ರಾಯಬಾಗ

ಜಲಾಲಪುರ ಗ್ರಾ.ಪಂ. ಅಧ್ಯಕ್ಷರಾಗಿ ನಾಮದೇವ ಕಾಂಬಳೆ ಅವಿರೋಧ ಆಯ್ಕೆ

ಜಲಾಲಪುರ ಗ್ರಾ.ಪಂ. ಅಧ್ಯಕ್ಷರಾಗಿ ನಾಮದೇವ ಕಾಂಬಳೆ ಅವಿರೋಧ ಆಯ್ಕೆ



         ರಾಯಬಾಗ 05 : ತಾಲೂಕಿನ ಜಲಾಲಪುರ ಗ್ರಾಮ ಪಂಚಾಯಿತಿಯ 2ನೇ ಅವಧಿಗೆ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿಅಧ್ಯಕ್ಷರಾಗಿ ನಾಮದೇವ ದಶರಥ ಕಾಂಬಳೆ (ಸಾಮಾನ್ಯ) ಹಾಗೂ ಉಪಾಧ್ಯಕ್ಷರಾಗಿ ಪಾರ್ವತಿ ರಾವಸಾಬ ದಾಸರ (ಸಾಮಾನ್ಯ ಮಹಿಳೆ) ಅವರು ಅವಿರೋಧವಾಗಿ ಆಯ್ಕೆಯಾದರು. ನೂತನ ಅಧ್ಯಕ್ಷ ನಾಮದೇವ ಕಾಂಬಳೆ ಅವರು ಮಾತನಾಡಿ, ಗ್ರಾ.ಪಂ. ಸದಸ್ಯರೆಲ್ಲರೂ ಕೂಡಿಕೊಂಡು ಗ್ರಾಮಸ್ಥರ ಸಹಕಾರದಿಂದ ಗ್ರಾಮದಲ್ಲಿ ಎಲ್ಲ ಮೂಲಭೂತ ಸೌಕರ್ಯ ಕಲ್ಪಿಸಿ, ಗ್ರಾಮದ ಅಭಿವೃದ್ಧಿ ಕೈಗೊಂಡು, ಮಾದರಿ ಗ್ರಾಮವನ್ನಾಗಿ ಮಾಡಲಾಗುವುದು ಎಂದರು.

         ಚುನಾವಣೆ ಅಧಿಕಾರಿಯಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಎ.ಎಮ್‌.ಅನ್ನಿಗೇರಿ, ಸಹಾಯಕರಾಗಿ ಪಿಡಿಒ ವಿದ್ಯಾನಂದ ಬಾನಿ ಕಾರ್ಯ ನಿರ್ವಹಿಸಿದರು. ಗ್ರಾ.ಪಂ.ಸದಸ್ಯರಾದ ಪಾಂಡುರಂಗ ಹವಾಲ್ದಾರ, ಪ್ರಮೀಳಾ ಹಿಡಕಲ, ಅಣ್ಣಾಸಾಬ ಹೇರವಾಡೆ, ಮೀನಾಕ್ಷಿ ಮಾನೆ, ವಿನಾಯಕ ಪವಾರ, ಮಲ್ಲವ್ವ ಕಾಂಬಳೆ, ದೀಪಾ ಚೌಗಲಾ, ಮೌಲಾಲಿ ನದಾಫ, ವಿದ್ಯಾ ಜಗದಾಳೆ, ಸಂಜಯ ಜಾಧವ ಹಾಗೂ ಮುಖಂಡರಾದ ಅಣ್ಣಾಸಾಬ ಕೋಣೆ, ಬಸಗೌಡ ಪಾಟೀಲ, ರಾಜು ಜಾಧವ, ಬಸವರಾಜ ಅವ್ವನ್ನವರ, ನಾನಾಸಾಹೇಬ ಸೋನಾರ, ಧರೇಪ್ಪ ಮುರಚಿಟ್ಟೆ, ರಾಜು ಮುರಚಿಟ್ಟೆ, ಮಲ್ಲು ಜಗದಾಳೆ, ಬಸಪ್ಪ ಚೌಗಲಾ, ಬಸಪ್ಪ ಬೆಳ್ಳೆಸಿ, ದೀಲಿಪ ಹವಾಲ್ದಾರ, ಮಾರುತಿ ಪಾಟೀಲ ಸೇರಿದಂತೆ ಗ್ರಾಮಸ್ಥರು, ಅಭಿಮಾನಿಗಳು ಇದ್ದರು. 


ಸುದ್ದಿ ಓದಿ