ರಾಣೆಬೆನ್ನೂರ

ವಾಸಣ್ಣ ಕುಸಗೂರು ಅವರಿಗೆ ಲಭಿಸಿದ ರಾಜ್ಯೋತ್ಸವ ಪ್ರಶಸ್ತಿ ಜಿಲ್ಲೆಯ ಜನರಿಗೆ ಹರ್ಷ ತಂದಿದೆ : ಅರುಣಕುಮಾರ ಪೂಜಾರ

ವಾಸಣ್ಣ ಕುಸಗೂರು ಅವರಿಗೆ ಲಭಿಸಿದ ರಾಜ್ಯೋತ್ಸವ ಪ್ರಶಸ್ತಿ ಜಿಲ್ಲೆಯ ಜನರಿಗೆ ಹರ್ಷ ತಂದಿದೆ : ಅರುಣಕುಮಾರ ಪೂಜಾರ
The Rajyotsava Award received by Vasanna Kusaguru has brought joy to the people of the district: Aru

             ರಾಣೆಬೆನ್ನೂರ 08 : ಸಮಾಜದಲ್ಲಿ ಸೇವೆ ಸಲ್ಲಿಸಿದವರಿಗೆ ಸಮಾಜ, ಸಾರ್ವಜನಿಕ ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಬೇಕು. ಇದರಿಂದ ಸೇವೆ ಸಮ್ಮಿಸಿದವರಿಗೆ ಮತ್ತಷ್ಟು ಪ್ರೋತ್ಸಾಹ ದೊರಕಿದಂತಾಗುತ್ತದೆ ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು. ಅವರು ಇತ್ತೀಚೆಗೆ ಇಲ್ಲಿನ ಅಶೋಕನಗರದಲ್ಲಿರುವ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ, ವಾಸಣ್ಣ ಯಲ್ಲಪ್ಪ ಕುಸಗೂರು ಅವರ ಮನೆಗೆ ಭೇಟಿ ನೀಡಿ, ಕರ್ನಾಟಕ ಸರಕಾರದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವಾಸಣ್ಣ ಕುಸಗೂರು ಅವರನ್ನು ಅಭಿನಂದಿಸಿ, ಸನ್ಮಾನಿಸಿ ಮಾತನಾಡಿದರು. ತಾವು ಕಂಡಂತೆ ಕುಸಗೂರ ಅವರು ಸಾಹಿತ್ತಿಕ, ಸಾಂಸ್ಕೃತಿಕ, ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಸೇವೆಯಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಂಡು ಸೇವೆ ಸಲ್ಲಿಸಿ ಜನಮಾನಸದಲ್ಲಿ ಮೇಲೆ ನಿಂತವರು.

              ಕಾವ್ಯ, ಕವನ, ಸಾಹಿತಿಕ ಚಟುವಟಿಕೆಗಳ ಮೂಲಕ, ಸಮಾಜದಲ್ಲಿ ಗುರುತಿಸಿಕೊಂಡಿದ್ದ ವಾಸಣ್ಣ ಅವರಿಗೆ ಸರಕಾರ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದು,ನಗರದ ತಾಲೂಕಿನ ಜಿಲ್ಲೆಯ ಜನತೆಗೆ ಅತ್ಯಂತ ಸಂತೋಷ ತಂದಿದೆ. ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಂದರ್ಭದಲ್ಲಿ ಅನೇಕ ಚಟುವಟಿಕೆಗಳ ಮೂಲಕ ಪರಿಷತ್ತಿಗೆ ಬಲ ತಂದು ಕೊಟ್ಟವರು. ಅಷ್ಟೇ ಅಲ್ಲದೆ ಕನ್ನಡ ಸಾಹಿತ್ಯ ಭವನದ ಕಟ್ಟಡ ಕಟ್ಟಬೇಕೆನ್ನುವ ಛಲತೊಟ್ಟವರು. ಅವರ ಕನಸು ಕಟ್ಟಡ ನಿರ್ಮಾಣದ ನಂತರ ನನಸಾಗಿದೆ. ಭವನ ಕಟ್ಟುವುದು ಅಷ್ಟು ಸುಲಭದ ಮಾತಲ್ಲ. ಎಲ್ಲರೊಳಗೊಂದಾಗಿ, ವಿಶ್ವಾಸದಿಂದ ಅವರು ಕಟ್ಟಿಸಿದ ಸಾಹಿತ್ಯ ಪರಿಷತ್ತು ಭವನ ಅವರ ಕ್ರಿಯಾಶೀಲತೆಗೆ ಇಂದು ವಾಣಿಜ್ಯ ನಗರದಲ್ಲಿ ಸಾಕ್ಷಿಯಾಗಿದೆ.

              ನಮ್ಮೆಲ್ಲರ ಹಿರಿಯರು, ಮಾರ್ಗದರ್ಶಕರು ಆಗಿರುವ ವಾಸಣ್ಣ ಕುಸಗೂರ ಅವರಿಗೆ ಇಂದು ಲಭಿಸಿರುವ ಕರ್ನಾಟಕ ಸರ್ಕಾರದ 71ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯು, ವಾಣಿಜ್ಯ ನಗರದ ಜನತೆಗೆ, ಮತ್ತು ಸಾಹಿತಿಗಳಿಗೆ ಕಲಾವಿದರಿಗೆ ಅತ್ಯಂತ ಹರ್ಷ ತಂದಿದೆ. ಎಂದ ಅವರು, ಜನತೆಯ ಪರವಾಗಿ ಶಾಲು ಹೊದಿಸಿ, ಫಲ ಪುಷ್ಪ ಸ್ಮರಣಿಕೆ ನೀಡಿ, ಅಭಿನಂದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಅನಿಲ ಸಿದ್ದಾಳಿ, ಸಿದ್ದಪ್ಪ ಚಿಕ್ಕಬಿದರಿ, ಮೃತ್ಯುಂಜಯ ಪಾಟೀಲ, ರಮೇಶ್ ಗುತ್ತಲ, ರಾಯಣ್ಣ ಮಾಕನೂರ, ಬಸವರಾಜ ಚಳಗೇರಿ, ರಾಜು ಬಣಕಾರ, ಗೀರೀಶ್ ಬುಡ್ಡನಗೌಡ್ರ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ