ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ ಪತ್ರಕರ್ತರಿಗೆ ಆಹ್ವಾನವಿಲ್ಲ
ಯಮಕನ ಮರಡಿ 28 : ಸಮೀಪದ ಆನಂದಪುರ ಗ್ರಾಮದ ಬನಶಂಕರಿ ಕಲ್ಯಾಣ ಮಂಟಪದಲ್ಲಿ ದಿನಾಂಕ 28ರಂದು ಕಾರ್ಯಕರ್ತರ ಸಭೆಯನ್ನು ಕರೆಯಲಾಗಿತ್ತು ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಹಾಂತೇಶ್ ಮಗದುಮ್ ಹಾಗೂ ಚಿಕ್ಕೋಡಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಮುಖಂಡರಾದ ಲಕ್ಷ್ಮಣರಾವ್ ಚಿಂಗಳ್ಳಿ ಸೇರಿದಂತೆ ಅಪಾರ ಕಾರ್ಯಕರ್ತರು ಉಪಸ್ಥಿತರಿದ್ದು ತಮ್ಮ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಆದರೆ ಈ ಸದರಿ ಸಭೆಗೆ ಸ್ಥಳೀಯ ಪತ್ರಕರ್ತರಿಗೆ ಯಾಕೆ ಹವಾನವಿಲ್ಲ ಎಂಬ ಪ್ರಶ್ನೆ ಅಲ್ಲಿ ಎದ್ದು ಕಾಣುತ್ತಿತ್ತು ಕೇವಲ ಸಭೆಯಲ್ಲಿ ಹಿತಾಸಕ್ತಿ ಕಾರ್ಯಕರ್ತರಷ್ಟೇ ಉಪಸ್ಥಿತರಿದ್ದು ಸ್ಥಳೀಯ ಪತ್ರಕರ್ತರನ್ನು ಆಹ್ವಾನಿಸದೆ ಸಭೆಯನ್ನು ನಡೆಸಿದ್ದ ಬಗ್ಗೆ ತಿಳಿದು ಬಂದಿದೆ ಯಮಕನ ಮರಡಿ ಕಾಂಗ್ರೆಸ್ ಪಕ್ಷದಲ್ಲಿ ಬಹಳಷ್ಟು ಗುಂಪುಗಾರಿಕೆಯಾಗಿದ್ದು ಈ ಕುರಿತು ಜನರು ಹಾಗೂ ಅನೇಕ ಕಾರ್ಯಕರ್ತರು ತಮ್ಮ ಸಮಾಧಾನ ವ್ಯಕ್ತಪಡಿಸಿದ್ದಾರೆ. '
ಅಲ್ಲದೆ ಹತ್ತರಿಗಿ ಗ್ರಾಮಗಳಲ್ಲಿ ಬಹಳಷ್ಟು ನೂರಕ್ಕೆ 80ರಷ್ಟು ರೈತಾವಿ ಜನರಿದ್ದು ಅವರಿಗೆ ಯಾವುದೇ ತರದ ಹೊಲಗಳಿಗೆ ಹೋಗಲು ಸಮರ್ಕ ರಸ್ತೆ ಅನುಕೂಲತೆ ಇರುವುದಿಲ್ಲ ಅಲ್ಲದೇ ಕೆಲವೊಂದು ರಸ್ತೆಗಳನ್ನು ಅರ್ಧಮಟ್ಟಕ್ಕೆ ಮಾಡಿ ಕೈಮುಗುದಿದ್ದಾರೆ. ಹೀಗಾಗಿ ಸಭೆಯು ಬಹುತೇಕ ಗೊಂದಲದ ಗೂಡಾಗಿತ್ತು ಸಭೆಯಲ್ಲಿ ಲಾಭಕ್ಕಾಗಿ ರಾಜಕೀಯ ಮಾಡುವ ವ್ಯಕ್ತಿಗಳೆ ಎದ್ದು ಕಾಣುತ್ತಿದ್ದರು.
ಕಾರ್ಯಕರ್ತರು ಅವರೇ ಗುತ್ತಿಗೆದಾರರು ಅವರೇ ಮುಖಂಡರು ಅವರೇ ಮತದಾರರು ಮಾತ್ರ ಕೇವಲ ಎಂಬ ಪ್ರಶ್ನೆ ಇಲ್ಲಿ ಕೇಳಿ ಬರುತ್ತಿತ್ತು ಮತದಾರರ ಮನವೊಲಿಸಬೇಕಾದರೆ ಕಾರ್ಯಕರ್ತರಲ್ಲಿ ಒಗ್ಗಟ್ಟು ಬೇಕು ಆದರೆ ಈ ಕಾರ್ಯಕರ್ತರಲ್ಲಿ ಗುಂಪುಗಾರಿಕೆ ಎದ್ದು ಕಾಣುತ್ತಿದೆ ಇದರಿಂದಾಗಿ ಅಪಾರ ಕಾಂಗ್ರೆಸ್ ಅಭಿಮಾನಿಗಳು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ಕಾರಣ ಕೂಡಲೇ ಶಾಸಕರು ಸಚಿವರು ಆದ ಸತೀಶ್ ಅಣ್ಣ ಜಾರಕಿಹೊಳಿ ಅವರು ಇಂಥ ಕಾರ್ಯಕರ್ತರ ಕುರಿತು ಮುಂದಿನ ಚುನಾವಣೆಗಳ ಬಗ್ಗೆ ಕಾಳಜಿ ವಹಿಸಬೇಕಾಗಿದೆ ಎಂದು ಜನರ ಅನಿಸಿಕೆಯಾಗಿದೆ ಸಭೆಗೆ ಹತ್ತರಿಗೆ ಭಾಗದ ರೈತರು ಸಾರ್ವಜನಿಕರು ಸಭೆಯಲ್ಲಿ ಕಾಣುತ್ತಿರಲಿಲ್ಲ ಇದು ಒಂದು ವಿಷಾದನೀಯ ಸಂಗತಿಯಾಗಿದೆ.