ರಾಯಬಾಗ

ಸರ್ಕಾರಿ ಶಾಲೆಗಳ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ : ಶಾಸಕ ಡಿ.ಎಮ್‌.ಐಹೊಳೆ

ಸರ್ಕಾರಿ ಶಾಲೆಗಳ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ : ಶಾಸಕ ಡಿ.ಎಮ್‌.ಐಹೊಳೆ
Make good use of the facilities in government schools and ensure children receive an education: MLA


                  ರಾಯಬಾಗ 11 : ಪಾಲಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳುಹಿಸಿ ಶಿಕ್ಷಣಕ್ಕಾಗಿ ಸರಕಾರ ನೀಡುವ ಉಚಿತ ಸೌಲಭ್ಯವನ್ನು ಪಡೆದು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕೆಂದು ಶಾಸಕ ಡಿ.ಎಮ್‌.ಐಹೊಳೆ ಹೇಳಿದರು. ಪಟ್ಟಣದ ತಾಲೂಕಾ ಶಾಲೆಯ ಆವರಣದಲ್ಲಿ ರೂ. 3.88 ಕೋಟಿ ವೆಚ್ಚದ 10 ಶಾಲಾ ಕೊಠಡಿ ಹಾಗೂ 2 ಸಭಾಭವನ ನಿರ್ಮಾಣ ಕಾಮಗಾರಿಗೆ ಶಂಖು ಸ್ಥಾಪನೆ ನೆರವೇರಿಸಿ ಮಾತನಾಡಿದ ಶಾಸಕರು ಸರಕಾರದಿಂದ ಹಣ ಮಂಜೂರಾಗಿದ್ದು,

            ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಿಸಲಾಗುವುದೆಂದು ಅವರು ಧಾರವಾಡದ ಬಿಲ್ಡಕ್ವಾನ್ ಕಂಪನಿಯವರಿಗೆ ಗುತ್ತಿಗೆ ನೀಡಲಾಗಿದ್ದು, ಗುಣಮಟ್ಟದ ಕಾಮಗಾರಿ ಮಾಡುವಂತೆ ಸೂಚಿಸಿದರು. ಸರಕಾರ ಉಚಿತವಾಗಿ ಶೂ, ಸಾಕ್ಸ್‌, ಪುಸ್ತಕ, ಸಮವಸ್ತೊ, ಬಿಸಿಯೂಟ ವಿತರಿಸುತ್ತಿದ್ದು, ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದರು.        

             ಈ ಸಂದರ್ಭದಲ್ಲಿ ಪ್ರಭಾರಿ ಬಿಇಒ ಬಸವರಾಜ ಕಾಂಬಳೆ, ಎಸ್ಡಿಎಮ್ಸಿ ಅಧ್ಯಕ್ಷ ಅಜಿಂ ಮುಲ್ಲಾ, ಮುಖ್ಯೋಪಾಧ್ಯಾಯ ಎಮ್‌.ಬಿ.ಪಠಾಣ, ಎಮ್‌.ಬಿ.ಹಡಾಡಿ, ನಿಂಗಪ್ಪ ಮಠದಕರ, ಐ.ಬಿ.ಚಮನಮಲ್ಲಿಕ, ಬಿ.ಎಸ್‌.ಮುತ್ತೂರ, ರಾಜು ಕುರಾಡೆ, ದೇವಾನಂದ ಮಾಡಲಗಿ, ಸದಾಶಿವ ಘೋರೆ​‍್ಡ, ಮಹೇಶ ಕರಮಡಿ, ಸದಾನಂದ ಹಳಿಂಗಳಿ,ಅನೀಲ ಕೊರವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ