾರ ಏರಿಸಿರುವ ಜರವನ್ನು ತಕ್ಷಣವೇಇಳಿಸಲು ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ತಾಲೂಕ ಅಧ್ಯಕ್ಷ ನಿಂಗಪ್ಪ ಸತ್ಯಪ್ಪನವರ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.  

           ಶುಕ್ರವಾರ ಅಪಾರ ಜನಸಂಖ್ಯೆಯೊಂದಿಗೆ ಜೆಡಿಎಸ್ ಪಕ್ಷದ ಕಾರ್ಯಾಲಯದಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ತಹಸಿಲ್ದಾರ್ ಕಚೇರಿದರು ಜಮಾಯಿಸಿ ತಹಸೀಲ್ದಾರ್ ಪರವಾಗಿ ಕಡೂರ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.  

           ರಾಜ್ಯದ ಜನರು ಮಳೆ ಬೆಳೆ ಕಾಣದೆ  ಬರಗಾಲದಿಂದ ಛಾಯೆ ಆವರಿಸಿ, ನಿತ್ಯವೂ ಜೀವನ ಸಾಗಿಸುವುದು ಹೇಗೆ ಎನ್ನುವ ಚಿಂತೆಯಲ್ಲಿರುವಾಗಲೇ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳು, ಬೆಲೆ ಏರಿಕೆಗೆ ಕಡಿವಾಡ ಹಾಕದೆ, ಬೆಲೆ ಏರಿಕೆ ಸಮರ್ಥನೆ ಮಾಡಿಕೊಳ್ಳುತ್ತಿರುವುದು ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದರು.  

            ಹಾಲು,ಮೊಸರು, ಬೆಣ್ಣೆ, ಪನ್ನೀರು ಸೇರಿದಂತೆ ಸಾರಿಗೆ ಸಂಸ್ಥೆಯ ದರವು ಸಹ ಏರಿಸಿದ್ದಾರೆ. ಇದರಿಂದ ಜನಸಾಮಾನ್ಯರು ಬಡವರು ಅಲ್ಪಸಂಖ್ಯಾತರು ಜೀವನವನ್ನು ಸಾಗಿಸುವುದಾದರೂ ಹೇಗೆ ಎನ್ನುವ ಕನಿಷ್ಠ ಜ್ಞಾನ ರಾಜ್ಯ ಸರ್ಕಾರಕ್ಕೆ ಇರಬೇಕಾಗಿತ್ತು. ಇದು ನಾಡಿನ ಜನರ ದೌರ್ಭಾಗ್ಯ. ಎಂದು ವಿಷಾದಿಸಿದ್ದಾರೆ.  

            ಯಾವುದೇ ಸರಕಾರಗಳು ಬೆಲೆ ಏರಿಸುವ ಮುನ್ನ ರಾಜ್ಯದಲ್ಲಿರುವ ಶೇಕಡಾ 60ರಷ್ಟು ಬಡವರ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಇದ್ಯಾವುದು ಗಮನಿಸಬೇಕಾಗಿರುವುದು ಈ ನಾಡಿನ ಜನರ ದೌರ್ಭಾಗ್ಯವಾಗಿದೆ.  

           ಮುಖ್ಯಮಂತ್ರಿಗಳು ಬಹುಜನರ ಅಶೋತ್ತರಗಳಿಗೆ ಸ್ಪಂದಿಸಿ ಏರಿಸಿರುವ ಅಧಿಕ ಪ್ರಮಾಣದ ಧರವನ್ನು ಕೂಡಲೆ ಇಳಿಸಲು ಮುಂದಾಗಬೇಕು ಎಂದು ಸಲ್ಲಿಸಿರುವ ಮನವಿ ಆಗ್ರಹಿಸಿದ್ದಾರೆ.  

 ಮನವಿ ಸಲ್ಲಿಕೆ ಮುಂಚೂಣಿಯಲ್ಲಿ ಜೆಡಿಎಸ್  ಮಹಿಳಾ ಘಟಕದ ಅಧ್ಯಕ್ಷ ಶ್ರೀಮತಿ ಲಕ್ಷ್ಮಿ ಕದರಮಂಡಲಗಿ, ತಾಲೂಕ ಅಧ್ಯಕ್ಷ ನಿಂಗರಾಜ ಸತ್ಯಪ್ಪನವರ,

           ಮುಖಂಡರಾದ, ಜಿಲ್ಲಾಧ್ಯಕ್ಷ ಮಂಜುನಾಥಗೌಡ ಶಿವಣ್ಣನವರ, ಮಂಜಪ್ಪ ಆನ್ವೇರಿ, ಬಿ.ಸಿ. ಗೌಡ ಶಿವಣ್ಣನವರ, ಮಂಜುನಾಥ್, ಉಷಾ, ಬಿ.ಕೆ. ಶಿವರಾಜ, ಮೈಲಪ್ಪ, ಧರ್ಮರಾಜ್, ಶ್ರೀನಿವಾಸ್, ಸಿ.ಬಿ. ಮಠದ, ಎಸ್‌.ಎಸ್‌. ನಡುವಿನಮನಿ, ಪೂಜಾ ದೈವಜ್ಞ, ಕಸ್ತೂರಿ ಅರ್ಕಶಾಲಿ, ಕೆ.  

ಬಿ. ನಟರಾಜ್, ಶಿವನಗೌಡ ಕಡೂರು, ನಿಂಗಪ್ಪ ಬೆನ್ನೂರ, ಮಾಲತೇಶ್ ಸೇರಿದಂತೆ ಮತ್ತಿತರಗಣ್ಯರು ಜೆಡಿಎಸ್ ನ ನೂರಾರು ಕಾರ್ಯಕರ್ತರು ಮಹಿಳಾ ಕಾರ್ಯಕರ್ತರು ಪಾಲ್ಗೊಂಡಿದ್ದರು.  

 ಮನವಿ ಸ್ವೀಕರಿಸಿ ಮಾತನಾಡಿದ ತಹಸಿಲ್ದಾರ ಕಚೇರಿಯ ಎಸ್ ಕೆ ಕಡೂರು ಅವರು ಸಲ್ಲಿಸಿರುವ ಮನವಿಯನ್ನು ಯಥಾವತ್ತಾಗಿ ಜಿಲ್ಲಾಡಳಿತಕ್ಕೆ ರವಾನಿಸುವುದಾಗಿ  ಹೇಳಿದರು. 


ಸುದ್ದಿ ಓದಿ