ಎಲ್ಲ ಜನರ ಸೇವೆ ಮಾಡುವ ನಮ್ಮ ಸಮಾಜದ ಕ್ಷೌರಿಕ ವೃತ್ತಿ ಬಹಳ ದೊಡ್ಡದು : ದೇವು ಹಡಪದ
ಲಕ್ಷ್ಮೇಶ್ವರ 11 : ಎಲ್ಲ ಸಮಾಜದ ಜನರ ಸೇವೆ ಮಾಡುವ ನಮ್ಮ ಹಡಪದ ಅಪ್ಪಣ್ಣ ಸಮಾಜದ ಕ್ಷೌರಿಕ ವೃತ್ತಿ ಸೇವೆ ಬಹಳ ದೊಡ್ಡದು ಎಂದು ಕರ್ನಾಟಕ ರಾಜ್ಯ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷರಾದ ದೇವು ಹಡಪದ ಹೇಳಿದರು.
ತಾಲೂಕಿನ ದೊಡ್ಡೂರು ಗ್ರಾಮದಲ್ಲಿ ಹಡಪದ ಅಪ್ಪಣ್ಣ ಸಮಾಜದ ತಾಲೂಕು ಅಧ್ಯಕ್ಷ ಗುಡ್ಡಪ್ಪ ಹಡಪದ ಅವರು ದೀಪಾವಳಿಯ ಹಬ್ಬದ ನಿಮಿತ್ಯ ಅವರ ಬಸವ ಪ್ರಿಯ ಕಟಿಂಗ್ ಶಾಪ್ ಅಂಗಡಿಯಲ್ಲಿ ಹಮ್ಮಿಕೊಂಡಿದ್ದ ಲಕ್ಷ್ಮಿ ದೇವಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಲಕ್ಷ್ಮಿ ದೇವಿಗೆ ಪೂಜೆ ಸಲ್ಲಿಸಿ ಗ್ರಾಮದ ಹಿರಿಯರಿಗೆ ಸಮಾಜದ ವತಿಯಿಂದ ಸನ್ಮಾನಿಸಿ ಮಾತನಾಡಿದರು.
ಅವರುಎಲ್ಲ ಸಮಾಜದವರ ಸೇವೆ ಮಾಡುವಂತ ಭಾಗ್ಯ ನಮ್ಮ ಸಮಾಜದವರಿಗೆ ದೊರಕಿದೆ ನಮ್ಮ ಸಮಾಜದವರು ಎಲ್ಲಾ ಗ್ರಾಮಗಳಲ್ಲಿ ಪಟ್ಟಣದಲ್ಲಿ ಎಲ್ಲ ಸಮಾಜದ ಜನರ ಪ್ರೀತಿ ವಿಶ್ವಾಸದೊಂದಿಗೆ ಮುಗ್ಧತೆಯಿಂದ ಸೇವೆ ನೀಡುವ ಯಾವುದಾದರೂ ಸಮಾಜವಿದ್ದರೆ ಅದು ನಮ್ಮ ಹಡಪದ ಸಮಾಜ ಇದರಿಂದಾಗಿ ನಮ್ಮ ಸಮಾಜಕ್ಕೆ ಎಲ್ಲ ಸಮುದಾಯದವರು ತೋರುವ ಪ್ರೀತಿ ವಿಶ್ವಾಸ ಸಹ ದೊಡ್ಡದಾಗಿದೆ ಎಂದರು.
ಇದೇ ಸಮಯದಲ್ಲಿ ಶಿರಹಟ್ಟಿ ಲಕ್ಷ್ಮೇಶ್ವರ ತಾಲೂಕಾ ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷರಾದ ಶರಣಪ್ಪ ಹಡಪದ ಅಧ್ಯಕ್ಷ ಗುಡ್ಡಪ್ಪ ಹಡಪದ, ಪತ್ರಕರ್ತರಾದ ವೀರಣ್ಣ ಹಡಪದ ಅವರನ್ನು ಸನ್ಮಾನಿಸಲಾಯಿತು ಈ ಸಮಯದಲ್ಲಿ ಗ್ರಾಮದ ಮುಖಂಡರಾದ ಸಂಜೀವ ಗೌಡ್ರು ಪಾಟೀಲ್ ಮಲ್ಲೇಶ್ ಮಣ್ಣಮ್ಮನವರ ಟೋಪಣ್ಣ ಲಮಾಣಿ ರವಿ ಭಜಕ್ಕನವರ ಪ್ರಶಾಂತ ಬಾಗಲದ ಸುರೇಶ ಹರವಿ ಮುತ್ತಪ್ಪ ಅಂಗಡಿ ಹುಲಿಗೆಪ್ಪ ಸವೂರ ಫಕ್ಕಿರೇಶ ಬಂಕಾಪುರ ಸಿದ್ದಲಿಂಗಪ್ಪ ರಗಟಿ ಮನೋಜ್ ರಗಟಿ ಗುರುರಾಜ ಬಾಗಲದ ನಿಂಗಪ್ಪ ಸೂರಣಗಿ ಪರಶುರಾಮ ಹಡಪದ ಗುರುರಾಜ ಹಡಪದ ಸೇರಿದಂತೆ ಗ್ರಾಮದ ಗುರುಹಿರಿಯರು ಮುಖಂಡರು ಉಪಸ್ಥಿತರಿದ್ದರು. ಎನ್. ಎಚ್ ಹಡಪದ ಕಾರ್ಯಕ್ರಮ ನೀರೀಕ್ಷಿಸಿದರು.