ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹ: 25 ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ
ರಾಯಬಾಗ 27 : ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಸರ್ಕಾರ ಅನೇಕ ಸೌಲಭ್ಯ ನೀಡುತ್ತಿದ್ದು ಅದರ ಸದುಪಯೋಗ ಪಡೆದುಕೊಳ್ಳುವಂತೆ ಶಾಸಕ ಡಿ.ಎಮ್.ಐಹೊಳೆ ಹೇಳಿದರು. ಮಂಗಳವಾರ ಪಟ್ಟಣದ ಶಾಸಕರ ಗೃಹ ಕಚೇರಿಯಲ್ಲಿ ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮ ಹಾಗೂ ಮರಾಠಾ ಅಭಿವೃದ್ಧಿ ನಿಗಮದಿಂದ ಮಂಜೂರಾದ ಹೊಲಿಗೆ ಯಂತ್ರಗಳನ್ನು 25 ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದ ಅವರು, ಸರ್ಕಾರ ನೀಡಿರುವ ಹೊಲಿಗೆ ಯಂತ್ರಗಳಿಂದ ಮನೆಯಲ್ಲಿ ಸ್ವಯಂ ಉದ್ಯೋಗ ಮಾಡುವುದರಿಂದ ಸ್ವಾವಲಂಬಿಯಾಗಿ ಮಹಿಳೆಯರು ತಮ್ಮ ಕೌಟುಂಬಿಕ ಆರ್ಥಿಕ ಮಟ್ಟ ಬಲಿಷ್ಠಗೊಳ್ಳಲು ಸಹಾಯವಾಗಲಿದೆ ಎಂದರು. ಅಭಿವೃದ್ಧಿ ನಿಗಮದ ಅಧಿಕಾರಿ ರಾಘವೇಂದ್ರ ಬಡಿಗೇರ, ಬಿಜೆಪಿ ರಾಯಬಾಗ ಮಂಡಲ ಅಧ್ಯಕ್ಷ ಪೃಥ್ವಿರಾಜ ಜಾಧವ, ಸದಾಶಿವ ಘೋರೆ್ಡ, ಸದಾನಂದ ಹಳಿಂಗಳಿ, ಅಣ್ಣಾಸಾಹೇಬ ಖೇಮಲಾಪೂರೆ, ಅರುಣ ಐಹೊಳೆ, ಸುಭಾಷ ಕೋರೆ, ಮಹೇಶ ಕರಮಡಿ, ಮಜ್ಜಿದ ಡಾಂಗೆ, ಸುರೇಶ ಕೋಕಾಟೆ, ಮಾರುತಿ ಬಂತೆ, ಕಲ್ಲಪ್ಪ ಸನದಿ, ರಂಜಾನ ಮಕಾನದಾರ ಹಾಗೂ ಫಲಾನುಭವಿಗಳು ಇದ್ದರು.