ಗದಗ

ಪು ಬಡ್ನಿ ಪಂಚಾಯಿತಿಯಲ್ಲಿ ಒನಕೆ ಓಬವ್ವ ಜಯಂತಿ ಆಚರಣೆ

ಪು ಬಡ್ನಿ ಪಂಚಾಯಿತಿಯಲ್ಲಿ ಒನಕೆ ಓಬವ್ವ ಜಯಂತಿ ಆಚರಣೆ




              ಲಕ್ಷ್ಮೇಶ್ವರ "ತಾಲೂಕಿನ ಪುಡ್ನಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಬುಧವಾರ ವೀರವನಿತೆ ಒನಕೆ ಓಬವ್ವ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು ಒನಕೆ ಓಬವ್ವನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ  ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜ ಬಳೂಟಗಿ ಅವರ ನಾಡಿನ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟು, ಒನಕೆಯಿಂದ ಶತ್ರುಗಳನ್ನು ಸದೆಬಡಿದ ವೀರವನಿತೆ ಒನಕೆ ಓಬವ್ವನ, ಶೌರ್ಯ, ಸಾಹಸ ಮತ್ತು ದೇಶಭಕ್ತಿಗೆ ಮತ್ತೊಂದು ಹೆಸರೇ ಒನಕೆ ಓಬವ್ವ. ಚಿತ್ರದುರ್ಗದ ಕೋಟೆಯನ್ನು ರಕ್ಷಿಸಿದ ಆ ಮಹಾನ್ ತಾಯಿ ಸ್ತ್ರೀ ಶಕ್ತಿಯ ಪ್ರತೀಕ, ಧೈರ್ಯದ ಸಾಕಾರಮೂರ್ತಿ ವೀರವನಿತೆ ಒನಕೆ ಓಬವ್ವನ ತ್ಯಾಗ ಮತ್ತು ಧೈರ್ಯ ನಮಗೆಲ್ಲರಿಗೂ ಸದಾ ಸ್ಫೂರ್ತಿಯಾಗಲಿ ಎಂದರು 

             ವೀರವನಿತೆ ಒನಕೆ ಓಬವ್ವನ ಜಯಂತಿಯಲ್ಲಿ ಪಾಲ್ಗೊಂಡಿದ್ದ ಪತ್ರಕರ್ತ ವೀರಣ್ಣ ಹಡಪದ ಅವರು ಮಾತನಾಡಿ ಮಹಿಳೆ ಅಬಲೆಯಲ್ಲ ಸಬಲೆ ಎಂದು ಜಗತ್ತಿಗೆ ತೋರಿಸಿಕೊಟ್ಟ ವೀರ ಮಹಿಳೆ ಒನಕೆ ಓಬವ್ವ ಕೇವಲ ಒಂದು ಒನಕೆಯಿಂದ ಶತ್ರು ಸೈನ್ಯವನ್ನು ಹಿಮ್ಮೆಟ್ಟಿಸಿದ ಧೀರ ಮಹಿಳೆಯ ಸಾಹಸಗಾಥೆ ಇತಿಹಾಸದಲ್ಲಿ ಅಜರಾಮರ.ವೀರವನಿತೆ ಒನಕೆ ಓಬವ್ವನ  ಶೌರ್ಯ ಮತ್ತು ಸ್ವಾಭಿಮಾನದ ಸಂಕೇತ ಚಿತ್ರದುರ್ಗದ ವೀರ ಮಹಿಳೆ ಒನಕೆ ಓಬವ್ವನ ಕೇವಲ ಒಂದೇ ಸಮಾಜಕ್ಕೆ ಸೀಮಿತ ವಾದವರಲ್ಲ ಅವರ ತ್ಯಾಗ,ಬಲಿದಾನವನ್ನು ನಾವೆಲ್ಲರೂ ಅವರ ಜಯಂತಿಯನ್ನು ಆಚರಣೆ ಮಾಡುವ ಮೂಲಕ ಅವರನ್ನು ಸದಾ ಕಾಲ  ಸ್ಮರಿಸುತ್ತಾ ಅವರ  ಆದರ್ಶ ಗುಣಗಳನ್ನು ನಾವೆಲ್ಲರೂ ನಮ್ಮ ಜೀವದ ಅಳವಡಿಸಿ ಸಾಗುವುದು  ಅವಶ್ಯವಾಗಿದೆ ಎಂದರು  ಈ ಸಮಯದಲ್ಲಿ ಗ್ರಾಮ ಪಂಚಾಯಿತಿಯ ಸಿಬ್ಬಂದಿ ವರ್ಗದವರು ಇದ್ದರು

ಸುದ್ದಿ ಓದಿ