ರಾಯಬಾಗ

ನೂತನ ನಿರ್ದೇಶಕರಾಗಿ ಆಯ್ಕೆಯಾದ ಶಿಕ್ಷಕ ಟಿ. ಆರ್‌. ಕೋಳಿಯವರಿಗೆ ಸನ್ಮಾನ

ನೂತನ ನಿರ್ದೇಶಕರಾಗಿ ಆಯ್ಕೆಯಾದ ಶಿಕ್ಷಕ ಟಿ. ಆರ್‌. ಕೋಳಿಯವರಿಗೆ ಸನ್ಮಾನ


          ರಾಯಬಾಗ 28 : ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತು ಬೆಳೆಸುವ ಸಹಕಾರಿ ಸಂಘಕ್ಕೆ ನೂತನವಾಗಿ ನಿರ್ದೇಶಕರಾಗಿ ಆಯ್ಕೆಯಾದ ಶಿಕ್ಷಕ ಟಿ. ಆರ್‌. ಕೋಳಿಯವರನ್ನು ಮಂಗಳವಾರ ತಾಲೂಕಿನ ಹಿಡಕಲ್ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸತ್ಕರಿಸಲಾಯಿತು. ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಹಾರೂಗೇರಿ ಸಿದ್ದೇಶ್ವರ ಪದವಿ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ, ಸಾಹಿತಿ ಟಿ.ಎಸ್‌.ವಂಟಗೂಡಿ, ತಾಲೂಕಿನ ಹಿಡಕಲ್ ಕ್ಲಸ್ಟರ್ ನಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ 5 ವರ್ಷಗಳವರೆಗೆ ಸೇವೆ ಸಲ್ಲಿಸಿ,

          ತಾಲೂಕಿನ ಎಲ್ಲ ಕನ್ನಡ ಶಾಲೆಗಳಿಗೆ ಭೇಟಿ ಕೊಟ್ಟು ಪೀಠೋಪಕರಣಗಳು ಹಾಗೂ ಪಾಠೋಪಕರಣಗಳನ್ನು ಒದಗಿಸುವುದರೊಂದಿಗೆ ಪ್ರಾಮಾಣಿಕ ಸೇವೆಯನ್ನು ಸಲ್ಲಿಸಿದ ಕೋಳಿಯವರ ಶೈಕ್ಷಣಿಕ ಸೇವೆ ಶ್ಲಾಘನೀಯವಾದದ್ದು, ಅವರು ಮುಂದಿನ ದಿನಮಾನಗಳಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಹುದ್ದೆಯನ್ನು ಅಲಂಕರಿಸಲಿ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳಾದ ಬಿ.ಎಲ್‌.ಘಂಟಿ ವಹಿಸಿದ್ದರು. 

             ಶಿಕ್ಷಕ ಶಂಕರ ಕ್ಯಾಸ್ತಿ, ನೀಲಕಂಠ ಹಿರೇಮಠ, ಎಚ್‌.ಡಿ. ರಾಯಮಾನೆ ಮಾಲಾ ಪಾರ್ಥನಹಳ್ಳಿ , ಪ್ರಭಾವತಿ ರಾಯಮಾನೆ, ಭಾರತಿ ಹಳ್ಳೆಪ್ಪಗೋಳ, ಎಸ್‌.ಬಿ.ಬಾಗಿ, ಎಚ್‌. ಗಾಯತ್ರಿ, ಜಯಶ್ರೀ ಹಳ್ಳೂರ, ಅಪ್ಪಾಸಾಹೇಬ ಯಾರಗುದ್ರಿ, ದೀಲೀಪ ಕಂಕಣವಾಡಿ, ಎಮ್‌.ಪಿ.ಕಂಟಿಕಾರ, ಸಿದ್ದಪ್ಪ ಬಿಳಿಕುರಿ, ಗೋಪಾಲ ಬಡಿಗೇರ ಹಾಗೂ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು. 


ಸುದ್ದಿ ಓದಿ