ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ಟೆನ್‌ಪಿನ್ ಬೌಲಿಂಗ್ ಟೂರ್ನಿಯಲ್ಲಿ ಆಕಾಶ್‌ಗೆ ಸತತ ಎರಡನೇ ಪ್ರಶಸ್ತಿ
ಬೆಂಗಳೂರಿನ ಜಯನಗರದ ಕಾಸ್ಮೋಪಾಲಿಟನ್ ಕ್ಲಬ್‌ನ ಅಮೀಬಾ ಬೌಲಿಂಗ್ ಸೆಂಟರ್‌ನಲ್ಲಿ ನಡೆದ 2ನೇ ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ಟೆನ್‌ಪಿನ್ ಬೌಲಿಂಗ್ ಟೂರ್ನಿ ಮುಕ್ತಾಯಗೊಂಡಿದ್ದು, ಅಗ್ರ ಶ್ರೇಯಾಂಕಿತ ಆಕಾಶ್ ಫೈನಲ್‌ನಲ್ಲಿ ಮೂರನೇ ಶ್ರೇಯಾಂಕಿತ ಆಂಟನಿ ಆರ್ ಅವರನ್ನು 67 ಪಿನ್‌ಗಳ ಅಂತರದಿಂದ ಸೋಲಿಸಿ ಪ್ರಶಸ್ತಿ ಗೆದ್ದರು. ಎರಡು ಪಂದ್ಯಗಳ ಒಟ್ಟು ಸ್ಕೋರ್‌ನಲ್ಲಿ ಆಕಾಶ್ 406-339 ಅಂತರದ ಗೆಲುವು ದಾಖಲಿಸಿದರು.
ಫೈನಲ್ ಪಂದ್ಯದ ಮೊದಲ ಗೇಮ್‌ನಲ್ಲೇ ಆಕಾಶ್ 205 ಪಿನ್‌ಗಳನ್ನು ಗಳಿಸುವ ಮೂಲಕ ಆಂಟನಿ ಅವರ 160 ಪಿನ್‌ಗಳ ವಿರುದ್ಧ 45 ಪಿನ್‌ಗಳ ಮುನ್ನಡೆ ಸಾಧಿಸಿದರು. ಎರಡನೇ ಗೇಮ್‌ನಲ್ಲೂ ತಮ್ಮ ಸ್ಥಿರ ಪ್ರದರ್ಶನ ಮುಂದುವರಿಸಿದ ಆಕಾಶ್ 201 ಪಿನ್‌ಗಳನ್ನು ಗಳಿಸಿದರೆ, ಆಂಟನಿ 179 ಪಿನ್‌ಗಳನ್ನು ಗಳಿಸಿದರು.
ಒತ್ತಡದ ನಡುವೆಯೂ ಸ್ಥಿರ ಪ್ರದರ್ಶನ ನೀಡಿದ ಆಕಾಶ್ ಸುಲಭ ಗೆಲುವಿನೊಂದಿಗೆ ತಮ್ಮ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಂಡರು.
ಇದಕ್ಕೂ ಮುನ್ನ ನಡೆದ ಮೊದಲ ನಾಕೌಟ್ ಪಂದ್ಯದಲ್ಲಿ ಆಕಾಶ್ ನಾಲ್ಕನೇ ಶ್ರೇಯಾಂಕಿತ ಸತೀಶ್ ಎ.ವಿ. ಅವರನ್ನು 417-312 ಅಂತರದಿಂದ 105 ಪಿನ್‌ಗಳ ಭಾರೀ ಅಂತರದಲ್ಲಿ ಸೋಲಿಸಿದ್ದರು.
ಎರಡನೇ ನಾಕೌಟ್ ಪಂದ್ಯದಲ್ಲಿ ಮೂರನೇ ಶ್ರೇಯಾಂಕಿತ ಆಂಟನಿ ಆರ್ ಅವರು ವಿಜಯ್ ಪಂಜಾಬಿ ಅವರನ್ನು 326-276 ಅಂತರದಿಂದ ಸೋಲಿಸಿ ಫೈನಲ್ ಪ್ರವೇಶಿಸಿದ್ದರು.
ವಿಶೇಷ ಬಹುಮಾನಗಳು:
6 ಗೇಮ್‌ಗಳ ಬ್ಲಾಕ್‌ನಲ್ಲಿ ಅತ್ಯಧಿಕ ಸರಾಸರಿ: ಆಕಾಶ್ ಅಶೋಕ್ ಕುಮಾರ್ (192.90)
18 ಗೇಮ್‌ಗಳಲ್ಲಿ ಅತ್ಯಧಿಕ ಸರಾಸರಿ: ಆಕಾಶ್ ಅಶೋಕ್ ಕುಮಾರ್ (185.00)
225ಕ್ಕಿಂತ ಹೆಚ್ಚಿನ ಸ್ಕೋರ್‌ಗಳ ಗರಿಷ್ಠ ಸಂಖ್ಯೆ: ಅಲೆನ್ ರಿಚರ್ಡ್ಸ್ (2)
ಮಹಿಳೆಯರ 12 ಗೇಮ್‌ಗಳಲ್ಲಿ ಅತ್ಯಧಿಕ ಸರಾಸರಿ: ಪ್ರೀಮಲ್ ಜೆ. (161.67)
ಅಂತಿಮ ಫಲಿತಾಂಶ:
ಆಕಾಶ್ ಅಶೋಕ್ ಕುಮಾರ್ – ಪ್ರಥಮ ಸ್ಥಾನ
ಆಂಟನಿ ಆರ್ – ದ್ವಿತೀಯ ಸ್ಥಾನ
ಸತೀಶ್ ಎ.ವಿ. – ತೃತೀಯ ಸ್ಥಾನ
ವಿಜಯ್ ಪಂಜಾಬಿ – ನಾಲ್ಕನೇ ಸ್ಥಾನ