ರಾಷ್ಟ್ರೀಯ

ಚಂಡಮಾರುತ ಅರ್ಣಬ್ ಅಬ್ಬರಕ್ಕೆ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರ ಅಸ್ತವ್ಯಸ್ತ; ಇಂಡಿಗೋದ ಐದು ವಿಮಾನಗಳು ರದ್ದು

ಚಂಡಮಾರುತ ಅರ್ಣಬ್ ಅಬ್ಬರಕ್ಕೆ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರ ಅಸ್ತವ್ಯಸ್ತ; ಇಂಡಿಗೋದ ಐದು ವಿಮಾನಗಳು ರದ್ದು

ಕೋಲ್ಕತ್ತಾ, ಅ. 28 : ತೀವ್ರ ಚಂಡಮಾರುತ ಅರ್ಣಬ್‌ನಿಂದ ಉಂಟಾದ ಪ್ರತಿಕೂಲ ಹವಾಮಾನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ವಿಮಾನ ಸಂಚಾರ ಅಸ್ತವ್ಯಸ್ತಗೊಂಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇಂಡಿಗೋ ಸಂಸ್ಥೆಯ ಐದು ವಿಮಾನಗಳನ್ನು ರದ್ದುಗೊಳಿಸಲಾಗಿದೆ.

ಲಭ್ಯವಾದ ಮಾಹಿತಿಯ ಪ್ರಕಾರ, ಚಂಡಮಾರುತದ ಪರಿಣಾಮವಾಗಿ ಕೋಲ್ಕತ್ತಾಗೆ ಆಗಮಿಸಬೇಕಿದ್ದ ಇಂಡಿಗೋದ ಮೂರು ವಿಮಾನಗಳು ಹಾಗೂ ಕೋಲ್ಕತ್ತಾದಿಂದ ಹೊರಡಬೇಕಿದ್ದ ಎರಡು ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

ರದ್ದುಗೊಂಡ ಆಗಮನದ ವಿಮಾನಗಳಲ್ಲಿ ಭುವನೇಶ್ವರದಿಂದ ಸಂಜೆ 5.10ಕ್ಕೆ, ವಿಜಯವಾಡದಿಂದ ಸಂಜೆ 7.30ಕ್ಕೆ ಹಾಗೂ ಝಾರ್ಸುಗುಡಾದಿಂದ ರಾತ್ರಿ 8.30ಕ್ಕೆ ಕೋಲ್ಕತ್ತಾಗೆ ತಲುಪಬೇಕಿದ್ದ ವಿಮಾನಗಳು ಸೇರಿವೆ.

ಇನ್ನು ಕೋಲ್ಕತ್ತಾದಿಂದ ವಿಜಯವಾಡಕ್ಕೆ ಸಂಜೆ 3.45ಕ್ಕೆ ಹಾಗೂ ಝಾರ್ಸುಗುಡಾಕ್ಕೆ ಸಂಜೆ 5.40ಕ್ಕೆ ಹೊರಡಬೇಕಿದ್ದ ವಿಮಾನಗಳನ್ನೂ ರದ್ದುಗೊಳಿಸಲಾಗಿದೆ.

ಕೋಲ್ಕತ್ತಾ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುವ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ತೆರಳುವ ಮೊದಲು ಸಂಬಂಧಪಟ್ಟ ವಿಮಾನಯಾನ ಸಂಸ್ಥೆಗಳಿಂದ ತಮ್ಮ ವಿಮಾನದ ಹಾರಾಟದ ಸ್ಥಿತಿಗತಿಯನ್ನು ಖಚಿತಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ.

ವಿಶಾಖಪಟ್ಟಣಂ ಮತ್ತು ವಿಜಯವಾಡ ಸೇರಿದಂತೆ ಕರಾವಳಿ ಪ್ರದೇಶಗಳಿಗೆ ತೆರಳುವ ಹಾಗೂ ಅಲ್ಲಿಂದ ಆಗಮಿಸುವ ಪ್ರಯಾಣಿಕರು ವಿಮಾನ ವೇಳಾಪಟ್ಟಿಯಲ್ಲಿ ಬದಲಾವಣೆಯಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಇರಬೇಕು. ಪ್ರತಿಕೂಲ ಹವಾಮಾನದಿಂದ ರಸ್ತೆ ಸಂಚಾರದಲ್ಲಿಯೂ ವಿಳಂಬವಾಗುವ ಸಾಧ್ಯತೆ ಇರುವುದರಿಂದ ಪ್ರಯಾಣಕ್ಕೆ ಹೆಚ್ಚುವರಿ ಸಮಯ ಮೀಸಲಿಡುವಂತೆ ಸೂಚಿಸಲಾಗಿದೆ.


ಸುದ್ದಿ ಓದಿ