ಸೇವಾ ತಂಡದಲ್ಲಿ ರಕ್ತದಾನ ಮಾಡಿದ ರಕ್ತ ಕರ್ಣ ಸಚಿನ್ ರಾಯಬಾಗಿ, ಯುವ ನಾಯಕ ಕೃಷ್ಣಗೌಡ ಪಾಟೀಲರು
ಲೋಕದರ್ಶನ ವರದಿ
ಗದಗ 10:- ಐತಿಹಾಸಿಕ ಮುದ್ರಣ ನಗರಿಯಾದ ಗದಗ ಬೆಟಗೇರಿ ಅವಳಿ ನಗರದಲ್ಲಿ ಕಳೆದ ಸುಮಾರು ಐದು ವರ್ಷಗಳಿಂದ ವಿಭಿನ್ನವಾಗಿ ಸಾಮಾಜಿಕ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನಸ್ಪಂಧನೆಯನ್ನು ಪಡೆದ ಎಚ್ ಕೆ ಪಾಟೀಲ್ ಸೇವಾ ತಂಡವು, ಇಂದು ಜನಸಾಮಾನ್ಯರಿಗೆ ಆರೋಗ್ಯ ಭಾಗ್ಯದಾಯಕವಾದ ರಕ್ತದಾನ ಶಿಬಿರವನ್ನು
ಭಾರತೀಯ ವೈದ್ಯಕೀಯ ಸಂಘ, ಗದಗ ಐಎಂಎ ಬ್ಲಡ್ ಬ್ಯಾಂಕ್ ಹಾಗೂ ಎಚ್ ಕೆ ಪಾಟೀಲ್ ಸೇವಾ ತಂಡದ ಸಂಯುಕ್ತಾಶ್ರಯದಲ್ಲಿ ವಿಶೇಷ ರಕ್ತದಾನ ಶಿಬಿರವನ್ನು ಇದೇ ದಿನಾಂಕ 05/11/2026 ರ ಗುರುವಾರ ದಂದು ಕಾಟನ್ ಸೇಲ್ ಸೊಸೈಟಿಯ ಆವರಣದಲ್ಲಿರುವ ಸೇವಾ ತಂಡದ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಒಂದು ಅವಿಸ್ಮರಣೀಯ ಜನಾರೋಗ್ಯದಾಯಕ ಜೀವರಕ್ಷಕ ರಕ್ತದಾನ ಶಿಬಿರದಲ್ಲಿ ಹಲವಾರು ಜನರು ತುಂಬುತ್ಸಾಹದೊಂದಿಗೆ ರಕ್ತದಾನ ಮಾಡಿದರು. ಅದರಂತೆ ಯುವ ನಾಯಕ ಕೃಷ್ಣಗೌಡ ಎಚ್ ಪಾಟೀಲರವರು ಹಾಗೂ ಕಳೆದ 18 ವರ್ಷಗಳಿಂದ ನಿರಂತರವಾಗಿ ಸುಮಾರು 28 ಬಾರಿ ರಕ್ತದಾನ ಮಾಡಿ ಹಲವರ ಜೀವ ರಕ್ಷಣೆಗೆ ಕಾರಣಿಭೂತರಾದ ಸಚಿನ್ ಲಕ್ಷ್ಮಣಸಾ ರಾಯಬಾಗಿ ರವರು ಕೂಡಾ
ಈ ಒಂದು ಶಿಬಿರದಲ್ಲಿ ತಮ್ಮ 29 ನೇ ಬಾರಿಯ ರಕ್ತದಾನ ಮಾಡುವ ಮೂಲಕ ಯುವ ಜನಸಾಮಾನ್ಯರಲ್ಲಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಪುನೀತರಾಗುವಂತೆ ಪ್ರೋತ್ಸಾಹಿಸಿದರು.
ಈ ಸಂಧರ್ಭದಲ್ಲಿ ಎಚ್ ಕೆ ಪಾಟೀಲ್ ಸೇವಾ ತಂಡದ ಅಧ್ಯಕ್ಷರಾದ ಪ್ರಭು ಎಲ್ ಬುರಬುರೆ, ಡಾಕ್ಟರ್ ಪ್ಯಾರಾಲಿ ನೂರಾನಿ, ಕಾಂಗ್ರೆಸ್ ಯುವ ನಾಯಕ ಕೃಷ್ಣಗೌಡ ಎಚ್ ಪಾಟೀಲ್, ರಕ್ತಕರ್ಣ ಸಚಿನ್ ಎಲ್ ರಾಯಬಾಗಿ,
ದೇವೇಂದ್ರ ಕಳಸಾಪೂರ, ಉಸ್ಮಾನ್ ಮಾಳೇಕೊಪ್ಪ, ವಾಸಿಮ್ ಖಾಜಿ, ಮಹಮ್ಮದ್ ಝಫರ ಖಾಜಿ, ರಾಚಪ್ಪ ಗಡಾದ, ಮಾರುತಿ ಕಾತರಕಿ,ಎಚ್ ಕೆ ಪಾಟೀಲ್ ಸೇವಾ ತಂಡದ ವ್ಯವಸ್ಥಾಪಕರಾದ ರಾಘವೇಂದ್ರ ಪಾಲನಕರ, ಭಾರತೀಯ ವೈದ್ಯಕೀಯ ಸಂಘ, ಗದಗ ಐಎಂಎ ಬ್ಲಡ್ ಬ್ಯಾಂಕ ನ ವೈದ್ಯಕೀಯ ಸಿಬ್ಬಂದಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.