ಯಮಕನಮರಡಿ ಗ್ರಾಮದಲ್ಲಿ ನವೆಂಬರ್ 1ರಂದು ರಾಜಮಾತೆ ಎಮ್ಮಕ್ಕ ಸ್ಮರಣಾರ್ಥ ರಾಜ್ಯೋತ್ಸವ ಆಚರಣೆ
ಯಮಕನಮರಡಿ 28 : ರಾಜ್ಯೋತ್ಸವಕ್ಕೆ ಸ್ವಾಗತ ಮಾಡುತ್ತಿರುವ ರಾಜ್ಯ ಮಾತೆ ಯಮ್ಮಕ್ಕನ ಮಹಾದ್ವಾರ ಯಮಕನ ಮರಡಿ ಗ್ರಾಮದ ರೂವಾರಿಗಳು ಮಹಾದಾನಿಗಳು ಆಗಿದ್ದ ರಾಜ್ಯ ಮಾತೆ ಯಮ್ಮಕ್ಕ ತಾಯಿಯ ದ್ವಾರ ಮುಖಾಂತರ ನವೆಂಬರ್ 1 ರಾಜ್ಯೋತ್ಸವ ಆಚರಣೆಗೆ ಸ್ವಾಗತ ಮಾಡುತ್ತಿರುವ ಮಹಾ ದ್ವಾರ ಸದರಿ ಗ್ರಾಮವು ರಾಜಮಾತೆ ಎಮ್ಮಕ್ಕ ತಾಯಿಯ ತವರೂರು ಆಗಿದ್ದು ಅವರ ಸ್ವಾತಂತ್ರ್ಯ ಹೋರಾಟದ ಪ್ರಥಮ ಮಹಿಳೆಯಾಗಿದ್ದಳೆಂದು ಅನೇಕ ಮೂಲಗಳಿಂದ ತಿಳಿದು ಬರುತ್ತಿದ್ದು ತಾಯಿಯ ನೆನಪಿಗಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಯುವಕ ಮಿತ್ರರು ಹಾಗೂ ಸಾಹಿತಿಗಳು ಮಠಾಧೀಶರು ಗ್ರಾಮಸ್ಥರು ಸೇರಿದಂತೆ ನವಂಬರ್ ಒಂದರಂದು ಕರ್ನಾಟಕ ರಾಜ್ಯೋತ್ಸವ ಸಮಾರಂಭವನ್ನು ಅತ್ತಿವಿಜ್ರ ಮನೆಯಿಂದ ಆಚರಿಸಲಾಗುವುದೆಂದು ಸಂಘಟನೆಯ ಮೂಲಕ ತಿಳಿದು ಬಂದಿದೆ.
ಬಹುದಿನಗಳಿಂದ ರಾಜಮಾತೆ ಯಮ್ಮಕ್ಕ ತಾಯಿಯ ಇತಿಹಾಸವು ಮರೆಯಾಗಿ ಹೋಗಿತ್ತು ಆದರೆ ಇಂದಿನ ದಿನಮಾನಗಳಲ್ಲಿ ಸಂಶೋಧ ಸಂಶೋಧನೆಯ ಮೂಲಕ ಯಮಕನ ಮರಡಿಯ ಇತಿಹಾಸವನ್ನು ಕಾರ್ಯರೂಪಕ್ಕೆ ತರಲು ಯುವಕ ಮಿತ್ರರು ಮುಂದಾಗಿದ್ದು ಹೆಮ್ಮೆಯ ಪಡುವ ಸಂಗತಿಯಾಗಿದೆ ಎಮ್ಮಕ್ಕ ತಾಯಿ ರಾಜಮಾತೆಯವರು ಗ್ರಾಮಕ್ಕೆ ಅಪಾರ ಆಸ್ತಿ ಸಂಪತ್ತನ್ನು ಜಮೀನವನ್ನು ಕೊಂಬಳಿಯನ್ನಾಗಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ ಇವರ ಸ್ವಾತಂತ್ರ್ಯ ಹೋರಾಟವು ಇಂದಿಗೂ ಅಮರವಾಗಿ ಉಳಿಯುವಂತಾಗಿದೆ ಇವರ ಜೊತೆಗೆ ಬೆಳವಡಿ ಮಲ್ಲಮ್ಮ ಕಿತ್ತೂರು ಚೆನ್ನಮ್ಮ ಸೇರಿದಂತೆ ಸಂಗೊಳ್ಳಿ ರಾಯಣ್ಣ ಸಿಂಧೂರ ಲಕ್ಷ್ಮಣ ಮುಂತಾದವರು ಸ್ವಾತಂತ್ರ ಹೋರಾಟಕ್ಕೆ ಅಂದು ಕೈಜೋಡಿಸಿದವರಾಗಿದ್ದರೆಂದು ತಿಳಿದು ಬರುತ್ತಿದೆ.