ಕಡಣಿ 15 ವರ್ಷದ ನಂತರ ಗಟರ್ ಸ್ವಚ್ಛತೆ
.
ಆಲಮೇಲ 27: ತಾಲೂಕಿನ ಕಡಣಿ ಗ್ರಾಮದ ಭೋವಿ ಸಮಾಜದ ಮತ್ತು ಕಂಬರ ಮನೆ ಹತ್ತಿರ ಇರುವ ಘಟರ 15 ವರ್ಷಗಳಿಂದ ಸ್ವಚ್ಛತೆ ಕಾಣದ ಗಟರ ಕಡಣಿ ಗ್ರಾಮದ ನಿಕಟ ಪೂರ್ವ ಅಧ್ಯಕ್ಷರಾದ ಬಸಲಿಂಗಪ್ಪ ಕತ್ತಿ ಸ್ವತಃ ಮುಂದೆ ನಿಂತು ಸ್ವಚ್ಛಗೊಳಿಸುತ್ತಿರುವುದು. ಇಲ್ಲಿನ ಸ್ಥಳೀಯರು ಊಟ ಮಾಡುವಾಗ ಮತ್ತು ಯಾರಾದರೂ ಮನೆಗೆ ನೆಂಟರು ಬಂದಾಗ ಈ ಗಟರದ ವಾಸನೆ ಅತಿ ಹೆಚ್ಚು ಬರ್ತಿರೋದು ಕಂಡು ಬೇಸತ್ತು ಹೋಗಿದ್ದೆವು.
ಹೀಗೆ ಗಟರವನ್ನು ಪದೇ ಪದೇ ಸ್ವಚ್ಛ ಗೊಳಿಸುತ್ತಿರುವುದರಿಂದ ನಾವು ಮತ್ತು ಮಕ್ಕಳಿಗೆ ವೃದ್ಧರಿಗೆ ಮಹಿಳೆಯರಿಗೆ ಸೊಳ್ಳೆಗಳ ಕಚ್ಚುವುದಿಲ ಮಲೇರಿಯಾ ಟೈಪಡ ಡೆಂಗು ಜ್ವರದಿಂದ ನಾವು ಮುಕ್ತ ಇರಬಹುದು. ಹಾಗೂ ಮನುಷ್ಯ ಆರೋಗ್ಯವಾಗಿರಲು ಸಾಧ್ಯವೆಂದು ರಾಜು ವಡ್ಡರ್ ಹೇಳಿದರು. ಇದೇ ಸಂದರ್ಭದಲ್ಲಿ ಪ್ರಭು ಕ್ಷತ್ರಿ. ಭೋಗೇಶ ಕಂಬರ. ಬಸವರಾಜ ವಾಲೀಕರ. ಭೋಗಪ್ಪ ಪಾತ್ರೋಟಿ.
ಸತೀಶ್ ಬಾಸಗಿ. ಕೃಷ್ಣ ಪಾತ್ರೋಟಿ ಸುಮಾರು ವರ್ಷಗಳಿಂದ ಈ ಗಟರ ಸ್ವಚ್ಛತೆ ಕಂಡಿದ್ದಿಲ್ಲ. ಇದರ ಒಳಗಡೆ ಗಾಡಿ ಬರುವುದು ಪ್ರಾಬ್ಲಮ್ ಇರುವುದರಿಂದ ಮತ್ತು ಸ್ವಚ್ಛತೆ ಮಾಡಕಲು ಕಾರ್ಮಿಕರು ನಿರಾಕರಿಸುತ್ತಿದ್ದರು. ಮನೆಗೆ ಹೊಂದಿಕೊಂಡಿರುವ ಬೇವಿನ ಗಿಡವನ್ನು ತೆರವುಗೊಳಿಸಿ ಈಘಟರವನ್ನು ಸ್ವಚ್ಛಗೊಳಿಸಲು ಅನುಕೂಲವಾಯಿತು.