ಜೋಯಿಸರ ಹರಳಹಳ್ಳಿ : ಸಿಡಿಲು ಬಡಿದು ಸಾವು, ಮಹದೇವಪ್ಪ ಕುಟುಂಬಕ್ಕೆ 5, ಲಕ್ಷ ಪರಿಹಾರ ಧನ
ರಾಣೆಬೆನ್ನೂರು 08 : ಇತ್ತೀಚೆಗೆ ತಾಲೂಕಿನ ಜೋಯಿಸರಹರಳಹಳ್ಳಿ ಗ್ರಾಮದಲ್ಲಿ ಸಿಡಿಲು ಅಪ್ಪಳಿಸಿ ರೈತನೊರ್ವನು ಸಾವು ಕಂಡಿದ್ದನು. ಅಂದು ನಡೆದ ಘಟನೆಯಲ್ಲಿ ಗ್ರಾಮದ ರೈತ ಮಹದೇವಪ್ಪ ಗುರ್ಪ ಶಿಡೇನೂರ ಎಂಬುವರು ಸಾವು ಕಂಡಿದ್ದರು. ಮೃತ ಕುಟುಂಬಕ್ಕೆ, ಇಂದು ಭೇಟಿ ನೀಡಿದ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ, ಅವರು ಕುಟುಂಬದವರಿಗೆ ತಮ್ಮ ಸಾಂತ್ವನ ನೀಡಿ, ಆಕಸ್ಮಿಕ ಘಟನೆಯಿಂದಾಗಿ ತಾವು ಕಂಡ ಕುಟುಂಬದವರಿಗೆ ದೊರೆಯಬಹುದಾದ ಸರಕಾರದ ಪರಿಹಾರ ಧನ 5, ಲಕ್ಷ ರೂಗಳ ಮೊತ್ತದ ಆದೇಶ ಪ್ರಮಾಣ ಪತ್ರವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಬೀರ್ಪ ಕೊಳ್ಳೇರ, ಸುರೇಶ ಮುದ್ದಪ್ಪಳವರ ಕರಿಯಪ್ಪ ಸತ್ಯಪ್ಪನವರ, ವೀರನಗೌಡ ಪೋಲಿಸ್ ಗೌಡ್ರ , ರವಿ ಕದರಮಂಡಲಗಿ. ಮಂಜಪ್ಪ ಅನ್ವೇರಿ, ರಾಮಗೌಡರ, ವಿಠಲಾಚಾರಿ ಬಡಿಗೇರ್, ಶಂಕರ ಹೊರಕೇರಿ,ಸೋಮಣ್ಣ ಸೇರಿದಂತೆ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.