ತಾಳಿಕೋಟಿ

ಧರ್ಮಸ್ಥಳ ಟ್ರಸ್ಟ್‌ ದಿಂದ ಆರ್ಥಿಕ ಸಹಾಯ

ಧರ್ಮಸ್ಥಳ ಟ್ರಸ್ಟ್‌ ದಿಂದ ಆರ್ಥಿಕ ಸಹಾಯ


           ತಾಳಿಕೋಟಿ  28: ಪಟ್ಟಣದ ರಾಜವಾಡೆಯಲ್ಲಿರುವ ಪುರಾತನ ದೇವಸ್ಥಾನವಾಗಿರುವ ಶ್ರೀ ಮೂಲಸ್ಥಾನೇಶ್ವರ(ಮಹಾದೇವ) ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ ಯೋಜನೆ ವತಿಯಿಂದ (2,50,000)ಎರಡು ಲಕ್ಷದ ಐವತ್ತು ಸಾವಿರ ರೂಪಾಯಿ ದೇಣಿಗೆಯ ಚೆಕ್ ನ್ನು ದೇವಸ್ಥಾನ ಸಮಿತಿಯ ಅಧ್ಯಕ್ಷರಿಗೆ ಹಸ್ತಾಂತರಿಸಲಾಯಿತು.

          ಬುಧವಾರ ರಾಜವಾಡೆಯ ಶ್ರೀ ಮಹಾದೇವ ದೇವಸ್ಥಾನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಟ್ರಸ್ಟ್‌ ಯೋಜನೆಯ ಜಿಲ್ಲಾ ನಿರ್ದೇಶಕರಾದ ಮೋಹನ್ ನಾಯಕ್ ಅವರು ರೂ. 2.50.000 ಚಕ್ ನ್ನು ಹಸ್ತಾಂತರಿಸಿ ಮಾತನಾಡಿ ನಮ್ಮ ಟ್ರಸ್ಟ್‌ ಅಡಿಯಲ್ಲಿ ಹಲವಾರು ಸೇವಾ ಕಾರ್ಯಗಳನ್ನು ಜಾತಿ ಮತ ಭೇದವಿಲ್ಲದೆ ಮಾಡಲಾಗುತ್ತಿದೆ ಇದಕ್ಕೆ ನಮಗೆ ಶ್ರೀ ಮಂಜುನಾಥನೇ ಪ್ರೇರಣೆಯಾಗಿದ್ದಾನೆ.

           ಇವತ್ತು ಈ ದೇವಸ್ಥಾನದ ಕಾಮಗಾರಿಗಾಗಿ ಎರಡುವರೆ ಲಕ್ಷ ದೇಣಿಗೆಯನ್ನು ಶ್ರೀ ಮಂಜುನಾಥನ ಪ್ರಸಾದದ ರೂಪದಲ್ಲಿ ಕೊಡುತ್ತಿದ್ದೇವೆ, ಧರ್ಮಸ್ಥಳ ಟ್ರಸ್ಟ್‌ ವತಿಯಿಂದ ನಡೆಯುವ ಎಲ್ಲಾ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮೆಲ್ಲರ ಸಹಕಾರ ಇರಲಿ ಎಂದರು. ಕಾರ್ಯಕ್ರಮದಲ್ಲಿ ಸಮಾಜದ ಪ್ರಮುಖರಾದ ಬಾಳು ಬಕ್ಷಿ, ಜನಜಾಗೃತಿ ಸಮಿತಿ ಜಿಲ್ಲಾ ಅಧ್ಯಕ್ಷರಾದ ವಾಸುದೇವ ಹೆಬಸೂರ ಅವರು ಮಾತನಾಡಿ ಧರ್ಮಸ್ಥಳದ ಸೇವಾ ಕಾರ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.              ಅರ್ಚಕರಾದ ಸಂತೋಷ್ ಜೋಶಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಅಪ್ಪಾಸಾಹೇಬಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ವತಿಯಿಂದ ಜಿಲ್ಲಾ ನಿರ್ದೇಶಕ ಮೋಹನ್ ನಾಯಕ್ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.   

            ಕಾರ್ಯಕ್ರಮದಲ್ಲಿ ತಾಲೂಕಾ ಯೋಜನಾಧಿಕಾರಿ ಶಿವಾನಂದ, ವಲಯ ಮೇಲ್ವಿಚಾರಕಿ ಶೋಭಾ, ಜಾಗೃತಿ ಸಮಿತಿಯ ಸುವರ್ಣಾ ಬಿರಾದಾರ, ಡಿ. ವಿ. ಪಾಟೀಲ್, ಅಣ್ಣಾರಾವ್ ಜಗತಾಪ, ಪ್ರಕಾಶ ಸಾಸಬಾಳ, ರವಿ ಮಠಪತಿ ಶಶಿಧರ ಡಿಸಲೆ, ಗುರುಸಂಗಪ್ಪ ಕಶೆಟ್ಟಿ, ರಾಜು ಸಂಡೂರ, ಚಂದ್ರು ಮಠಪತಿ, ರಮೇಶ್ ಮೂಕಿಹಾಳ, ರಾಘು ಮಾನೆ, ಭೀಮನಗೌಡ ಪಾಟೀಲ ಮತ್ತಿತರರು ಇದ್ದರು. 


ಸುದ್ದಿ ಓದಿ